Advertisement

ಹಿರಿಯರ ಆಶ್ರಯದಲ್ಲಿ ನೆಮ್ಮದಿ ಜೀವನ ಕಾಣಿರಿ

04:29 PM Oct 03, 2021 | Team Udayavani |

ಚಿಕ್ಕಬಳ್ಳಾಪುರ: ತಂದೆ, ತಾಯಿ, ಅಜ್ಜಿ, ತಾತ ಹೀಗೆ ಹಿರಿಯರನ್ನು ಒಳಗೊಂಡ ತುಂಬು ಕುಟುಂಬದಲ್ಲಿ ಮಾತ್ರ ನೆಮ್ಮದಿ ಜೀವನ ಕಾಣಲು ಸಾಧ್ಯ ಎಂದು ಜಿಲ್ಲಾ  ಧಿಕಾರಿ ಆರ್‌.ಲತಾ ತಿಳಿಸಿದರು.

Advertisement

ನಗರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು ಹಿರಿಯ ನಾಗರಿಕರೊಂದಿಗೆ ಸ್ನೇಹ ಎಂಬ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿರಿ:- ಅಬ್ಬಾ ಬದುಕಿದೆ ಬಡ ಜೀವ! ಆಹಾರ ಹುಡುಕಲು ಹೋಗಿ ಇಕ್ಕಟ್ಟಿಗೆ ಸಿಲುಕಿದ ಶ್ವಾನದ ಕಥೆ

ಹಿರಿಯ ನಾಗರಿಕರ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸಿಮಿತವಾಗಬಾರದು, ಪ್ರತಿ ದಿನವೂ ಹಿರಿಯರನ್ನು ಗೌರವಯುತವಾಗಿ ಪಾಲನೆ, ಪೋಷಣೆ ಮಾಡುವ ಮೂಲಕ ಆಚರಿಸಬೇಕು. ಇಂದಿನ ದಿನಗಳಲ್ಲಿ ತಂದೆ, ತಾಯಿ, ಅಜ್ಜಿ, ತಾತರಿಂದ ದೂರವಿದ್ದು, ವಾಸ ಮಾಡುವಂತಹ ವಿಭಕ್ತ ಕುಟುಂಬಗಳನ್ನೇ ನಾವಿಂದು ಹೆಚ್ಚಾಗಿ ಕಾಣುತ್ತಿದ್ದೇವೆ. ಈ ರೀತಿ ದೂರ ವಾಸ ವಿರುವುದರಿಂದ ಹಿರಿಯ ನಾಗರಿಕರಿಗಿಂತ ಕಿರಿಯ ಪೀಳಿಗೆಯವರ ಜೀವನದಲ್ಲಿ ದೊಡ್ಡ ನಷ್ಟ ಉಂಟಾಗಲಿದೆ ಎಂದು ಹೇಳಿದರು.

ಲಿಖೀತ ಅರ್ಜಿ ಕೊಟ್ಟರೆ ಆಸ್ತಿ ವಾಪಸ್‌: ಮಕ್ಕಳು ತಂದೆ, ತಾಯಿಯನ್ನು ಸರಿಯಾಗಿ ಪಾಲನೆ ಪೋಷಣೆ ಮಾಡದೆ ನಿರ್ಲಕ್ಷವಹಿಸಿದರೆ, ಅಂತಹ ಹಿರಿಯ ನಾಗರಿಕರು ಉಪ ವಿಭಾಗಾ ಧಿಕಾರಿಗೆ ಲಿಖೀತ ದೂರು ನೀಡಿದರೆ ತಮ್ಮ ಮಕ್ಕಳಿಗೆ ನೋಂದಣಿ ಮಾಡಿಕೊಟ್ಟಿರುವ ಹಿಂದಿನ ಆಸ್ತಿ ಪತ್ರಗಳು ರದ್ದಾಗಿ ತಮ್ಮ ಹೆಸರಿಗೆ ಆಸ್ತಿಯನ್ನು ಹಿಂಪಡೆಯಲು 2007ರ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆಯನ್ವಯ ಅವಕಾಶವಿರುತ್ತದೆ ಎಂದು ಹೇಳಿದರು.

Advertisement

ಅಲ್ಲದೆ, ಪ್ರತಿ ತಿಂಗಳ ಜೀವನ ನಿರ್ವಹಣೆಗಾಗಿ ಜೀವನಾಂಶವನ್ನು ಪಡೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಇಂತಹ ಪ್ರಕರಣಗಳು ದಿನಗಳ ಒಳಗೆ ತ್ವರಿತವಾಗಿ ವಿಲೇವಾಗಲಿವೆ, ಇದಕ್ಕೆ ಯಾವುದೇ ವಕೀಲರ ವಕಾಲತ್ತು ಸಹ ಅವಶ್ಯಕತೆ ಇರುವುದಿಲ್ಲ. ಈ ರೀತಿ ಕಾನೂನಾತ್ಮಕ ಹೋರಾಟ ಮಾಡುವಂತಹ ಪರಿಸ್ಥಿತಿ ಯಾರಿಗೂ ಕೂಡ ಬರದಿರಲಿ ಎಂದು ತಿಳಿಸಿದರು.

ಒಂಟಿತನ ಕಾಡದಂತೆ ನೋಡಿಕೊಳ್ಳಿ: ರಾಜ್ಯ ಮಾವು ಮತ್ತು ಮಾರುಕಟೆ ಅಭಿವೃದ್ಧಿ ನಿಗಮದ ಅಧ್ಯಕ್ಷಕೆ.ವಿ.ನಾಗರಾಜು ಮಾನತಾಡಿ, ನಮ್ಮ ಹಿರಿಯರು  ಬಾಲ್ಯದಲ್ಲಿ ನಮ್ಮನ್ನು ಸಲಹಿ ಬೆಳೆಸಿದ ರೀತಿ ಇಳಿವಯಸ್ಸಿನಲ್ಲಿ ನಾವು ಅವರನ್ನು ಪೋಷಣೆ, ಪಾಲನೆ ಮಾಡಬೇಕು. ಅವರು ಸಮಾಜದಲ್ಲಿ ಜೀವನ ಮಾಡಲು ನಮ್ಮ ನಿಜವಾದ ಮಾರ್ಗದರ್ಶಕರಾಗಿದ್ದಾರೆ. ಅವರ ಆರೋಗ್ಯ ಅವರ ಕಷ್ಟ ಸುಖಗಳನ್ನು ವಿಚಾರಿಸಿಕೊಂಡು ಹಿರಿಯರಿಗೆ ಒಂಟಿತನ ಕಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಹೇಳಿದರು.

ಹಿರಿಯರ ರಕ್ಷಣೆಗೆ ಬದ್ಧ: ಎಸ್ಪಿ ಜಿ.ಕೆ.ಮಿಥುನ್‌ ಕುಮಾರ್‌ ಮಾತನಾಡಿ, ಹಿರಿಯರನ್ನು ನಿರ್ಲಕ್ಷಿಸುವ, ಶೋಷಿಸುವ ಕಿರಿಯರನ್ನು ದಂಡಿಸಿ, ಹಿರಿಯ ನಾಗರಿಕರನ್ನು ಸಂಪೂರ್ಣ ರಕ್ಷಣೆ ನೀಡಲು ಪೊಲೀಸ್‌ ಇಲಾಖೆ ಯಾವಾಗಲೂ ಬದ್ಧವಾಗಿದೆ ಎಂದು ತಿಳಿಸಿ, ಹಿರಿಯ ನಾಗರಿಕರ ಬಗ್ಗೆ ಗೌರವ ತೋರದ ಯುವ ಜನತೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಧಕರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ವರ್ಷದ ಶ್ರೇಷ್ಠ ಕೃಷಿಕ – ಸಿ.ಎನ್‌.ಪಿಳ್ಳವೆಂಕಟಸ್ವಾಮಿ, ವರ್ಷದ ಮೃದಂಗ ಪ್ರವೀಣ – ಎಚ್‌.ಎಸ್‌.ಗೋಪಾಲ, ವರ್ಷದ ಜನಪದ ಕಲಾವಿದ ಗೊರವರ ಕುಣಿತದ – ಆಂಜಿನಪ್ಪ, ವರ್ಷದ ಕನ್ನಡ ಸಾಹಿತಿ- ವಲಿಭಾಷ, ಹೈನುಗಾರಿಕೆ ಸಾಧಕಿ- ವರ್ಷದ ರತ್ನಮ್ಮ, ವರ್ಷದ ರಂಗಭೂಮಿ ಕಲಾವಿದ-ಬಿ.ಆರ್‌.ಗೋಪಾಲ್‌, ವರ್ಷದ ಸಮಾಜ ಸೇವಕ- ವಿ.ಮುನಿರಾಜು ಅವರನ್ನು ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು.

ಪಿಂಚಣಿ ಆದೇಶ ಪತ್ರ ವಿತರಣೆ: ಸಾಮಾಜಿಕ ಭದ್ರತಾ ಯೋಜನೆಯಡಿ ಗೌರಮ್ಮ, ಸರೋಜ, ಸಣ್ಣಮ್ಮ ಹಾಗೂ ಇನ್ನಿತರರಿಗೆ ಪಿಂಚಣಿಗೆ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು. ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕ್ರೀಡಾ ಸ್ಪರ್ಧೆಗಳಲ್ಲಿನ ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಆಶಾಕಿರಣ, ಅಂದ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಮೃದಂಗ, ಹಾರ್ಮೋನಿಯಂ, ಇನ್ನಿತರ ಸಂಗೀತ ವಾದ್ಯಗಳನ್ನು ನುಡಿಸಿಕೊಂಡು ನಾಡಗೀತೆಯನ್ನು ಸೆಳೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಶ್ವತ್ಥಮ್ಮ, ತಹಶೀಲ್ದಾರ್‌ ಗಣಪತಿಶಾಸ್ತ್ರಿ, ಹಿರಿಯ ನಾಗರಿಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next