Advertisement

ಇಂಡೋನೇಷ್ಯಾ ಮಾಸ್ಟರ್: ಸೈನಾ ನೆಹ್ವಾಲ್‌ ಫೈನಲ್‌ಗೆ

06:00 AM Jan 28, 2018 | |

ಜಕಾರ್ತ: ಭಾರತದ ಮಾಜಿ ವಿಶ್ವ ನಂ.1 ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಇಂಡೋನೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್‌ ಕೂಟದಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಈ ಮೂಲಕ ಸೈನಾ ದೀರ್ಘ‌ಕಾಲದ ನಂತರ ಮಹತ್ವದ ಕೂಟವೊಂದರಲ್ಲಿ ಫೈನಲ್‌ ಪ್ರವೇಶಿಸಿದಂತಾಗಿದೆ.

Advertisement

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಸೈನಾ 21-19, 21-19 ರಿಂದ ಥಾಯ್ಲೆಂಡ್‌ನ‌ ರಾಚಾನೋಕ್‌ ಇಂಟನಾನ್‌ ವಿರುದ್ಧ ಗೆಲುವು ಸಾಧಿಸಿದರು. ಎರಡೂ ಗೇಮ್‌ನಲ್ಲಿಯೂ ತೀವ್ರ ಸ್ಪರ್ಧೆ ಇತ್ತು. ಆದರೆ ಅಂತಿಮವಾಗಿ ಸೈನಾ ನೇರ ಸೆಟ್‌ನಲ್ಲಿಯೇ ಪಂದ್ಯವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಮೊದಲ ಗೇಮ್‌ನ ಆರಂಭದಲ್ಲಿ ಸಮಬಲದ ಹೋರಾಟವಿತ್ತು. ಒಮ್ಮೆ ಸೈನಾ ಮುನ್ನಡೆ ಪಡೆದರೆ ಮತ್ತೂಮ್ಮೆ ಥಾಯ್ಲೆಂಡ್‌ ಆಟಗಾರ್ತಿ ಮುನ್ನಡೆ ಪಡೆಯುತ್ತಿದ್ದರು. ಇಬ್ಬರು ಮಾಜಿ ವಿಶ್ವ ನಂ.1 ಆಟಗಾರ್ತಿಯರ ನಡುವೆ ಜಿದ್ದಾಜಿದ್ದಿನ ಹೋರಾಟವೇ ನಡೆಯುತ್ತಿತ್ತು. ಆದರೆ ಸೈನಾ ಚಾಣಾಕ್ಷತನದಿಂದ ಗೇಮ್‌ ವಶಪಡಿಸಿಕೊಂಡು ಮೇಲುಗೈ ಸಾಧಿಸಿದರು. 2ನೇ ಗೇಮ್‌ನಲ್ಲಿಯೂ ತೀವ್ರ ಹೋರಾಟವಿದ್ದರೂ ಸೈನಾ ಗೆಲುವು ಪಡೆಯುವಲ್ಲಿ ಯಶಸ್ವಿಯಾದರು. 2016ರಲ್ಲಿ ಸೈನಾ ಮೊಣಕಾಲಿನ ಗಾಯಕ್ಕೆ ತುತ್ತಾದ ಮೇಲೆ ಇದೇ ಮೊದಲ ಬಾರಿಗೆ ಮಹತ್ವದ ಕೂಟವೊಂದರಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next