Advertisement

ದುಪ್ಪಟ್ಟಾಯ್ತು ರಸಗೊಬ್ಬರ ಮಾರಾಟ

08:30 AM Jun 03, 2020 | mahesh |

ಕಡೆಗೂ ಕೃಷಿ ವಲಯ ನಸುನಕ್ಕಿದೆ. ಮೇನಲ್ಲಿ ದೇಶಾದ್ಯಂತ ರಸಗೊಬ್ಬರ ಮಾರಾಟ ಪ್ರಮಾಣ ಶೇ.98ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಮೇಗೆ ಹೋಲಿಸಿದರೆ ಮಾರಾಟ ಪ್ರಮಾಣ ದುಪ್ಪಟ್ಟಾಗಿದೆ. ಅಷ್ಟೇ ಅಲ್ಲ, ನಿರಂತರ ಏಳನೇ ತಿಂಗಳು ರಸಗೊಬ್ಬರ ಮಾರಾಟ ಎರಡಂಕಿ (ಟನ್‌ ಲೆಕ್ಕ) ಬೆಳವಣಿಗೆ ದಾಖಲಿಸಿದೆ. ಇದರೊಂದಿಗೆ ಕೃಷಿ ಕ್ಷೇತ್ರದ ಪ್ರಗತಿ ಕೂಡ ಉತ್ತಮವಾಗಿದೆ. ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಳ ಹಾಗೂ ಸಂಕಷ್ಟದಲ್ಲಿರುವ ದೇಶದ ಆರ್ಥಿಕ ಸ್ಥಿತಿ ಸುಧಾರಣೆಗೆ ಸಂಬಂಧಿಸಿದಂತೆ ಇದೊಂದು ಆಶಾದಾಯಕ ಬೆಳವಣಿಗೆ ಎಂದು ರಸಗೊಬ್ಬರ ಇಲಾಖೆ ಹೇಳಿದೆ.

Advertisement

ಬೇಡಿಕೆ ಹೆಚ್ಚಲು ಕಾರಣವೇನು?
ಚಳಿಗಾಲದ ಬೆಳೆ ಅವಧಿಯಿಂದಲೂ ರಸಗೊಬ್ಬರಕ್ಕೆ ಭಾರೀ ಬೇಡಿಕೆಯಿದೆ. ಇದಕ್ಕೆ ಕಾರಣ ಕಳೆದ ವರ್ಷ ಮುಂಗಾರು ಮಳೆ ದಿನಗಳು ವಿಸ್ತರಣೆಯಾಗಿ ಸೊಂಪಾಗಿ ಮಳೆಯಾಗಿರುವುದು. ಇದರಿಂದ ಅಂತರ್ಜಲ ಮಟ್ಟ ಉತ್ತಮಗೊಂಡಿದೆ. ಕೆರೆ-ಕಟ್ಟೆ, ಅಣೆಕಟ್ಟೆಗಳೂ ತುಂಬಿವೆ. ಪರಿಣಾಮ ಕೃಷಿಕರು ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ, ನಾಟಿ ಮಾಡಿದ್ದಾರೆ. ಬಿತ್ತನೆ ಹೆಚ್ಚಿದ್ದರಿಂದ ಸಹಜವಾಗೇ ರಸಗೊಬ್ಬರಕ್ಕೂ ಬೇಡಿಕೆ ಹೆಚ್ಚಿದೆ.

40.02 ಲಕ್ಷ ಟನ್‌2020ರ ಮೇನಲ್ಲಿ ಮಾರಾಟವಾದ ರಸಗೊಬ್ಬರ.
20.24 ಲಕ್ಷ ಟನ್‌ 2019ರ ಮೇನಲ್ಲಿ ಮಾರಾಟವಾದ ರಸಗೊಬ್ಬರ.
20.24 ಲಕ್ಷ ಟನ್‌2019ರ ಮೇನಲ್ಲಿ ಮಾರಾಟವಾದ ರಸಗೊಬ್ಬರ.
22.61 ಲಕ್ಷ ಟನ್‌ 2018ರ ಮೇನಲ್ಲಿ ಮಾರಾಟವಾದ ರಸಗೊಬ್ಬರ.
5.9% 2020ರ ಜನವರಿ-ಮಾರ್ಚ್‌ ವೇಳೆ ಕೃಷಿ ಕ್ಷೇತ್ರದ ಪ್ರಗತಿ.
70% ಸಾಲ ರೂಪದಲ್ಲಿ ಗೊಬ್ಬರ ಖರೀದಿಸುತ್ತಿದ್ದ ರೈತರ ಪ್ರಮಾಣ.
30% ಹಾಲಿ ಸಾಲ ರೂಪದಲ್ಲಿ ಗೊಬ್ಬರ ಖರೀದಿಸುತ್ತಿರುವ ರೈತರು

Advertisement

Udayavani is now on Telegram. Click here to join our channel and stay updated with the latest news.

Next