Advertisement
ಬ್ಲೂಚಿಪ್ ಬ್ಯಾಂಕ್ ಷೇರುಗಳು ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಖರೀದಿಯಲ್ಲಿ ಹೂಡಿಕೆದಾರರು ಭಾರೀ ಆಸಕ್ತಿ ವಹಿಸಿದ ಪರಿಣಾಮ, ಮಂಗಳವಾರ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 712.44 ಅಂಕ ಏರಿಕೆ ಕಂಡು, ದಿನಾಂತ್ಯಕ್ಕೆ 78,053ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಈ ಮೂಲಕ ಇತಿಹಾಸದಲ್ಲೇ ಮೊದಲ ಬಾರಿಗೆ ಸೆನ್ಸೆಕ್ಸ್ 78 ಸಾವಿರದ ಗಡಿ ದಾಟಿದೆ. ಜೂ.10ರಂದು ಸೆನ್ಸೆಕ್ಸ್ 77,000ದ ಗಡಿ ದಾಟಿ ದಾಖಲೆ ಬರೆದಿತ್ತು. ಇನ್ನು, ಮಂಗಳವಾರ ನಿಫ್ಟಿ 183 ಅಂಕ ಏರಿಕೆ ಕಂಡು, ಸಾರ್ವಕಾಲಿಕ 23,721ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಮಾರ್ಚ್ಗೆ ಅಂತ್ಯಗೊಂಡ ತ್ತೈಮಾಸಿಕದಲ್ಲಿ ಭಾರತದ ಚಾಲ್ತಿ ಖಾತೆ ಮಿಗತೆ 5.7 ಶತಕೋಟಿ ಡಾಲರ್ ಆಗಿದೆ ಎಂದು ಆರ್ಬಿಐ ಮಾಹಿತಿ ನೀಡಿದ ಬೆನ್ನಲ್ಲೇ ಷೇರುಪೇಟೆ ವಹಿವಾಟು ಚೇತರಿಸಿಕೊಂಡಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ. Advertisement
78,000ದ ಗಡಿ ದಾಟಿ ಸೆನ್ಸೆಕ್ಸ್ ಐತಿಹಾಸಿಕ ದಾಖಲೆ; ಬಾಂಬೆ ಷೇರುಪೇಟೆ ಹೂಡಿಕೆದಾರರಿಗೆ ಖುಷ್
11:36 PM Jun 25, 2024 | |
Advertisement
Udayavani is now on Telegram. Click here to join our channel and stay updated with the latest news.