Advertisement

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ತಿಳವಳ್ಳಿ ಶೆಟ್ರು ಸಿದ್ದರಾಮಪ್ಪ ನಿಧನ

11:48 AM Apr 11, 2023 | Team Udayavani |

ದಾವಣಗೆರೆ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ತಿಳವಳ್ಳಿ ಶೆಟ್ರು ಸಿದ್ದರಾಮಪ್ಪ (98) ಮಂಗಳವಾರ ನಿಧನರಾದರು.

Advertisement

ದಾವಣಗೆರೆಯ ಎಸ್. ಎಸ್. ಬಡಾವಣೆ ಎ ಬ್ಲಾಕ್ ನ ಅಥಣಿ ಕಾಲೇಜು ಪಕ್ಕದಲ್ಲಿ ವಾಸವಾಗಿದ್ದರು. ಮೃತರು ಏಳು ಜನ ಹೆಣ್ಣುಮಕ್ಕಳು, ಇಬ್ಬರು ಗಂಡು ಮಕ್ಕಳು ಮತ್ತು ಅಪಾರ ಬಂಧು ಬಳಗ ಅಗಲಿದ್ದಾರೆ.

ಖ್ಯಾತ ಜವಳಿ ವರ್ತಕ ಬಿ.ಸಿ. ಉಮಾಪತಿ ಇತರರು, ಗಣ್ಯರು ಅಂತಿಮ ದರ್ಶನ ಪಡೆದರು. ಹಿಂದೂ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next