Advertisement

ಪಾಕ್‌ ನಾಗರಿಕನ ಸ್ವದೇಶಕ್ಕೆ ಕಳುಹಿಸಿ ಕೊಟ್ಟ ಬಿಎಸ್‌ಎಫ್

03:45 AM Feb 13, 2017 | Team Udayavani |

ಚಂಡೀಗಢ: ಪ್ರಮಾದವಶಾತ್‌ ದೇಶದ ಗಡಿ ದಾಟಿ ಬಂದ ಪಾಕಿಸ್ತಾನದ ನಾಗರಿಕರೊಬ್ಬರನ್ನು ಬಿಎಸ್‌ಎಫ್ ಸ್ವದೇಶಕ್ಕೆ ಹಿಂದಕ್ಕೆ ಕಳುಹಿಸಿದೆ. ಈ ಮೂಲಕ ಅದು ಔದಾರ್ಯ ಮೆರೆದಿದೆ. ಫೆ.10ರಂದು ನೆರೆಯ ರಾಷ್ಟ್ರದ ಗಡಿಯಂಚಿನ ಗ್ರಾಮದ ಮೊಹಮ್ಮದ್‌ ಅಲಿ (65) ಎಂಬುವರು ಅಂತಾರಾಷ್ಟ್ರೀಯ ಗಡಿ ದಾಟಿ ಫಿರೋಜ್‌ಪುರ್‌ ವಲಯದ ಬರ್ಕೆ ಎಂಬಲ್ಲಿಗೆ ಬಂದಿದ್ದರು.

Advertisement

ಈ ಸಂದರ್ಭದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿತ್ತು. ವಿಚಾರಣೆ ವೇಳೆ ನಿಜಾಂಶ ಗೊತ್ತಾದ ಬಳಿಕ ಪಾಕಿಸ್ತಾನದ ಅಧಿಕಾರಿಗಳನ್ನು ಸಂಪರ್ಕಿಸಿ ಅಲಿ ಅವರನ್ನು ಮಾನವೀಯತೆಯ ನೆಲೆಯಲ್ಲಿ ಕಳುಹಿಸಿಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next