ಬದಿಯಡ್ಕ:ಗಡಿನಾಡಿನ ಹಿರಿಯ ಸಾಹಿತಿ, ಭಾಷಾಂತರಕಾರ ಕೇಳು ಮಾಸ್ತರ್ ಅಗಲ್ಪಾಡಿ (70) ಅವರು ಮಾ. 8ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ ಪುತ್ರ ಪೆರಡಾಲದ ನವ ಜೀವನ ಶಾಲೆಯ ಶಿಕ್ಷಕ ಕೃಷ್ಣ ಯಾದವ್ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಮಲಯಾಳಂ ಮತ್ತು ಕನ್ನಡದಲ್ಲಿ ಪಾಂಡಿತ್ಯ ಹೊಂದಿದ್ದ ಅವರು ಕೀರಿಕ್ಕಾಡು ವಿದ್ಯಾವಿನೋದಿನಿ ಕಿ.ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರು. ಬದಿಯಡ್ಕದಲ್ಲಿರುವ ಕರ್ನಾಟಕ ಸರಕಾರದ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಸಂಚಾಲಕರಾಗಿ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಉಪಾಧ್ಯಕ್ಷರಾಗಿ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಕೃತಿಗಳು: ದೈವಾರಾಧನೆ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದ ಅವರ “ಕೇರಳದ ತೈಯ್ಯಂ’ ಕೃತಿ ಎರಡು ಸಂಪುಟಗಳಲ್ಲಿ ಪ್ರಕಟಗೊಂಡಿದೆ. ಅಲ್ಲದೆ ಇನ್ನೂ ಹಲ ವಾರು ಕೃತಿ ಗಳನ್ನು ಬರೆದಿರುವ ಇವರ ಕೆಲವು ಕೃತಿಗಳು ಪ್ರಕ ಟನೆಗೆ ಬಾಕಿಯಿವೆ.
ಪ್ರಶಸ್ತಿ: ಕೇರಳ ರಾಜ್ಯೋದಯ ಜಿಲ್ಲಾ ಪುರಸ್ಕಾರ, ಜಿಲ್ಲಾ ಭಾಷಾ ಸಂಗಮ ಸಮ್ಮಾನ,ಕಲ್ಕೂರ ಗಡಿನಾಡ ಸಾಹಿತ್ಯ ಸಿರಿ ಪುರಸ್ಕಾರ, ಕರ್ನಾಟಕ ಸರಕಾರದ ಜಾನಪದ ಅಕಾಡೆಮಿ ಶ್ರೇಷ್ಠ ಗ್ರಂಥ ಪ್ರಶಸ್ತಿ,”ಕೇರಳದ ತೈಯ್ಯಂ’ಕೃತಿಗೆ ಕರ್ನಾಟಕ ಸರಕಾರದ ಜಾನಪದ ಅಕಾಡೆಮಿಯ ಶ್ರೇಷ್ಠ ಗ್ರಂಥ ಪ್ರಶಸ್ತಿ ಮತ್ತು “ಕಥಕ್ಕಳಿ’ಕೃತಿಗೆ ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪುರಸ್ಕಾರ ಲಭಿಸಿದೆ.