Advertisement

ದಲಿತ ಅಧಿಕಾರಿಗಳು, ಸಂಘಟನೆಗಳಿಂದಲೇ ದಲಿತರು ನಾಶ

01:53 PM Sep 26, 2021 | Team Udayavani |

ಎಚ್‌.ಡಿ.ಕೋಟೆ: ದಲಿತರ ನಾಶಕ್ಕೆ ಸರ್ಕಾರಗಳು ಬೇಕಿಲ್ಲ, ಅನ್ಯ ಸಮುದಾಯದ ಅಗತ್ಯವೂ ಬೇಕಿಲ್ಲ. ಕೆಲವು ರಾಜಕೀಯ ನಾಯಕರು, ಬಹು ಸಂಖ್ಯೆ ದಲಿತ ಅಧಿಕಾರಿಗಳು ಮತ್ತು ಬಹು ಸಂಖ್ಯಾತ ದಲಿತ ಸಂಘಟನೆಗಳು ದಲಿತರನ್ನು ನಾಶಪಡಿಸುತ್ತಿವೆ ಎಂದು ವಿಮರ್ಶಕ ಕಲಬುರಗಿಯ ವಿಠ್ಠಲ್‌ ವಗ್ಗನ್‌ ವಿಷಾದಿಸಿದರು.

Advertisement

ಪಟ್ಟಣದ ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಎಚ್‌.ಡಿ.ಕೋಟೆ ಮತ್ತು ಸರಗೂರು ತಾಲೂಕು ಜನಜಾಗೃತಿ ವೇದಿಕೆ ವತಿಯಿಂದ ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ “ಅಂಬೇಡ್ಕರ್‌ ಮತ್ತು ಸಮಕಾಲಿನ ಶೋಷಿತರು’ ವಿಚಾರ ಕುರಿತು ಮಾತನಾಡಿ, ಶೋಷಣೆಗೊಳಗಾಗಿ ನೊಂದಬೆಂದು ಸರ್ವ ರಿಗೂ ಸಮಾನತೆ ತಂದು ಕೊಟ್ಟ ಅಂಬೇಡ್ಕರ್‌ ಮೀಸಲಾತಿಯಿಂದ ಉನ್ನತ ಸ್ಥಾನ ಅಲಂಕರಿಸಿದ ಶೇ.90ರಷ್ಟು ದಲಿತ ಅಧಿಕಾರಿಗಳು ಹಣ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ. ಅಂಬೇ ಡ್ಕರ್‌ ಆಶಯ ಮರೆತು ಸ್ವಾರ್ಥ ಮನೋಭಾವ ರೂಢಿಸಿಕೊಂಡಿದ್ದಾರೆ ಎಂದರು.

ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರನ್ನು ದಲಿತ ನಾಯಕ ಎಂದೇ ಪ್ರತಿಬಿಂಬಿಸಬಾರದು. ಅವರ ಹೆಸರು ಬಳಕೆ ಮಾಡುವಾಗ ಬಾಬಾ ಸಾಹೇಬ್‌ಡಾ.ಬಿ.ಆರ್‌.ಅಂಬೇಡ್ಕರ್‌ ಎಂದೇ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು. ಮತ್ತೂಬ್ಬ ವಿಮರ್ಶಕ ಬಳ್ಳಾರಿ ಜಿಲ್ಲೆಯ ಮಲ್ಲಿಕಾರ್ಜುನ ದೊಡ್ಮನೆ, “ಸ್ವಾತಂತ್ರ್ಯ ಹೋರಾಟದಲ್ಲಿ ಶೋಷಿತ ಸಮುದಾಯಗಳ ಪಾತ್ರ’ ಹಾಗೂ “ಈ ಹೋರಾಟಕ್ಕೆ ಕಾರಣ ಮತ್ತು ಪರಿಣಾಮಗಳು’ ವಿಚಾರ ಕುರಿತು ಮಾತನಾಡಿದರು.

ಮೌಡ್ಯ: ಸಂವಿಧಾನದಡಿ ಸಮಾನತೆ ಜಾರಿಗೆ ಬಂದಿದೆಯಾದರೂ ಧಾರ್ಮಿಕವಾಗಿ ಇಂದಿಗೂಜನರು ಮೂಢನಂಬಿಕೆಗಳಿಗೆ ಮಾರು ಹೋಗಿ ದ್ದಾರೆ. ಶೋಷಿತ ಸಮುದಾಯಗಳ ಮೇಲಿನ ದೌರ್ಜನ್ಯ, ಶೋಷಣೆನಿಲ್ಲುತ್ತಿಲ್ಲ. ಈ ಬಗ್ಗೆ ಸಮುದಾಯ ಗಮನ ಹರಿಸಬೇಕಿದೆ ಎಂದರು.

ಜಾಗೃತಿ: ಪತ್ರಕರ್ತ ಎಚ್‌.ಬಿ.ಬಸವರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ, ಶೋಷಿತ ಸಮುದಾಯಗಳು ಸಾಮಾಜಿಕ, ಆರ್ಥಿಕ ಮತ್ತು ಸಾಮಾಜಿಕವಾಗಿಸದೃಢಗೊಳಿಸುವ ಸಲುವಾಗಿ ಜನಜಾಗೃತಿ ವೇದಿಕೆ ಅಸ್ತಿತ್ವಕ್ಕೆ ಬಂದಿದೆ. ಈ ವೇದಿಕೆ ಯಾವುದೇರಾಜಕೀಯ ಪಕ್ಷಗಳ, ಸಂಘಟನೆಗಳ, ಜಾತಿ ಪರವಾಗಿಲ್ಲ. ಸರ್ವರಲ್ಲೂ ಜಾಗೃತಿ ಮೂಡಿಸುವ ವೇದಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪರ ಕಾರ್ಯಕ್ರಮ ಆಯೋಜಿಸ ಲಾಗುವುದು ಎಂದು ತಿಳಿಸಿದರು.

Advertisement

ಕಾರ್ಯಕ್ರಮದ ಆರಂಭದಲ್ಲಿ ಬುದ್ಧನ ಗೀತೆ ಯೊಂದಕ್ಕೆ ಕುಮಾರಿ ಇಂಚರ ಭರತ ನಾಟ್ಯದ ನೃತ್ಯ ಪ್ರದರ್ಶಿಸಿ ಪ್ರೇಕ್ಷರನ್ನು ರಂಜಿಸಿದರು.

ಜನಜಾಗೃತಿ ವೇದಿಕೆ ಅಧ್ಯಕ್ಷೆ ದೇವರಾಜಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕೆಂಪರಾಜು, ಖಜಾಂಚಿ ಚಂದ್ರಕಲಾ, ಹೈರಿಗೆ ಶಿವರಾಜು, ಜೀವಿಕ ಉಮೇಶ್‌, ಆದಿ ಕರ್ನಾಟಕಮಹಾಸಭಾ ಅಧ್ಯಕ್ಷ ಸೋಗಳ್ಳಿ ಶಿವಣ್ಣ, ಒಕ್ಕಲಿಗ ಸಮುದಾಯದ ಮುಖಂಡ ಹೂ.ಕೆ.ಮಹೇಂದ್ರ, ಪುರಸಭೆ ಸದಸ್ಯ ಮಿಲ್‌ ನಾಗರಾಜು, ಸರ್ವಧರ್ಮ ಸಮಾಜದ ತಾ. ಅಧ್ಯಕ್ಷ ಇಬ್ರಾಹಿಂ, ಬಿ.ಸಿ. ಬಸಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.

33 ಸಾವಿರ ದಲಿತ ಸಂಘಟನೆಗಳು ಇದ್ದರೂ ಅನ್ಯಾಯ ನಿಂತಿಲ್ಲ :

ದೇಶದಲ್ಲಿ 33 ಸಾವಿರ ದಲಿತ ಸಂಘಟನೆಗಳಿದ್ದರೂ ದಲಿತ ಸಮುದಾಯದ ಹೆಣ್ಣು ಮಕ್ಕಳ ಬಲತ್ಕಾರ, ಸಾಮಾಜಿಕ ಬಹಿಷ್ಕಾರಸೇರಿದಂತೆ ಇನ್ನಿತರ ಅನ್ಯಾಯಗಳು ಆಗಾಗ ನಡೆಯುತ್ತಿದ್ದರೂ ಪ್ರತಿಭಟಿಸುತ್ತಿಲ್ಲ. ದಲಿತ ಸಂಘಟನೆ ಅಂದರೆ ಹೆದರುವ ಕಾಲ ಇತ್ತು. ಆದರೆ, ಈಗ ಆ ಪರಿಸ್ಥಿತಿ ಬದಲಾಗಿದೆ. ದಲಿತ ಸಂಘಟನೆ ಎಂದೊಡನೆ ಅಧಿಕಾರಿ ಗಳು ಕಚೇರಿಯ ಹಣದ ಡ್ರಾಯರ್‌ ಭದ್ರ ಗೊಳಿಸಿ, ಕವರ್‌ಗಳಲ್ಲಿ ಇಂತಿಷ್ಟು ನೀಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ವಿಮರ್ಶಕ ವಿಠ್ಠಲ್‌ ವಗ್ಗನ್‌ ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next