Advertisement

ಮಕ್ಕಳನ್ನು ಶಾಲೆಗೆ ಕಳುಹಿಸಿ ಸುಂದರ ಬದುಕು ರೂಪಿಸಿ

07:24 AM Jan 29, 2019 | Team Udayavani |

ಕೋಲಾರ: ಬಾಲ ಕಾರ್ಮಿಕ ಪದ್ಧತಿಯನ್ನು ನಿಮೂ ರ್ಲನೆ ಮಾಡಲು ಮೆಕಾನಿಕ್‌ಗಳು ಬದ್ಧತೆ ತೋರ ಬೇಕು, ನಿಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿಸಿ ವರ್ಕ್‌ಶಾಪ್‌ಗ್ಳಲ್ಲಿ ಕೆಲಸಕ್ಕೆ ಇಟ್ಟುಕೊಳ್ಳುವುದು ಸರಿಯಲ್ಲ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

Advertisement

ನಗರದಲ್ಲಿ ಜಿಲ್ಲಾ ಮೆಕಾನಿಕ್‌ ಕ್ಷೇಮಾಭಿವೃದ್ಧಿ ಸಂಘ ದಿಂದ ಹಮ್ಮಿಕೊಂಡಿದ್ದ ಸಂಘದ ಉದ್ಘಾಟನೆ ಹಾಗೂ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳಿಗೆ ಜೀವನ ರೂಪಿಸಿಕೊಳ್ಳಲು ಸಾಕ ಷ್ಟು ಮಾರ್ಗಗಳಿವೆ. ಆದರೆ ಅನಧಿಕೃತ ಚಟುವಟ ಕೆಗಳಲ್ಲಿ ಭಾಗಿಯಾಗಿ ಜೀವನ ರೂಪಿಸಿಕೊಳ್ಳುವುದ‌ರಲ್ಲಿ ನೆಮ್ಮದಿ ಇರುವುದಿಲ್ಲ. ಮಕ್ಕಳನ್ನು ಕೆಲಸಕ್ಕೆ ಕಳುಹಿ ಸುವುದು ಅಪರಾಧವೂ ಆಗಿದೆ ಎಂದು ಎಚ್ಚರಿಸಿದರು.

ಮಕ್ಕಳ ಬದುಕಿಗೆ ಕೊಳ್ಳಿ: ನಗರ ಪ್ರದೇಶದಲ್ಲಿ ಸಾಕಷ್ಟು ಮಂದಿ ಗ್ಯಾರೇಜ್‌ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ನೀವೆಲ್ಲಾ ಸಂಘಟನೆಯಾಗಬೇಕಾದ ಅಗತ್ಯವಿದೆ. ಮಕ್ಕಳಿಗೆ ಶಿಕ್ಷಣ ಕೊಡಿಸಲು ಆಗದೆ ಚಿಕ್ಕ ವಯಸ್ಸಿನಲ್ಲೇ ಅವರನ್ನು ಮೆಕಾನಿಕ್‌ ಕೆಲಸಕ್ಕೆ ಸೇರಿಸಿಕೊಳ್ಳುವುದರಿಂದ ಅವರ ಸುಂದರ ಬದುಕಿಗೆ ನೀವೇ ಕೊಳ್ಳಿಯಿಟ್ಟಂತಾಗುತ್ತದೆ ಎಂದರು.

ಭರವಸೆ: ಮೆಕಾನಿಕ್‌ಗಳು ಯಾವುದೇ ರೀತಿಯ ಶಿಕ್ಷಣ ಪಡೆದುಕೊಳ್ಳದೆ ಇದ್ದರು ವಾಹನದ ಬಿಡಿ ಭಾಗಗಳನ್ನು ಗುರುತಿಸುವ ಜ್ಞಾನ ಹೊಂದಿದ್ದಾರೆ. ತಾಲೂಕಿನ ನರಸಾಪುರ, ವೇಮಗಲ್‌ನಲ್ಲಿನ ಕೈಗಾರಿಕೆಗಳೊಂದಿಗೆ ಚರ್ಚಿಸಿ ಅಗತ್ಯ ಕೌಶಲ ತರಬೇತಿ ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಸಂಘದ ಗೌರವಾಧ್ಯಕ್ಷ ಕೆ.ವಿ.ಸುರೇಶ್‌ ಕುಮಾರ್‌, ಮೆಕಾನಿಕ್‌ಗಳು ಸಂಘಟನೆಯಾಗುವ ಮೂಲಕ ತಮಗೆ ದೊರೆಯಬೇಕಾದ ಸೌಕರ್ಯಪಡೆದುಕೊಳ್ಳಲು ಮುಂದಾಗಬೇಕು, ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳ ಸದುಪಯೋ ಗ ಪಡೆಯಬೇಕು ಎಂದು ಸಲಹೆ ನೀಡಿದರು.

ಸೌಕರ್ಯ ದೊರೆಯುವುದಿಲ್ಲ: ದೇಶದಲ್ಲಿ ಸಂಘಟಿತ ಕಾರ್ಮಿಕರಿಗೆ ಉದ್ಯೋಗದ ರಕ್ಷಣೆಯಿದೆ. ಮೆಕಾನಿಕ್‌, ಅಡುಗೆ, ಕಟ್ಟಡ ನಿರ್ಮಾಣ ಹಾಗೂ ಇತರೆ ನಿರ್ಮಾಣ ಕಾರ್ಮಿಕರೆಲ್ಲ ಅಸಂಘಟಿತ ವರ್ಗಕ್ಕೆ ಸೇರುತ್ತಾರೆ. ಇವರಿಗೆ ಉದ್ಯೋಗದ ರಕ್ಷಣೆಯಿಲ್ಲ. ಸರ್ಕಾರದಿಂದಲ್ಲೂ ಯಾವುದೇ ಸೌಕರ್ಯ ದೊರೆಯುವುದಿಲ್ಲ ಎಂದು ಹೇಳಿದರು.

Advertisement

ಅರಿವು ಅಗತ್ಯ: ಪರಿಸ್ಥಿತಿಯ ಸುಳಿಗೆ ಸಿಕ್ಕಿ ಮೆಕಾನಿಕ್‌ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಯಾವ ಕ್ಷೇತ್ರದಲ್ಲೂ ಕೆಲಸ ಸಿಗದಿದ್ದರೆ ಕೊನೆಗೆ ಬರುವುದೇ ಮೆಕಾನಿಕ್‌ ಕೆಲಸ ಮಾಡಲು. ಇಲ್ಲಿ ಕೆಲಸ ಸುಲಭವಾಗಿ ದೊರೆಯುತ್ತದೆ. ಆದರೆ 18 ವರ್ಷ ಕೆಳಗಿನ ಬಾಲಕರನ್ನು ಗ್ಯಾರೇಜ್‌ಗಳಲ್ಲಿ ದುಡಿಸಿಕೊಳ್ಳುವುದು ಅಪರಾಧ. ಮಾಲೀಕರು ಕಾರ್ಮಿಕರಿಗಾಗಿ ಜಾರಿಯಾಗಿರುವ ಕಾನೂನು, ಹಕ್ಕುಗಳ ಬಗ್ಗೆ ಅರಿವು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next