Advertisement

15ಕ್ಕೆ ವಿಚಾರ ಸಂಕಿರಣ

03:35 PM Oct 13, 2019 | Team Udayavani |

ಕನಕಪುರ: ರಾಷ್ಟ್ರಮಟ್ಟದ ವಿಚಾರ ಸಂಕಿರಣ ಅ.15ರ ಮಂಗಳವಾರ ಎಸ್‌. ಕೆ. ಸ್ಮಾರಕ ಭವನದಲ್ಲಿ ನಡೆಯಲಿದೆ ಎಂದು ರೂರಲ್‌ ಕಾಲೇಜಿನ ಪ್ರಾಂಶುಪಾಲರಾದ ಗೋವಿಂದಯ್ಯ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಚಾರ ಸಂಕಿರಣವನ್ನು ಉಪಕುಲಪತಿಗಳು, ಕುಲಸಚಿವರು, ವಿಜ್ಞಾನಿಗಳು, ಚಿಂತಕರು ನಡೆಸಿಕೊಡಲಿದ್ದಾರೆ. 21ನೇ ಶತಮಾನದಲ್ಲಿ ಉನ್ನತ ಶಿಕ್ಷಣದ ಬದಲಾವಣೆಗಳು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸವಾಲುಗಳು ಎಂಬ ವಿಷಯದ ಚಿಂತನೆ ನಡೆಯಲಿದೆ. ರಾಜ್ಯ ಮಟ್ಟದ ವಿವಿಧ ಕಾಲೇಜುಗಳ ಸಂಶೋಧಕರು, ಪ್ರಾಧ್ಯಾಪಕರು ಮತ್ತು ಸ್ನಾತಕೋತ್ತರ ಪದವೀಧರರು ಭಾಗವಹಿಸಲಿದ್ದಾರೆ.

ಭಾಗವಹಿಸಲಿರುವ ಪ್ರತಿನಿಧಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿದೆ. 200ರಿಂದ 250 ಜನ ಆಗಮಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಆರ್‌ಇಎಸ್‌ ಸಂಸ್ಥೆ ಅಧ್ಯಕ್ಷ ಕೆ.ಬಿ. ನಾಗರಾಜು ಮತ್ತು ಕಾರ್ಯದರ್ಶಿ ರಮೇಶ್‌ ಮಾತನಾಡಿ, ನಮ್ಮ ಸಂಸ್ಥೆಯಿಂದ ನಡೆಯುವ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಕ್ಕೆ ವಿವಿಧ ರಾಷ್ಟ್ರದ ಉಪನ್ಯಾಸಕರು, ಚಿಂತಕರು, ರಾಜ್ಯಮಟ್ಟದ ಪ್ರತಿನಿಧಿಗಳು, ಪಿಜಿ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಚಾಲಕ ನಂಜುಂಡಯ್ಯ, ಸದಸ್ಯರಾದ ವಿ.ಎನ್‌. ಮಂಜುನಾಥ್‌, ಪ್ರೊ.ಎಂ.ಕುಮಾರ್‌, ಪ್ರೊ.ಎಂ.ಪಿ. ಬಾಲಕೃಷ್ಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next