Advertisement

Kalaburagi: ಹಿರಿಯ ಪತ್ರಕರ್ತ, ರಂಗಕರ್ಮಿ ಪಿ.ಎಂ.‌ಮಣ್ಣೂರ್ ಇನ್ನಿಲ್ಲ

09:18 AM Oct 13, 2023 | Team Udayavani |

ಕಲಬುರಗಿ: ಜಿಲ್ಲೆಯ ಹಿರಿಯ ಪತ್ರಕರ್ತ ರಂಗಕರ್ಮಿ, ಹೋರಾಟಗಾರ ಪಿ.ಎಂ.‌ಮಣ್ಣೂರ್ ನಿಧ‌ನರಾಗಿದ್ದಾರೆ.

Advertisement

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಪತ್ರಕರ್ತ ಮಣ್ಣೂರ್ ಅವರು ಬೆಂಗಳೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗಿನ ಜಾವ ಮಣ್ಣೂರ್ ವಿಧಿವಶರಾಗಿದ್ದಾರೆ.

ಸತ್ಯಕಾಮ ಕನ್ನಡ ದಿನ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು.‌ ಜಿಲ್ಲೆಯ ಸಾಹಿತ್ಯ ರಂಗದಲ್ಲೂ ಪತ್ರಕರ್ತ ಪಿ.ಎಂ. ಮಣ್ಣೂರ್ ಗುರುತಿಸಿಕೊಂಡಿದ್ದರು. 371( ಜೆ) ಹೋರಾಟದಲ್ಲಿ ಮಾಜಿ ಸಚಿವ ದಿವಂಗತ ವೈಜನಾಥ್ ಪಾಟೀಲ್ ನೇತೃತ್ವದ ಹೋರಾಟದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು. ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಹಿಯೂ ಪತ್ರಕರ್ತ ಮಣ್ಣೂರ್ ಕೆಲಸ ಮಾಡಿದ್ದರು. ಮೃತರ ಅಂತ್ಯಕ್ರಿಯೆ ನಾಳೆ ಕಲಬುರ್ಗಿಯಲ್ಲಿ ನಡೆಯಲಿದೆ.

ಇದನ್ನೂ ಓದಿ: K.S. Eshwarappa: ಪ್ರಚೋದನಕಾರಿ ಭಾಷಣ; ಕೆ.ಎಸ್.ಈಶ್ವರಪ್ಪ ವಿರುದ್ಧ ಸುಮೋಟೋ ಪ್ರಕರಣ ದಾಖಲು

Advertisement

Udayavani is now on Telegram. Click here to join our channel and stay updated with the latest news.

Next