Advertisement

ಜನಪದರು ಸಂಸ್ಕೃತಿಯ ವಾರಸುದಾರರು: ಬಲವಂತರಾವ್‌

03:28 PM Mar 07, 2022 | Team Udayavani |

ಮೈಸೂರು: ರಾಜ್ಯ ಸರ್ಕಾರ ಜಾನಪದ ಸಾಹಿತ್ಯವನ್ನು 100 ಸಂಪುಟಗಳಲ್ಲಿ ಹೊರ ತರಲು ಯೋಜನೆ ರೂಪಿಸಿದ್ದು, ಅದರಲ್ಲಿ ಈಗಾಗಲೇ 56 ಸಂಪುಟಪ್ರಕಟವಾಗಿದೆ. ಇನ್ನಷ್ಟು ಸಂಪುಟಗಳು ಮುದ್ರಣಹಂತದಲ್ಲಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್‌ ಪಾಟೀಲ್‌ ಹೇಳಿದರು.

Advertisement

ಮೈಸೂರಿನ ರಂಗಾಯಣ ಆವರಣದಲ್ಲಿರಂಗಾಯಣದಿಂದ ಜನಪದರು ಕಾರ್ಯ ಕ್ರಮದಅಂಗವಾಗಿ ಭಾನುವಾರ ಆಯೋಜಿಸಿದ್ದ “ಜಾನಪದ -ನೆಲದ ಸಂಸ್ಕೃತಿ ಕುರಿತ ವಿಚಾರ ಸಂಕಿರಣದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈಗಾಗಲೇ 56 ಸಂಪುಟ ಪ್ರಕಟ: ಇತ್ತೀಚಿನವರ್ಷಗಳಲ್ಲಿ ಅಕ್ಷರಸ್ಥರಾದ ನಾವು ಸಾಹಿತ್ಯಕವಾಗಿ ಅನೇಕಕಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿಮುಂದಾಗಿದ್ದೇವೆ. ಆದರೆ ಹಿಂದಿನ ಕಾಲದಲ್ಲಿಅನಕ್ಷರಸ್ಥರು ಸಮುದಾಯ ಕಲೆ, ಸಂಸ್ಕೃತಿ ರಕ್ಷಣೆಗೆಕೊಟ್ಟ ಕೊಡುಗೆ ಅಮೂಲ್ಯವಾಗಿದೆ. ಈ ನಿಟ್ಟಿನಲ್ಲಿಕರ್ನಾಟಕ ಸರ್ಕಾರ 100 ಸಂಪುಟದಲ್ಲಿ ಜಾನಪದಸಾಹಿತ್ಯವನ್ನು ಹೊರ ತರಲು ಯೋಜನೆ ರೂಪಿಸಲಾಗಿದೆ.ಈಗಾಗಲೇ 56 ಸಂಪುಟ ಪ್ರಕಟವಾಗಿದೆ. ಇನ್ನಷ್ಟುಸಂಪುಟಗಳು ಮುದ್ರಣ ಹಂತದಲ್ಲಿವೆ. ಈ ಮೂಲಕಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ರಕ್ಷಣೆಗೆ ಮನ್ನಣೆದೊರೆಯುತ್ತಿದೆ ಎಂದರು.

ಬುಡಕಟ್ಟು ಸಮುದಾಯಗಳು: ರಂಗಾಯಣದನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡಿ, ಕಲೆಯಹೆಸರಲ್ಲಿಯೇ ಹಲವು ಬುಡಕಟ್ಟು ಸಮುದಾಯಗಳಿರುವುದು ವಿಶೇಷ. ನಮ್ಮ ಸಂಸ್ಕೃತಿಯನ್ನು ಉಳಿಸಿ,ಬೆಳೆಸಿಕೊಂಡು ಬಂದಿರುವುದರಲ್ಲಿ ಜನಪದರು ಅಗ್ರಗಣ್ಯರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಹಲವುಬುಡಕಟ್ಟು ಸಮುದಾಯಗಳು ನಶಿಸಿ ಹೋಗುತ್ತಿವೆ.ಅವುಗಳನ್ನು ಉಳಿಸಿ, ರಕ್ಷಿಸುವ ಅನಿವಾರ್ಯತೆ ಇದೆ.ಬುಡಕಟ್ಟು ಹಾಗೂ ಜನಪದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಆಯೋಜನೆಮಾಡುವುದಕ್ಕೆ ರಂಗಾಯಣ ಬದ್ಧವಾಗಿದೆ. ಕೆಲಸ ಮಾಡಿದೇ ನಾವು ಮಾಡಿದ್ದೇವೆ ಎಂದು ಹೇಳಿಕೊಳ್ಳದೇ, ಪರಿಣಾಮಕಾರಿ ಕೆಲಸ ಮಾಡಿ ತೋರಿಸುತ್ತೇವೆ ಎಂದರು.ಮಹಾರಾಜ ಕಾಲೇಜಿನ ಜಾನಪದ ವಿಭಾಗದ ಮುಖ್ಯ ಸ್ಥರಾದ ಪ್ರೊ.ಚೇತನ ಬಾಲಕೃಷ್ಣ ಇತರರು ಇದ್ದರು.

ಸಂಸ್ಕೃತಿ ಉಳಿವಿಗಾಗಿ ಅತ್ಯಮೂಲ್ಯ ಕೊಡುಗೆ :

Advertisement

ಬುಡಕಟ್ಟು ಸಮುದಾಯದಲ್ಲಿ ಪಿಎಚ್‌ಡಿ ಪಡೆದ ಮೊದಲಮಹಿಳೆ ಎಂದೆ ಪ್ರಸಿದ್ಧಿಯಾದ ಡಾ.ರತ್ನಮ್ಮ ವಿಚಾರಸಂಕಿರಣದಲ್ಲಿ ಮಾತನಾಡಿ, ಸೋಲಿಗರು, ಜೇನು ಕುರುಬ,ಕಾಡು ಕುರುಬ ಸೇರಿದಂತೆ ಮೂಲ ಅರಣ್ಯವಾಸಿ ಬುಡಕಟ್ಟುಸಮುದಾಯ ಗಳು ಜನಪದದ ವಾರಸುದಾರರಾಗಿ ನಮ್ಮಕಲೆ ಮತ್ತು ಸಂಸ್ಕೃತಿಯನ್ನು ರಕ್ಷಿಸಿಕೊಂಡು ಬಂದಿದ್ದಾರೆ.ನಮ್ಮದೇ ಆದ ದಾಟಿಯಲ್ಲಿ ಮೂಲ ಬುಡಕಟ್ಟು ನಿವಾಸಿಗಳು ಸಂಸ್ಕೃತಿ ಉಳಿವಿಗಾಗಿ ಅತ್ಯಮೂಲ್ಯ ಕೊಡುಗೆನೀಡಿದ್ದಾರೆ. ನಮ್ಮಲ್ಲಿರುವ ಸೋಲಿಗ, ಜೇನು ಮತ್ತು ಕಾಡುಕುರುಬ, ಎರವ, ಪಣಿಯ, ಅಕ್ಕಿಪಿಕ್ಕಿ ಸೇರಿದಂತೆ 52ಬುಡಕಟ್ಟು ಸಮುದಾಯ ಗಳಿವೆ. ಈ ಸಮುದಾಯಗಳಲ್ಲಿಜಾನಪದ ಸೊಗಡು ಹಚ್ಚ ಹಸಿರಾಗಿದೆ. ಜಾನಪದ ಸೊಗಡಿನನೆಲೆಯನ್ನು ದೇಸಿ ಬಾಷೆಯಲ್ಲಿ, ಸಂವೇದನೆಯಲ್ಲಿ,ಜನಪದ ಸಾಮಾನ್ಯರ ಬದುಕಲ್ಲಿ ಅನುಭವದ ಮೂಲಕಪರ್ಯಾಯ ಸಾಂಸ್ಕೃತಿಕ ಲೋಕವನ್ನು ಕಟ್ಟುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next