Advertisement

ಡಿಕೆಶಿಯಿಂದ “ಶತ್ರು ಸಂಹಾರ ಯಾಗ’

06:45 AM Jun 04, 2018 | |

ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿ ಬಯಸಿದ ಖಾತೆ ಸಿಗದೆ
ಬೇಸರಗೊಂಡಿದ್ದಾರೆ ಎಂದು ಹೇಳಲಾದ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ತಮಿಳುನಾಡಿನ ತಿರವಳ್ಳೂರು ಬಳಿಯ ವಿಷ್ಣು ದೇವಾಲಯದಲ್ಲಿ “ಶತ್ರು ಸಂಹಾರ ಯಾಗ’ ಮಾಡಿದ್ದಾರೆ. 

Advertisement

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿ ಸಂಪುಟ ವಿಸ್ತರಣೆಯ ಹಗ್ಗ ಜಗ್ಗಾಟ ನಡೆದಿರುವ ಬೆನ್ನಲ್ಲೇ ಡಿ.ಕೆ.ಶಿವಕುಮಾರ್‌ ಅವರು ಕುಟುಂಬ ಸಮೇತ ವಿಷ್ಣು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಹೋಮ-ಹವನದಲ್ಲಿ ಪಾಲ್ಗೊಂಡಿರುವುದು ಕುತೂಹಲ ಮೂಡಿಸಿದೆ.

ಶನಿವಾರ ಕುಟುಂಬ ಸಮೇತ ದೇವಾಲಯಕ್ಕೆ ತೆರಳಿದ ಅವರು, ಹಿರಿಯ ಜ್ಯೋತಿಷಿಗಳ ಮಂದಾಳತ್ವದಲ್ಲಿ ಶತ್ರು ಸಂಹಾರ ಯಾಗ ಮಾಡಿಸಿದರು.

ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಯಾರೊಂದಿಗೂ ಮಾತನಾಡದೆ ಪೂಜೆ ಕಾರ್ಯದಲ್ಲಿ ಮಗ್ನರಾಗಿದ್ದರು
ಎಂದು ಹೇಳಲಾಗಿದೆ. ಸಂಪುಟ ವಿಸ್ತರಣೆಯಲ್ಲಿ ಡಿ.ಕೆ. ಶಿವಕುಮಾರ್‌ ಇಂಧನ ಖಾತೆ ಬಯಸಿದ್ದರು. ಆದರೆ, ಆ
ಖಾತೆ ಜೆಡಿಎಸ್‌ ಪಾಲಾಯಿತು. ಸಮ್ಮಿಶ್ರ ಸರ್ಕಾರ ರಚನೆ ವಿಚಾರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ನಡುವೆ ನಡೆದ
ಪ್ರಮುಖ ಮಾತುಕತೆ ಸಂದರ್ಭದಲ್ಲೂ ಡಿ.ಕೆ.ಶಿವಕುಮಾರ್‌ ಅವರನ್ನು ದೂರ ಇಡಲಾಗಿತ್ತು. ಇದರಿಂದ ಅವರು ಬೇಸರಗೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next