Advertisement
ಆ. 22ರಂದು ದೇಶಾದ್ಯಂತ ರಕ್ಷಾ ಬಂಧನ ಆಚರಿಲಾಗುತ್ತಿದೆ. ಕೊರೊನಾ ಸೋಂಕಿನ ಭಯದ ಹಿನ್ನೆಲೆಯಲ್ಲಿ ಜನರು ಸುರಕ್ಷಿತವಾಗಿ ರಾಖೀ ಖರೀದಿಸಲು ಮತ್ತು ಅದನ್ನು ಅವರಿಗೆ ತಲುಪಿಸಲು ಅಂಚೆ ಇಲಾಖೆ ಆನ್‌ಲೈನ್ www. karnatakapost.gov.in ರಾಖೀ ಪೋಸ್ಟ್ ಆರಂಭಿಸಿದೆ. ಮನೆಯಲ್ಲಿ ಕುಳಿತು ರಾಜ್ಯದೊಳಗಿನ ಗ್ರಾಹಕರು ಭಾರತದ ಯಾವುದೇ ಪ್ರದೇಶಕ್ಕೂ ಕೂಡ ರಾಖೀಯನ್ನು ತ್ವರಿತ ಅಂಚೆ (ಸ್ಪೀಡ್ ಪೋಸ್ಟ್) ಮುಖಾಂತರ ಸುಲಭವಾಗಿ ಕಳುಹಿಸಬಹುದು.
Related Articles
Advertisement
www.karnatakapost.gov.in ನಲ್ಲಿ ಲಾಗಿನ್ ಆಗಿ ಕಳುಹಿಸುವವರ ಪೂರ್ಣ ವಿವರಗಳನ್ನು ನೀಡಿ ಬಳಿಕ, ಇಷ್ಟ ರಾಖಿ ಹಾಗೂ ಸಂದೇಶವನ್ನು ಆಯ್ಕೆ ಮಾಡಿ ಸಹೋದರನ ವಿಳಾಸವನ್ನು ನೀಡಬೇಕಾಗಿದೆ. ರಾಖೀ ಬುಕ್ ಮಾಡಲು ಆ.16 ಕೊನೆಯ ದಿನವಾಗಿದೆ. ಆ.22ರೊಳಗೆ ಸಹೋದರರಿಗೆ ರಾಖಿ ತಲುಪಲಿದೆ. ನೆಟ್ ಬ್ಯಾಂಕಿಂಗ್, ಗೂಗಲ್ ಪೇ, ಭೀಮ್ ಆ್ಯಪ್, ಫೋನ್ ಪೇ ಇತರ ನೆಟ್ ಪೇಮೆಂಟ್ ವಿಧಾನದಲ್ಲಿ ಶುಲ್ಕ 100 ರೂ. ಪಾವತಿಸಬಹುದಾಗಿದೆ.
ಮೂರು ಆಯ್ಕೆಗಳು! :
ಇಲಾಖೆಯು ವೈಬ್‌ಸೈಟ್‌ನಲ್ಲಿ ರಾಖಿ ಜತೆಗೆ ಮೂರು ರೀತಿಯ ಮುದ್ರಿತ ಸಂದೇಶ ಕಳುಹಿಸಲು ಅವಕಾಶ ನೀಡಿದೆ. ಒಂದನೇ ಆಯ್ಕೆಯಲ್ಲಿ ಗ್ರಾಹಕರು ತಮಗೆ ಬೇಕಾದ ಸಂದೇಶ ಬರೆಯಬಹುದು. ಎರಡನೇ ಆಯ್ಕೆಯಲ್ಲಿ ಫೋಟೋ ತೆಗೆದು ಕಳುಹಿಸುವ ಅವಕಾಶವೂ ಲಭ್ಯವಿದೆ. ಮೂರನೇ ಆಯ್ಕೆಯಲ್ಲಿ ಇಲಾಖೆಯ ಸಂದೇಶ ಆಯ್ಕೆ ಮಾಡಬಹುದಾಗಿದೆ. ಸಹೋದರಿ ತನ್ನ ಸಹೋದರರಿಗೆ ಏನು ಹೇಳಬೇಕು ಎಂದು ಬಯಸುತ್ತಾರೋ ಅದನ್ನು ಉಲ್ಲೇಖೀಸಬಹುದಾಗಿದೆ. ಗ್ರಾಹಕರ ಆಯ್ಕೆಗೆ 15ಕ್ಕೂ ಅಧಿಕ ವಿನ್ಯಾಸಗಳ ರಾಖೀ ಲಭ್ಯವಿದೆ.
ರಾಜ್ಯದೊಳಗಿನ ಗ್ರಾಹಕರು ದೇಶದ ಯಾವುದೇ ಭಾಗಕ್ಕೆ ಬೇಕಾದರೂ ರಾಖಿಯನ್ನು ಕಳುಹಿಸಬಹುದಾಗಿದೆ. ಗ್ರಾಹಕರ ಹಾಗೂ ಸಾಮಾಜಿಕ ಕಳಕಳಿಯಿಂದ ಕೊರೊನಾ ಸಂದರ್ಭದಲ್ಲಿ ಈ ಸೇವೆಯನ್ನು ಪ್ರಾರಂಭಿಸಲಾಗಿದೆ. ಕಳೆದ ಬಾರಿ ಜಿಲ್ಲೆಯಿಂದ ಉತ್ತಮ ಸ್ಪಂದನೆ ಸಿಕ್ಕಿದೆ. -ನವೀನ್ ಚಂದ್ರ, ಅಂಚೆ ಅಧೀಕ್ಷಕ, ಉಡುಪಿ ವಿಭಾಗ