Advertisement

ಸೆಲ್ವಿಗೆ ಫ‌ಸ್ಟ್‌ಲೇಡಿ ಪ್ರಶಸ್ತಿ

06:05 AM Jan 23, 2018 | Team Udayavani |

ಹೊಸದಿಲ್ಲಿ: ಸೆಲ್ವಿ, ದಕ್ಷಿಣ ಭಾರತದ ಪ್ರಥಮ ಟ್ಯಾಕ್ಸಿ ಚಾಲಕಿ. ಬೆಂಗಳೂರಿನಲ್ಲಿ ಇವರು ಟ್ಯಾಕ್ಸಿ ಚಾಲನೆ ಮಾಡಿ ಜೀವನ ನಡೆಸುತ್ತಿದ್ದಾರೆ. ದೇಶದ ಸಾಧಕಿಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ನೀಡುವ “ಫ‌ಸ್ಟ್‌ ಲೇಡಿ’ ಪ್ರಶಸ್ತಿ ಪಡೆದ ಸಾಧಕಿಯರಲ್ಲಿ ಇವರೂ ಒಬ್ಬರು. 

Advertisement

ತಾವು ಆಯ್ದುಕೊಂಡಿರುವ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿರುವ ಸಾಧಕಿಯರಿಗೆ ಪ್ರತಿವರ್ಷ ನೀಡುವ “ಫ‌ಸ್ಟ್‌ ಲೇಡಿ’ ಪ್ರಶಸ್ತಿಯನ್ನು ಈ ಬಾರಿ 112 ಸಾಧಕಿಯರಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಮತ್ತು ಸಚಿವೆ ಮೇನಕಾ ಗಾಂಧಿ ಪ್ರದಾನ ಮಾಡಿದರು. 

ಸೆಲ್ವಿ 14ನೇ ವಯಸ್ಸಿನಲ್ಲಿ ಮದುವೆಯಾದ ವರು. ಕೌಟುಂಬಿಕ ಕಿರುಕುಳದಿಂದ ಬೇಸತ್ತು ತಮ್ಮ 18ನೇ ವಯಸ್ಸಿಗೇ ಕುಟುಂಬ ತೊರೆದು ಸ್ವತಂತ್ರವಾಗಿ ಬದುಕು ಕಟ್ಟಿಕೊಂಡವರು. ಈ ಪ್ರಶಸ್ತಿ ಪಡೆದ ಸೆಲ್ವಿ, “ಒಂದು ಹಣತೆಯು ಆರಂಭದಲ್ಲಿ ಸಣ್ಣದೆಂದು ಕಾಣಬಹುದು. ಅದನ್ನು ಎಲ್ಲರೂ ನಿರ್ಲಕ್ಷಿಸಬಹುದು. ಆದರೆ, ಅದೇ ಹಣತೆಯಿಂದ ಸಾವಿರಾರು ದೀಪಗಳು ಬೆಳಗಬಹುದು. ನಾನು ಪಡೆದ ಈ ಪ್ರಶಸ್ತಿ ಇತರ ಹುಡುಗಿಯರು ಮತ್ತು ಮಹಿಳೆಯರು ಸಾಮಾಜದಲ್ಲಿ ತಮ್ಮದೇ ಆತ ಗುರುತು ಮೂಡಿಸಲು ಉತ್ತೇಜನವಾಗಲಿದೆ’ ಎಂದಿದ್ದಾರೆ. ಕೆನಡಾದ ಚಿತ್ರ ತಯಾರಕಿ ಎಲಿಸಾ ಪಲೊಸ್ಕಿ  ಸೆಲ್ವಿ ಜೀವನ ಆಧರಿಸಿ “ಡ್ರೈವಿಂಗ್‌ ವಿದ್‌ ಸೆಲ್ವಿ’ ಎಂಬ ಸಾಕ್ಷ್ಯಚಿತ್ರ ತಯಾರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next