Advertisement

‘ವೃತ್ತಿಪರ ಸಾಮರ್ಥ್ಯಕ್ಕೆ ವಿಚಾರಸಂಕಿರಣ ಪೂರಕ’

04:08 PM May 14, 2018 | Team Udayavani |

ಮಂಗಳೂರು: ವೃತ್ತಿಪರ ಸಾಮರ್ಥ್ಯ ಹೆಚ್ಚಿಸಿ, ಶುಶ್ರೂಷ ಪದ್ಧತಿಯನ್ನು ಮುನ್ನಡೆಸಲು ವಿಚಾರ ಸಂಕಿರಣ ಕಲಿಕೆ ಪೂರಕವಾಗಿದ್ದು, ವೃತ್ತಿ ನಿರತ ದಾದಿಯರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಂಗಳೂರು ಕರ್ನಾಟಕ ರಾಜ್ಯ ನರ್ಸಿಂಗ್‌ ಕೌನ್ಸೆಲ್‌, ರಿಜಿಸ್ಟ್ರಾರ್‌ ಶ್ರೀಕಾಂತ್‌ ಬಿ. ಫುಲಾರಿ ಅಭಿಪ್ರಾಯಪಟ್ಟರು.  ಇಲ್ಲಿನ ಕಣಚೂರು ಆರೋಗ್ಯ ಮತ್ತು ಸಂಶೋಧನ ಕೇಂದ್ರದಲ್ಲಿ ಕಣಚೂರು ಕಾಲೇಜ್‌ ಆಫ್‌ ನರ್ಸಿಂಗ್‌ ಸೈನ್ಸ್‌ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ದಾದಿಯರು ರೋಗಿಯ ಹಾರೈಕೆಯಲ್ಲಿ ಉತ್ಕೃಷ್ಟತೆ ಸಾಧಿಸುವುದು ಅವಶ್ಯವಾಗಿದ್ದು, ಹೆಚ್ಚಿನ ಕೌಶಲ ಅಗತ್ಯಕ್ಕಾಗಿ ನರ್ಸ್‌ ಪ್ರಾಕ್ಟೀಶನರ್‌ ಕಾರ್ಯಕ್ರಮಗಳು ವರದಾನವಾಗಲಿದೆ ಎಂದು ಅವರ ಹೇಳಿದರು.

ಕಣಚೂರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ನ ಡೀನ್‌ ಡಾ| ವಿರುಪಾಕ್ಷ ಎಚ್‌.ಎಸ್‌., ಅಧ್ಯಕ್ಷ ಯು.ಕೆ. ಮೋನು, ನಿರ್ದೇಶಕ ಅಬ್ದುಲ್‌ ರೆಹಮಾನ್‌, ವೈದ್ಯಕೀ ಯ ಆಡಳಿತಾಧಿಕಾರಿ ಡಾ| ರೋಹನ್‌ ಎಸ್‌. ಮೋನಿಸ್‌, ಕರ್ನಾಟಕ ರಾಜ್ಯ ನರ್ಸಿಂಗ್‌ ಕೌನ್ಸಿಲ್‌ನ ವೀಕ್ಷಕ ಡಾ| ಯತಿಕುಮಾರ್‌ ಸ್ವಾಮಿ ಗೌಡ ಉಪಸ್ಥಿತರಿದ್ದರು. ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರದ ಸುಮಾರು 22 ನರ್ಸಿಂಗ್‌
ಸಂಸ್ಥೆಗಳಿಂದ 304 ಪ್ರತಿನಿಧಿ ಗಳು ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಿದರು. 

ವಿಚಾರ ಸಂಕಿರಣದಲ್ಲಿ ಬೆಂಗಳೂರಿನ ಯಶವಂತಪುರ ಕೊಲಂಬಿಯಾ ಏಷ್ಯಾ ರೆಫರಲ್‌ ಆಸ್ಪತ್ರೆಯ ಶೋಭಾರಾಣಿ ಕೆನ್ನೆತ್‌ ಜೋಸೆಫ್‌, ಶ್ರೀನಿವಾಸ್‌ ಇನ್‌ ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ನ ವಿಭಾಗ ಮುಖ್ಯಸ್ಥ ಡಾ| ಸತ್ಯಜಿತ್‌ ಕಾರಂತ್‌, ಕಣಚೂರು ಆಸ್ಪತ್ರೆ ಮತ್ತು ಸಂಶೋದನಾ ಕೇಂದ್ರದ ಪಲ್ಮನರಿ ಮೆಡಿಸಿನ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಶಹೀರ್‌ ಅಸ್ಪಾಹನ್‌, ನರ್ಸಿಂಗ್‌ ವಿಭಾಗದ ಪ್ರಬಂಧಕಿ ಸೈಮನ್‌ ವರ್ಗೀಸ್‌, ಎ.ಜೆ. ಆಸ್ಪತ್ರೆಯ ಚೇತನ್‌ ಕುಮಾರ್‌ , ಮಂಗಳೂರಿನ ಸಿಟಿ ಕಾಲೇಜ್‌ ಆಫ್‌ ನರ್ಸಿಂಗ್‌ನ ಪ್ರಾಂಶುಪಾಲ ಅಶ್ವಿ‌ನ್‌ ಬ್ರೂಮೋ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ವಿಚಾರ ಸಂಕಿರಣದಲ್ಲಿ ವೈಜ್ಞಾನಿಕ ವಿಚಾರ ಮಂಡನೆ, ಪೋಸ್ಟರ್‌ ಸ್ಪರ್ಧಾ ಕಾರ್ಯಕ್ರವನ್ನು ಆಯೋಜಿಸಿದ್ದು, ಎಸ್‌ ಸಿಎಸ್‌ ಕಾಲೇಜ್‌ ಆಫ್‌ ನರ್ಸಿಂಗ್‌ನ ಪ್ರಾಂಶುಪಾಲೆ ಲೋಲಿತಾ ಎಸ್‌. ಎಂ ಡಿ’ಸೋಜಾ, ಯುನಿಟಿ ಕಾಲೇಜ್‌ ಆಫ್‌ ನರ್ಸಿಂಗ್‌ನ ಪ್ರಾಂಶುಪಾಲೆ ಚಿತ್ರಾ ಜಿ. ತೀರ್ಪುಗಾರರಾಗಿ ಭಾಗವಹಿಸಿದ್ದರು. 

Advertisement

ಕಣಚೂರು ಕಮುನಿಟಿ ಮೆಡಿಸಿನ್‌ನ ಎ.ಎ. ಕಿರಣ್‌, ಸಹಾಯಕ ಪ್ರಾಧ್ಯಾಪಕ ಡೇವಿಡ್‌ ರಾಕೇಶ್‌ ಡಿ’ಸೋಜಾ, ಉಪನ್ಯಾಸಕ ಕೆನ್ಯಾಸ್‌ ಥಾಮಸ್‌, ಅಂಶು ಜೋಮಿ ಜಾರ್ಜ್‌ ಸಹಕರಿಸಿದರು. ಪ್ರಾಂಶುಪಾಲೆ ಪ್ರೊ| ರೆನಿಲ್ಡಾ ಶಾಂತಿ ಲೋಬೋ ಸ್ವಾಗತಿಸಿದರು. ಐರೀನ್‌ ಡಿ’ಸೋಜಾ ವಂದಿಸಿ, ಜೂಲಿಯಾನ ಲೋಬೋ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next