Advertisement

ಬಂಟ್ವಾಳ: ಎಂಜಿನಿಯರ್‌ ಗಿರೀಶ್‌ಗೆ ಬೀಳ್ಕೊಡುಗೆ

03:50 AM Jul 04, 2017 | Team Udayavani |

ಬಂಟ್ವಾಳ: ಅಧಿಕಾರಿಗಳು ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಸಮಾಜದಲ್ಲಿ ಪ್ರಶಂಸೆಗೆ ಪಾತ್ರರಾಗುತ್ತಾರೆ ಎಂದು ಜಿ.ಪಂ.ಉಪಕಾರ್ಯದರ್ಶಿ ಎನ್‌.ಆರ್‌. ಉಮೇಶ್‌ ಹೇಳಿದರು. ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಬಂಟ್ವಾಳ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಗಿರೀಶ್‌ ಕೆ.ಪಿ. ಅವರಿಗೆ ಸೇವಾ ನಿವೃತ್ತಿಯ ಅಂಗವಾಗಿ ಬಿ.ಸಿ.ರೋಡ್‌ ಎಸ್‌ಜೆಎಸ್‌ಆರ್‌ವೈ ಸಭಾಂಗಣದಲ್ಲಿ ನಡೆದ ವಿದಾಯಕೂಟ ಉದ್ದೇಶಿಸಿ ಮಾತನಾಡಿದರು.

Advertisement

ಅಧಿಕಾರಿಗಳನ್ನು ಅವರ ಕಾರ್ಯದಿಂದ ಗುರುತಿಸಬೇಕು. ಸರಕಾರಿ ನೌಕರನಿಗೆ ನಿವೃತ್ತಿ ಸಹಜವಾಗಿದ್ದರೂ ಅವರು ಸೇವಾ ಅವಧಿಯಲ್ಲಿ ನಿರ್ವಹಿಸಿದ ಕರ್ತವ್ಯ ಅವರ ಬದುಕಿಗೆ ಅರ್ಥ ನೀಡುತ್ತದೆ ಎಂದರು. ನಿವೃತ್ತರನ್ನು ಇದೇ ಸಂದರ್ಭ ಸಮ್ಮಾನಿಸಿದರು. ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್‌ ಪುರಂದರ ಹೆಗ್ಡೆ, ತಾ.ಪಂ.ಕಾರ್ಯನಿರ್ವಹಣಧಿಕಾರಿ ಸಿಪ್ರಿಯಾನ್‌ ಮಿರಾಂದ, ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದ ಹಿರಿಯ ಎಂಜಿನಿಯರ್‌ಗಳಾದ ರವೀಂದ್ರ ಕಿಣಿ, ಟಿ.ಆರ್‌. ನಾಯಕ್‌ ಉಪಸ್ಥಿತರಿದ್ದರು. ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಜಿಲ್ಲಾ ಉಸ್ತುವಾರಿ ಸಚಿವ ಆಪ್ತ ಸಹಾಯಕ ಚಂದ್ರಶೇಖರ ಪಾತೂರು, ಪಿಡಬ್ಲ್ಯೂಡಿ ಎಂಜಿನಿಯರ್‌ ಉಮೇಶ್‌ ಭಟ್‌, ಎಂಜಿನಿಯರ್‌ಗಳಾದ ಕೃಷ್ಣ ಮಾನಪ್ಪ, ಅಜಿತ್‌ ಕೆ.ಎನ್‌, ಪದ್ಮರಾಜ್‌ ಗೌಡ, ಜಗದೀಶ್‌ಚಂದ್ರ ಮತ್ತಿತರರು ಹಾಜರಿದ್ದರು. ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದ ಎಡಬ್ಲ್ಯೂ ಜಿ. ನರೇಂದ್ರ ಬಾಬು ಸ್ವಾಗತಿಸಿದರು, ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next