Advertisement
ಮಣಿಪಾಲ: ಫ್ಯಾಮಿಲಿ ಶಾಪಿಂಗ್ ! ಈ ಪದವೇ ಒಂದು ಬಗೆಯ ಹೊಸ ಸಂಭ್ರಮವನ್ನು ತುಂಬುತ್ತದೆ. ಅಷ್ಟೇ ಅಲ್ಲ ; ನಮ್ಮ ಮನೆಗೆ ಬರುವ ಪ್ರತಿ ಹೊಸ ಸದಸ್ಯನ ಮೇಲೂ ಇಡೀ ಕುಟುಂಬದ ಒಪ್ಪಿಗೆಯ ಮೊಹರು ಇರುತ್ತದೆ. ಅಂದರೆ ಖುಷಿಯನ್ನು ತುಂಬಿಕೊಂಡು ಬಂದಂತೆಯೇ !
ಈ ಫ್ಯಾಮಿಲಿ ಶಾಪಿಂಗ್ ಎನ್ನುವ ಪರಿ ಕಲ್ಪನೆ ಇರುವುದು ನಗರಗಳಲ್ಲಿನ, ಆಧುನಿಕ ಬದುಕಿನ ಏಕತಾನತೆಯನ್ನು ನಿವಾರಿಸಿ ಸಂಭ್ರಮ ತುಂಬಿಕೊಳ್ಳುವುದಕ್ಕಾಗಿಯೇ. ಹಾಗಾ ಗಿಯೇ ಹಿಂದೆಯೂ ಹಬ್ಬದಿಂದ ಹಿಡಿದು, ಯಾವುದೇ ಶುಭ ಕಾರ್ಯಕ್ರಮವಿದ್ದರೂ ಮನೆ ಮಂದಿಯನ್ನೆಲ್ಲ ಪೇಟೆಗೆ ಕರೆದುಕೊಂಡು ಹೋಗುತ್ತಿದ್ದ ಪದ್ಧತಿ ಇದ್ದದ್ದು. ನಮ್ಮ ಮನೆಗೆ ಬರುವ ಪ್ರತಿಯೊಂದೂ ವಸ್ತುವೂ ಹೊಸ ಸದಸ್ಯನಿದ್ದಂತೆಯೇ. ಏಕೆಂದರೆ, ಸದಸ್ಯನೊಂದಿಗೆ ಅಥವಾ ಅದನ್ನು ಸಾಕಷ್ಟು ಯೋಚಿಸಿಯೇ ತಂದಿ ರುತ್ತೇವೆ, ನಿತ್ಯವೂ ಒಟ್ಟಾಗಿ ಜೀವಿಸುತ್ತೇವೆ. ಇದೂ ನಿಜ.
Related Articles
ಸಹ ಕುಟುಂಬವೊಂದು ಒಟ್ಟಾಗಿ ಮೌಲ್ಯಯುತ ವಾಗಿ ಸಮಯವನ್ನು ಕಳೆಯಲು, ಕೂಡಲು, ಬೆರೆಯಲು ಇರುವ ಅವಕಾಶ.
Advertisement
ನನಗೊಬ್ಬನಿಗಷ್ಟೇ ಅಲ್ಲ, ನಮ್ಮೆಲ್ಲರಿಗೂ !ಈ ಭಾವ ನಮ್ಮೊಳಗೆ ತುಂಬುವುದು ಫ್ಯಾಮಿಲಿ ಶಾಪಿಂಗ್. ಒಬ್ಬೊಬ್ಬರೇ ಶಾಪಿಂಗ್ಗೆ ಹೋದಾಗ ನಾವು ಯೋಚಿಸುವುದು ನಮ್ಮ ಬಗ್ಗೆ ಮಾತ್ರ. ಆದರೆ ಫ್ಯಾಮಿಲಿ ಶಾಪಿಂಗ್ ಹಾಗಲ್ಲ. ಎಲ್ಲರ ಬಗ್ಗೆಯೂ ಯೋಚಿಸುವುದನ್ನು ಕಲಿಸುತ್ತದೆ. ನಮ್ಮ ಆದಾಯವನ್ನು ಎಲ್ಲರ ಅಗತ್ಯಕ್ಕೂ ಹಂಚುವುದನ್ನು ಮತ್ತು ಹಂಚುವ ಅನಿವಾರ್ಯತೆಯನ್ನು ಹೇಳಿಕೊಡುತ್ತದೆ. ಖುಷಿ ಎಂದರೆ ಅದೇ ತಾನೇ, ಹಂಚಿಕೊಂಡಾಗಲಲ್ಲವೇ. ಅದೇ ಫ್ಯಾಮಿಲಿ ಶಾಪಿಂಗ್ನ ಮೂಲ ಮಂತ್ರ. ನೀವೂ ಫ್ಯಾಮಿಲಿ ಶಾಪಿಂಗ್ ಮಾಡಿ, ಫೋಟೋ ಕಳಿಸಿ
ಮೊನ್ನೆಯಷ್ಟೇ ದಸರಾ ಮುಗಿಯಿತು, ಈಗ ದೀಪಾವಳಿ ಬಂದಿದೆ. ಎಲ್ಲ ಉದ್ಯಮ ವಲಯ ಗಳೂ, ಕಂಪೆನಿಗಳೂ ಸಾಕಷ್ಟು ರಿಯಾಯಿತಿ ಘೋಷಿಸಿವೆ. ದಿನಕ್ಕೊಂದು ಆಫರ್‌ಗಳೂ ಬರು ತ್ತಿವೆ. ನೀವೂ ನಿಮ್ಮ ಕುಟುಂಬ ಸಮೇತ ಶಾಪಿಂಗ್ಗೆ ಹೊರಡಿ. ನಿಮ್ಮ ಕನಸಿನ ಉತ್ಪನ್ನ ಸದಸ್ಯವನ್ನು ಆಯ್ಕೆ ಮಾಡಿ. ಅದರ ಜತೆಗೆ ಇಡೀ ಕುಟುಂಬ ಫೋಟೋ ತೆಗೆಸಿಕೊಂಡು ನಮಗೆ ಕಳುಹಿಸಿ. ನಿಮ್ಮ ಬಿಲ್‌ನ ಫೊಟೋ ಪ್ರತಿ ಅದರ ಜತೆಗೆ ಇರಲಿ. ನಿಮ್ಮ ಹೆಸರು, ಊರು, ಖರೀದಿಸಿದ ಉತ್ಪನ್ನದ ಹೆಸರು, ತೆಗೆದುಕೊಂಡ ಮಳಿಗೆ, ಸ್ಥಳದ ಹೆಸರನ್ನು ನಮೂದಿಸಲು ಮರೆಯಬೇಡಿ. ಅದರ ಜತೆಗೆ, ನಿಮ್ಮ ಕನಸು ಈಡೇರಿದ್ದರ ಬಗ್ಗೆ ಮತ್ತು ಅದರ ಮಹತ್ವದ ಬಗ್ಗೆ ಎರಡು ಸಾಲು ಬರೆಯಿರಿ. ನಾವು ಆಯ್ದವುಗಳನ್ನು ಪ್ರಕಟಿಸುತ್ತೇವೆ. ಅಕ್ಟೋಬರ್ 29ರ ಬಳಿಕ ಬಂದ ಫೋಟೋಗಳನ್ನು ಪರಿಗಣಿಸುವುದಿಲ್ಲ. ನಮ್ಮ ಗ್ಯಾಲರಿಯ ಪ್ರೇಮ್ನಲ್ಲಿ ನಿಮ್ಮ ಫ್ಯಾಮಿಲಿ ಶಾಪಿಂಗ್ನ ಫೋಟೋ !