Advertisement

ಕಾಳಸಂತೆಯಲ್ಲಿ ಅಕ್ಕಿ ಮಾರಾಟ

05:06 PM Apr 10, 2020 | Suhan S |

ಶ್ರೀರಂಗಪಟ್ಟಣ: ಪಟ್ಟಣದ ಟಿಎಪಿಸಿಎಂಎಸ್‌ ಗೋದಾಮಿನಲ್ಲಿ ಅಕ್ರಮವಾಗಿ ಅಕ್ಕಿ ಮಾರಾಟವಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ತಹಶೀಲ್ದಾರ್‌ ರೂಪಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ಬಳಿಕ ಮಾತನಾಡಿದ ಅವರು, ಸರ್ಕಾರ ಬಡವರಿಗೆ ಹಂಚುವ ಅಕ್ಕಿಯನ್ನು ವ್ಯಕ್ತಿಯೊಬ್ಬರು ಕಡಿಮೆ ಬೆಲೆಯಲ್ಲಿ ಖರೀದಿಸುತ್ತಿದ್ದಾರೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಗೋದಾಮಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲಿಸಿದ್ದೇನೆ ಎಂದರು. ಟಿಎಪಿಸಿಎಂಎಸ್‌ನ ಸಿಬ್ಬಂದಿಯಿಂದ ಮಾಹಿತಿ ಪಡೆದು ಆಹಾರ ನಿರೀಕ್ಷಕರಿಗೆ ಕರೆ ಮಾಡಿ ಸರ್ಕಾರದಿಂದ ಟಿಎಂಪಿಸಿಎಂಎಸ್‌ಗೆ ಹಾಗೂ ಇಲ್ಲಿಂದ ಪಡಿತರ ಅಂಗಡಿಗಳಿಗೆ ಸರಬರಾಜು ಆಗಿರುವ ಅಕ್ಕಿ ವಿವಿರ ನೀಡುವಂತೆ ತಾಕೀತು ಮಾಡಿದರು.

ಸರ್ಕಾರ ಈ ಬಾರಿ ಎರಡು ತಿಂಗಳ ಪಡಿತರಒಟ್ಟಿಗೆ ನೀಡುತ್ತಿದೆ. ಹಾಗಾಗಿ ಟಿಎಪಿಸಿಎಂಎಸ್‌  ನಿಂದ ಸಂಬಂಧ ಪಟ್ಟ ಪಡಿತರ ಅಂಗಡಿಗಳಿಗೆ 2-3 ಲಾರಿಗಳ ಮೂಲಕ ಅಕ್ಕಿ ಸರಬರಾಜು ಮಾಡಲಾಗುತ್ತಿದೆ. ಸರ್ಕಾರ ಟಿಎಪಿಸಿಎಂಎಸ್‌ಗೆ ಕಳುಹಿಸಿರುವ ಅಕ್ಕಿ ಹಾಗೂ ಪಡಿತರ ಅಂಗಡಿಗಳಿಗೆ ತರಿಸಿರುವ ಅಕ್ಕಿ ಎರಡು ತಾಳೆಯಾಗುತ್ತಿದೆ. ಆದರೆ, ಟಿಎಪಿಸಿಎಂಸ್‌ನಲ್ಲಿ ಅಕ್ಕಿ ಮಾರಾಟವಾಗಿಲ್ಲ ಎಂದು ಆಹಾರ ನಿರೀಕ್ಷಕಿ ಪೂರ್ಣಿಮಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next