Advertisement

“ಅರೆ ಹೆಲ್ಮೆಟ್‌’ಮಾರುಕಟ್ಟೆ ಪ್ರವೇಶಕ್ಕೆ “ಬ್ರೇಕ್‌’ಹಾಕಲು ಸೂಚನೆ

05:20 AM Jan 09, 2018 | |

ಬೆಂಗಳೂರು: ಐಎಸ್‌ಐ ಮಾರ್ಕ್‌  ಹಾಗೂ ಗುಣ ಮಟ್ಟವಲ್ಲದ ಅರೆ ಹೆಲ್ಮೆಟ್‌ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬರುವುದನ್ನೇ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ.

Advertisement

ಐಎಸ್‌ಐ ಮಾರ್ಕ್‌ ಇಲ್ಲದ ತಲೆಯ ಪೂರ್ಣ ಭಾಗ ಮುಚ್ಚಿ ಕೊಳ್ಳದ ಅಸುರಕ್ಷಿತ ಹೆಲ್ಮೆಟ್‌ಗಳು ಮಾರುಕಟ್ಟೆಗೆ ಬರುವುದನ್ನೇ ತಡೆದರೆ ಸವಾರರು ಖರೀದಿಸುವ ಪ್ರಶ್ನೆ ಅಥವಾ ಸಂಚಾರಿ ಪೊಲೀಸರು ತಪಾಸಣೆ ಮಾಡುವ ಪ್ರಮೇಯವೇ ಬರುವುದಿಲ್ಲ. ಹೀಗಾಗಿ, ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ನಗರ ಪೊಲೀಸ್‌ ಆಯುಕ್ತರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫೆ. 1ರಿಂದ ಐಎಸ್‌ಐ ಮಾರ್ಕ್‌ ಇಲ್ಲದ ಹಾಗೂ ಅರೆ ಹೆಲ್ಮೆಟ್‌ ನಗರದಲ್ಲಿ ನಿಷೇಧಕ್ಕೆ ಮುಂದಾಗಿರುವುದರಿಂದ ಈಗಿಂದಲೇ ಮಾರುಕಟ್ಟೆಗೆ ಅರೆ ಹೆಲ್ಮೆಟ್‌ ಪ್ರವೇಶಿಸದಂತೆ ನೋಡಿಕೊಳ್ಳಿ. ರಸ್ತೆ ಬದಿ ಹಾಗೂ ಅಧಿಕೃತ ಹೆಲ್ಮೆಟ್‌ ಮಾರಾಟ ಮಳಿಗೆಗಳಲ್ಲೂ ಕೆಲವೊಂದು ಕಡೆ ಐಎಸ್‌ಐ ಮಾರ್ಕ್‌ ಇಲ್ಲದ, ಅಸುರಕ್ಷಿತ ಹೆಲ್ಮೆಟ್‌ಗಳ ದಾಸ್ತಾನಿದೆ. ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಗೃಹ ಸಚಿವ ಸೂಚನೆ ಮೇರೆಗೆ ತತ್‌ಕ್ಷಣವೇ ಸಂಚಾರಿ ಪೊಲೀಸ್‌ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಅರೆ ಹೆಲ್ಮೆಟ್‌ ತಪಾಸಣೆ ಕಾರ್ಯ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next