ಮುಂಬಯಿ : ನಿರಂತರ ಎರಡನೇ ದಿನವೂ ಏರುಗತಿಯನ್ನು ಕಾಯ್ದುಕೊಂಡಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು 127.19 ಅಂಕಗಳ ಏರಿಕೆಯೊಂದಿಗೆ 38,672.91 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 53.90 ಅಂಕಗಳ ಮುನ್ನಡೆಯೊಂದಿಗೆ ದಿನದ ವಹಿವಾಟನ್ನು 11,623.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಆಟೋ ಮತ್ತು ಮೆಟಲ್ ಶೇರುಗಳು ಭಾರೀ ಖರೀದಿಯನ್ನು ಕಂಡವು. ಜಾಗತಿಕ ಶೇರು ಪೇಟೆಗಳಲ್ಲಿ ತೋರಿ ಬಂದಿರುವ ಧನಾತ್ಮಕತೆ ಮತ್ತು ವಿದೇಶ ಬಂಡವಾಳದ ನಿರಂತರ ಒಳ ಹರಿವು ಮುಂಬಯಿ ಶೇರು ಪೇಟೆಯಲ್ಲಿ ತೇಜಿಗೆ ಕಾರಣವಾದವು.
ಇಂದಿನ ವಹಿವಾಟಿನಲ್ಲಿ ವೇದಾಂತ ಶೇರು ಶೇ.3.20 ಏರಿಕೆಯನ್ನು ದಾಖಲಿಸಿ ಟಾಪ್ ಗೇನರ್ ಎನಿಸಿಕೊಂಡಿತು. ಇದನ್ನು ಅನುಸರಿಸಿ ಟಾಟಾ ಸ್ಟೀಲ್, ಮಹೀಂದ್ರ, ಟಾಟಾ ಮೋಟರ್, ಒಎನ್‌ಜಿಸಿ, ಹಿಂದುಸ್ಥಾನ್ ಯುನಿಲಿವರ್, ಮಾರುತಿ, ಹೀರೋ ಮೋಟೋ ಕಾರ್ಪ್, ಎಚ್ ಡಿ ಎಫ್ ಸಿ, ಬಜಾಜ್ ಫಿನಾನ್ಸ್, ಎಸ್ ಬಿ ಐ, ಎಚ್ ಡಿ ಎಫ್ ಸಿ ಬ್ಯಾಂಕ್, ಎಚ್‌ಸಿಎಲ್ ಟೆಕ್, ಇನ್‌ಫೋಸಿಸ್ ಶೇರುಗಳು ಶೆ.2.69ರಷ್ಟು ಏರಿದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,803 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,459 ಶೇರುಗಳು ಮುನ್ನಡೆ ಸಾಧಿಸಿದವು; 1,179 ಶೇರುಗಳು ಹಿನ್ನಡೆಗೆ ಗುರಿಯಾದವು; 165 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.