Advertisement

ಕೇರಳ ಪ್ರದೇಶ್ ಕಾಂಗ್ರೆಸ್ ಸಮಿತಿಗೆ ಕೆ. ಸುಧಾಕರನ್ ಸಾರಥ್ಯ..!

05:49 PM Jun 09, 2021 | Team Udayavani |

ಕಣ್ಣೂರ್ : ಕೇರಳ ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಕಣ್ಣೂರ್ ನ ಸಂಸದ ಕೆ. ಸುಧಾಕರನ್ ಕೇರಳ ಪ್ರದೇಶ್ ಕಾಂಗ್ರೆಸ್ ನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

Advertisement

ಕಾಂಗ್ರೆಸ್ ಮಾಜಿ ಅಧ್ಯಕ್ಷ, ವಯನಾಡಿನ ಸಂಸದ ರಾಹುಲ್ ಗಾಂಧಿ, ನೇಮಕಾತಿ ಬಗ್ಗೆ ಕೆ.ಸುಧಾಕರನ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್ ಅವರು ಕೇರಳದಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇರಳದಲ್ಲಿ ಕಾಂಗ್ರೆಸ್‌ ನಲ್ಲಾದ ‘ಎ ಮತ್ತು ಐ’ ಗುಂಪುಗಳ ವಿರೋಧವನ್ನು ಮೀರಿ, ಕೆ ಸುಧಾಕರನ್ ಅವರನ್ನು ಕೆಪಿಸಿಸಿ(ಕೇರಳ ಪ್ರದೇಶ್ ಕಾಂಗ್ರೆಸ್ ಸಮಿತಿ) ಅಧ್ಯಕ್ಷರನ್ನಾಗಿ ಮಾಡಲು ಹೈಕಮಾಂಡ್ ನಿರ್ಧರಿಸಿದೆ.

ಇದನ್ನೂ ಓದಿ :   ಬಿಜೆಪಿ ಸರ್ಕಾರದ ಪೆಟ್ರೋಲ್ ಪಿಕ್ ಪಾಕೆಟ್ ಖಂಡಿಸಿ ‘100 ನಾಟೌಟ್’ ಆಂದೋಲನ: ಡಿ.ಕೆ ಶಿವಕುಮಾರ್

ಈ ಕುರಿತಾಗಿ ಈ ಹಿಂದೆ ಕೇರಳದ ಉಸ್ತುವಾರಿ ಹೊಂದಿರುವ ತಾರಿಕ್ ಅನ್ವರ್ ಅವರು ಕಾಂಗ್ರೆಸ್ ಶಾಸಕರು ಮತ್ತು ಸಂಸದರ ಅಭಿಪ್ರಾಯಗಳನ್ನು ಕೋರಿದ್ದರು.

Advertisement

ಕೇರಳ ಕಾಂಗ್ರೆಸ್ ನ ಹಿರಿಯ ನಾಯಕರಾದ ಉಮ್ಮನ್ ಚಾಂಡಿ, ರಮೇಶ್ ಚೆನ್ನಿಥಾಲಾ ಮತ್ತು ಮುಲ್ಲಪ್ಪಲ್ಲಿ ರಾಮಚಂದ್ರನ್ ಸೇರಿ ಹಲವರನ್ನು ಕಾಂಗ್ರೆಸ್ ಹೈಕಮಾಂಡ್ ಕೈ ಬಿಟ್ಟ್ಇದೆ ಎಂದು ಕೇರಳ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಇನ್ನು, ಇತರ ಕೆಲವು ಕಾಂಗ್ರೆಸ್ ಮುಖಂಡರು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೆ.ಮುರಲೀಧರನ್, ಪಿ.ಟಿ ಥಾಮಸ್ ಅವರ ಹೆಸರನ್ನು ಸೂಚಿಸಿದರು.

ಸದ್ಯ, ಹಾಲಿ ಅಧ್ಯಕ್ಷ ಮುಲ್ಲಪ್ಪಲ್ಲಿ ರಾಮಚಂದ್ರನ್ ಅವರ ಸ್ಥಾನಕ್ಕೆ ಕೆ ಸುಧಾಕರನ್ ಅವರನ್ನು ಕಾಂಗ್ರಸ್  ಹೈಕಮಾಂಡ್ ನೇಮಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕೆ ಸುಧಾಕರನ್, “ಪಕ್ಷವು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೇನೆ ಮತ್ತು ಕೇರಳದಲ್ಲಿ ಪಕ್ಷ ಸಂಘಟನೆಗಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.

“ಕಾಂಗ್ರೆಸ್ ಕೇರಳದಲ್ಲಿ ಮತ್ತೆ ತನ್ನ ಪ್ರಾಬಲ್ಯವನ್ನು ಕಂಡುಕೊಳ್ಳುತ್ತದೆ ಮತ್ತು ಪಕ್ಷವು ಗುಂಪು ರಾಜಕೀಯಕ್ಕಿಂತ ಹೊರತಾಗಿರುತ್ತದೆ. ನಾನು ಪಕ್ಷಕ್ಕಾಗಿ ದಣಿವರಿಯಿಲ್ಲದೆ ಕೆಲಸ ಮಾಡುತ್ತೇನೆ ಮತ್ತು ಅರ್ಹ ಮತ್ತು ಪ್ರತಿಭಾವಂತರನ್ನು ನಾಯಕತ್ವಕ್ಕೆ ತರಲು ಪ್ರಯತ್ನಿಸುತ್ತೇನೆ” ಎಂದು ಸುಧಾಕರನ್ ಹೇಳಿದ್ದಾರೆ.

ಸುಧಾಕರನ್ ರಾಜಕೀಯ ನಡೆ :

ಕೆ ಸುಧಾಕರನ್ ಅವರು 1967 ರಲ್ಲಿ ಕೆಎಸ್‌ಯು ತಾಲ್ಲೂಕು ಅಧ್ಯಕ್ಷರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು ಮತ್ತು ನಂತರ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಸಂಸ್ಥೆ) ಮತ್ತು ಜನತಾ ಪಕ್ಷಕ್ಕೆ ಸೇರಿದರು. ಆದರೆ ಅವರು 1984 ರಲ್ಲಿ ಕಾಂಗ್ರೆಸ್ಗೆ ಮರಳಿದರು.

2001 ರಲ್ಲಿ ಕೆ ಸುಧಾಕರನ್ ಅವರು ಮಾಜಿ ಮುಖ್ಯಮಂತ್ರಿ ಎ.ಕೆ.ಆಂಟನಿ ಅವರ ಸಂಪುಟದಲ್ಲಿ ಅರಣ್ಯ ಮತ್ತು ಕ್ರೀಡಾ ಸಚಿವರಾದರು. 2009 ರಲ್ಲಿ ಕಣ್ಣೂರು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಮೊದಲ ಬಾರಿಗೆ ಸ್ಪರ್ಧಿಸಿ ಜಯಗಳಿಸಿದರು.

ಕೆ ಸುಧಾಕರನ್ ಅವರು 2014 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮತ್ತು 2016 ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿದರೂ ಸೋತರು. 2019 ರಲ್ಲಿ ಕಣ್ಣೂರು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು.

ಕೇರಳ 2021 ರ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಅಧಿಕಾರ ಮರಳಿದ ನಂತರ, ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಬೇಡಿಕೆ ಬಲವಾಯಿತು.

ವಿ.ಡಿ.ಸತೀಸನ್ ಅವರನ್ನು ವಿರೋಧ ಪಕ್ಷದ ನಾಯಕರಾಗಿ ಮತ್ತು ಕೆ.ಪಿಸಿಸಿ ಅಧ್ಯಕ್ಷರಾಗಿ ಕೆ ಸುಧಾಕರನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿದೆ.

ಇದನ್ನೂ ಓದಿ : ಮುಂದಿನ ವಾರ ದಿನೇಶ್ ಗುಂಡೂರಾವ್ ಗೋವಾ ಭೇಟಿ : ಪಕ್ಷ ಸಂಘಟನೆ ಬಗ್ಗೆ ಸಭೆ

Advertisement

Udayavani is now on Telegram. Click here to join our channel and stay updated with the latest news.

Next