Advertisement
ಸಂಸತ್ತಿನಲ್ಲಿ ಗದ್ದಲ: ರವೀಂದ್ರ ಗಾಯಕ್ವಾಡ್ ಪ್ರಕರಣ ಸಂಸತ್ತಿನ ಎರಡೂ ಮನೆಗಳಲ್ಲಿ ಸೋಮವಾರ ಪ್ರಸ್ತಾಪವಾಗಿದ್ದು, ಸಂಸದರ ಪರ ದನಿ ಕೇಳಿಬಂದಿದೆ. ಜೊತೆಗೆ ವಿವಾದಕ್ಕೆ ಸೌಹಾರ್ದಯುತ ಅಂತ್ಯ ಹಾಡುವ ಬಗ್ಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ. ಜೊತೆಗೆ ನಿಷೇಧದಿಂದ ಸಂಸದೀಯ ಕರ್ತವ್ಯಕ್ಕೆ ಅಡ್ಡಿಯಾಗುತ್ತದೆ. ಪ್ರತಿ ಬಾರಿ ಅವರು ರೈಲಿನಲ್ಲಿ ಸಂಚರಿಸುವುದು ಕಷ್ಟಸಾಧ್ಯ ಎಂದು ಅಭಿಪ್ರಾಯಪಟ್ಟರು. ಚರ್ಚೆ ವೇಳೆ ಮಾತನಾಡಿದ ಶಿವಸೇನಾ ಸಂಸದ ಅರವಿಂದ ಸಾವಂತ್ ಹಾರಾಟ ನಿಷೇಧ ಮೂಲಭೂತ ಸ್ವಾತಂತ್ರ್ಯವನ್ನು ನಿರಾಕರಿಸಿದಂತೆ ಎಂದರು. ಶಿವಸೇನಾ ಸಂಸದ ಆನಂದರಾವ್ ಅದುÕಲ್ ಮಾತನಾಡಿ, ಈ ಹಿಂದೆ ವಿಮಾನದಲ್ಲಿ ಗಲಾಟೆ ಮಾಡಿದ ನಟ ಕಪಿಲ್ ಶರ್ಮಾ ಅವರನ್ನು ನಿಷೇಧಿಸಿಲ್ಲ. ಆದರೆ ಗಾಯಕ್‌ವಾಡ್ ಅವರನ್ನು ನಿಷೇಧಿಸಿದ್ದು ಸರಿಯೇ ಎಂದು ಕೇಳಿದ್ದಾರೆ. ಅತ್ತ ರಾಜ್ಯಸಭೆಯಲ್ಲೂ ಸಮಾಜವಾದಿ ಸಂಸದರು ಗಾಯಕ್‌ವಾಡ್ ಪರ ಮಾತನಾಡಿದ್ದು ಸಂಸದನಾಗಿ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದಂತೆ ಎಂದಿದ್ದಾರೆ. ಪ್ರಕರಣ ಬಗ್ಗೆ ಮಾತನಾಡಿದ ಸಚಿವ ಗಜಪತಿ ರಾಜು, ವಿಮಾನದಲ್ಲಿ ಇಂತಹ ವರ್ತನೆಗಳು ತಪ್ಪು. ಇಂತಹ ವಿವಾದಗಳಿಂದ ಸಂಸದರಾದವರು ದೂರ ಇರಬೇಕಾಗಿದೆ ಎಂದರು.
Advertisement
ಸೇನೆ ಸಂಸದಗೆ ಮತ್ತೆ ಹಾರಾಟ ಭಾಗ್ಯ?
11:32 AM Mar 28, 2017 | Karthik A |
Advertisement
Udayavani is now on Telegram. Click here to join our channel and stay updated with the latest news.