Advertisement

ವಿದ್ಯಾಲಯ ಪರಿಸರಗಳನ್ನು ಮಾಫಿಯಾದಿಂದ ಮಾದಕ ವಸ್ತು ಮಾರಾಟ

02:50 AM Jul 08, 2017 | Team Udayavani |

ಕುಂಬಳೆ: ಮಾದಕ ವಸ್ತುಗಳ ಮಾರಾಟ ತಡೆಯುವ ಕಾರ್ಯಕ್ರಮಗಳು, ತಂಬಾಕು ವಿರೋಧಿ ದಿನಾಚರಣೆ, ಬೋಧನಾ ಶಿಬಿರಗಳು, ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾ ಮಗಳ ಕುರಿತು ಪ್ರಾತ್ಯಕ್ಷಿಕೆ ನಡೆಯುತ್ತಿರುವ ಮಧ್ಯೆ ಇದೀಗ ಮೊಗ್ರಾಲ್‌, ಕುಂಬಳೆ, ಮೊಗ್ರಾಲ್‌ ಪುತ್ತೂರು ಹೈಯರ್‌ ಸೆಕೆಂಡರಿ ವಿದ್ಯಾಲಯಗಳ  ಪರಿಸರಗಳನ್ನು ಕೇಂದ್ರೀ ಕರಿಸಿ ಮಾದಕ ಮಾಫಿಯಾ ತಂಡದಿಂದ ಮಾದಕ ವಸ್ತುಗಳ ಮಾರಾಟ ಭಾರೀ ಗುಟ್ಟಿನಲ್ಲಿ ನಡೆಯುತ್ತಿದೆ.
 
ಗಾಂಜಾ ಬದಲು ಮಾದಕ ಮಾತ್ರೆಗಳ ಮಾರಾಟ
ಗಾಂಜಾ ಮಾರಾಟ ಮಾಡುತ್ತಿದ್ದು,ಪೊಲೀಸರ ಹದ್ದುಗಣ್ಣು ಬೀಳುತ್ತಿರುವ ಸುಳಿವು ತಿಳಿದ ತಂಡ ಇದೀಗ ನಿಲುವು ಬದಲಾ ಯಿಸಿ ಗುಪ್ತವಾಗಿ ಮಾದಕ ಮಾತ್ರೆಯ ಮಾರಾಟಕ್ಕೆ ತೊಡಗಿದೆ. ಈ ಮಾತ್ರೆಗಳ ಮಾರಾಟ ಜಾಲ ವಿದ್ಯಾಲಯ ಪರಿಸರದಲ್ಲಿ ಸಕ್ರಿಯವಾಗಿದೆ. ಕಾಸರಗೋಡು ಭಾಗದಿಂದ ಬೈಕಿನಲ್ಲಿ ಆಗಮಿಸುವ ತಂಡಗಳು ಮಾದಕ ಮಾತ್ರೆಗಳ ವಿತರಣೆಯ ಜಾಲದಲ್ಲಿ ಸಕ್ರಿಯವಾಗಿವೆ. ವಿದೇಶಗಳಲ್ಲಿ ಉತ್ಪಾದಿಸಿದ ಈ ಮಾತ್ರೆಗಳನ್ನು ಅಲ್ಲಿ ಕ್ಲಬ್‌ ಪಾರ್ಟಿ ವೇಳೆ  ಬಳಸಲಾಗುತ್ತದೆ. ಈ ಮಾತ್ರೆಯನ್ನು ಸೇವಿಸಿದಲ್ಲಿ ಗಂಟೆಗಳ ಕಾಲ ಕಿಕ್‌ ಉಳಿಯುವುದು. ಇದನ್ನು ಸೇವಿಸಿದಲ್ಲಿ ಕಿಡ್ನಿ ವೈಫಲ್ಯ, ಹೃದಯಾಘಾತ ಇನ್ನಿತರ ಅಪಾಯ ಸಂಭವಿಸುವ ಸಾಧ್ಯತೆ ಇದೆ. 

Advertisement

ಮಾಫಿಯಾ  ತಂಡದ ಸೆರೆಗೆ ಆಗ್ರಹ
ಮಾರಕ ಮಾದಕ ದಂಧೆಯಿಂದ ವಿದ್ಯಾರ್ಥಿಗಳು ದಾರಿ ತಪ್ಪಿ ಮಾದಕ ವಸ್ತುಗಳ ದುಷcಟಗಳಿಗೆ ಬಲಿಯಾಗುತ್ತಿರುವರು. ಪೊಲೀಸರು ಜಾಲವನ್ನು ಭೇದಿಸಲು ಗುಪ್ತ ಕಾರ್ಯಾಚರಣೆ ನಡೆಸುತ್ತಿದ್ದರೂ ಕೂದಲೆಳೆ ಅಂತರದಲ್ಲಿ ಅವರು  ಪಾರಾಗುತ್ತಿ ದ್ದಾರೆ. ಮಾದಕ ವಸ್ತು ಮಾರಾಟ ತಂಡವನ್ನು ತತ್‌ಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂಬುದಾಗಿ ಡಿ.ವೈ.ಎಫ್‌.ಐ. ಮೊಗ್ರಾಲ್‌ ಘಟಕ ಪೊಲೀಸರಲ್ಲಿ ಆಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next