ಮುಂಬೈ: ಬೀದಿನಾಯಿಗಳ ನಿಯಂತ್ರಣವಾಗಬೇಕಾದರೆ,ಅವುಗಳನ್ನು ಅಸ್ಸಾಂಗ ಕಳುಹಿಸಬೇಕು. ಅಲ್ಲಿನ ಜನರು ಅವುಗಳನ್ನು ಉತ್ಸಾಹದಿಂದ ತಿನ್ನುತ್ತಾರೆ ಎಂದು ಮಹಾರಾಷ್ಟ್ರದ ಶಾಸಕ ಬಚ್ಚು ಕಾಡು ವಿಲಕ್ಷಣ ಸಲಹೆ ನೀಡಿದ್ದು, ಬಚ್ಚು ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಪ್ರಹಾರ ಜನಶಕ್ತಿ ಪಕ್ಷದ ಮುಖ್ಯಸ್ಥರಾಗಿರುವ ಬಚು cಕಾಡು, ರಾಜ್ಯದಲ್ಲಿ ಬೀದಿ ನಾಯಿಗಳಿಂದ ಎದುರಾಗುವ ಸಮಸ್ಯೆಗಳ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಸ್ಸಾಂನಲ್ಲಿ ಶ್ವಾನಗಳಿಗೆ ಬಹಳ ಬೇಡಿಕೆ ಇದೆ.
ಅವುಗಳಿಗೆ 8 ಸಾವಿರ ರೂ.ಗಳವರೆಗೂ ಬೆಲೆ ಇದೆ.ರಾಜ್ಯದಲ್ಲಿ ಬೀದಿ ನಾಯಿಗಳ ನಿಯಂತ್ರಣವಾಗಬೇಕಾದರೆ ಅವುಗಳನ್ನ ಮೊದಲು ಅಸ್ಸಾಂಗೆ ಕಳುಹಿಸಬೇಕು ಎಂದಿದ್ದಾರೆ.
ಇಂಥ ಅಮಾನವೀಯ ಸಲಹೆ ನೀಡಿದ್ದಕ್ಕಾಗಿ ಪ್ರಾಣಿದಯಾ ಸಂಘಗಳು ಬಚ್ಚು ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿವೆ.