Advertisement
ಗುರುವಾರ ನಡೆದ ಪ್ರಿ-ಕಾರ್ಟರ್ ಫೈನಲ್ ಮತ್ತು ಕ್ವಾರ್ಟರ್ ಫೈನಲ್‌ನಲ್ಲಿ ತಾಂತ್ರಿಕ ಮೇಲುಗೈ ಸಾಧಿಸುವ ಮೂಲಕ ಜಯ ಸಾಧಿಸಿದ್ದ ಅಮನ್, ಸೆಮಿಫೈನಲ್‌ನಲ್ಲಿ ಜಪಾನ್‌ನ ರೇಯ್ ಹೈಗುಚಿಗೆ ತಾಂತ್ರಿಕ ಮೇಲುಗೈ ಬಿಟ್ಟುಕೊಡುವ ಮೂಲಕ ಸೋಲನುಭವಿಸಿದರು.
ಭಾರತದ ಅವಿನಾಶ್ ಸಾಬ್ಲೆ ಅವರು ಪುರುಷರ 3,000 ಮೀ. ಸ್ಟೀಪಲ್‌ಚೆಸ್ ಫೈನಲ್‌ನನಲ್ಲಿ 11ನೇ ಸ್ಥಾನ ಪಡೆದು ನಿರಾಶೆ ಮೂಡಿಸಿದರು. 29ರ ಹರೆಯದ ಅವರು 8:14.18 ಸೆ.ನಲ್ಲಿ ಗುರಿ ತಲುಪಿದ್ದರು. ಪ್ಯಾರಿಸ್ ಗೇಮ್ಸ್‌ಗಾಗಿ ಅವರು ದೀರ್ಘ ಸಮಯದಿಂದ ವಿದೇಶದಲ್ಲಿ ಸಿದ್ಧತೆ ನಡೆಸುತ್ತಿದ್ದರು. ಮೊರೊಕ್ಕೋದ ಸೌಫಿಯಾನ್ಸ್ ಎಲ್ ಬಕ್ಕಾಲಿ ಚಿನ್ನ, ಅಮೆರಿಕದ ಕೆನ್ನೆತ್ ರೂಕ್ಸ್ ಬೆಳ್ಳಿ ಮತ್ತು ಕೀನ್ಯದ ಅಬ್ರಹಾಂ ಕಿಬಿವೋಟ್ ಕಂಚು ಪಡೆದರು.
Related Articles
Advertisement
ಜ್ಯೋತಿ ಯರ್ರಾಜಿ ನಿರಾಶೆರಾಷ್ಟ್ರೀಯ ದಾಖಲೆ ಹೊಂದಿರುವ ಭಾರತದ ಜ್ಯೋತಿ ಯರ್ರಾಜಿ ಅವರು ವನಿತೆಯರ 100 ಮೀ. ಹರ್ಡಲ್ಸ್‌ನಲ್ಲಿ ಸೆಮಿಫೈನಲಿಗೇರಲು ವಿಫಲರಾಗಿದ್ದಾರೆ. ಗುರುವಾರ ನಡೆದ ರೆಪಿಶೇಜ್ ಹೀಟ್ ಸುತ್ತಿನಲ್ಲಿ ನಾಲ್ಕನೇ ಸ್ಥಾನ ಪಡೆದು ಹೊರಬಿದ್ದರು. ಒಲಿಂಪಿಕ್ಸ್‌ನ 100ಮೀ. ಹರ್ಡಲ್ಸ್‌ನಲ್ಲಿ ಸ್ಪರ್ಧಿಸಿದ ಭಾರತದ ಮೊದಲ ವನಿತೆ ಎಂಬ ಗೌರವ ಪಡೆದ ಯರ್ರಾಜಿ ರೆಪಿಶೇಜ್ ಸುತ್ತಿನಲ್ಲಿ ನಿರಾಶಾದಾಯಕ ನಿರ್ವಹಣೆ ನೀಡಿದರು. ಒಟ್ಟಾರೆ 40 ಸ್ಪರ್ಧಿಗಳಲ್ಲಿ ಅವರು 16ನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.