ಚಂಡೀಗಢ: ಹರಿಯಾಣ ಕಾಂಗ್ರೆಸ್‌ನಲ್ಲಿ ವಿಭಿನ್ನ ಬಣಗಳಲ್ಲಿ ಗುರುತಿಸಿಕೊಂಡಿದ್ದ ಇಬ್ಬರು ನಾಯಕರು ರಾಹುಲ್ ಜತೆ ಒಂದೇ ವೇದಿಕೆ ಹಂಚಿಕೊಂಡಿರುವುದು ಕುತೂಹಲ ಮೂಡಿಸಿದೆ. ಭೂಪಿಂಧರ್ ಹೂಡಾ ಮತ್ತು ಕುಮಾರಿ ಸೆಲ್ಜಾ ಅಸಧ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಜತೆಗೆ ಭಾಗಿಯಾದರು. ರಾಜ್ಯದಲ್ಲಿ ಟಿಕೆಟ್ ಹಂಚಿಕೆಯಾದ ಸಮಯಲ್ಲಿ ಈ ಇಬ್ಬರು ನಾಯಕರ ನಡುವೆ ವೈಮನಸ್ಯ ಉಂಟಾಗಿತ್ತು. ವಿರೋಧಿ ಹೇಳಿಕೆಗಳನ್ನು ಇಬ್ಬರೂ ನೀಡಿದ್ದರು. ಇದೀಗ ರಾಹುಲ್ ಗಾಂಧಿ ಭಿನ್ನಮತ ಪರಿಹಾರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಚುನಾವಣೆ ಬಳಿಕ ಪ್ರಧಾನಿ ಮೋದಿ ಮುಖದಲ್ಲಿ ಆತಂಕ: ರಾಹುಲ್
ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಪ್ರಧಾನಿ ಮೋದಿ ಮುಖದಲ್ಲಿ ಆತಂಕ ಉಂಟಾ ಗಿದೆ. ಹೀಗೆಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ಹರಿಯಾಣದ ಅಸ್ಸಾಂದ್ ಎಂಬಲ್ಲಿ ಚುನಾವಣ ರ್ಯಾಲಿಯಲ್ಲಿ ಮಾತನಾಡಿದ ಅವರು, “ಹಿಂದಿನ ಸಂದರ್ಭಗಳಲ್ಲಿ ಅವರು 56 ಇಂಚಿನ ಎದೆ ಉಬ್ಬಿಸಿ ಮಾತನಾಡು ತ್ತಿದ್ದರು. ಈಗ ಅವರು ತಮಗೆ ದೇವರ ಜತೆಗೆ ನೇರ ಸಂಪರ್ಕ ಇದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಫೈಜಾ ಬಾದ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಯನ್ನು ಗೆಲ್ಲಿಸಿ ಮೋದಿಯವರಿಗೆ ದೇವರು ಒಳ್ಳೆಯ ಪಾಠ ಕಲಿಸಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.
ದೇಶದಲ್ಲಿನ ಉದ್ಯೋಗ ವ್ಯವಸ್ಥೆಯನ್ನು ಪ್ರಧಾನಿ ವ್ಯವಸ್ಥಿತವಾಗಿ ನಾಶಮಾಡಿದ್ದಾರೆ ಎಂದು ರಾಹುಲ್ ಆರೋಪಿಸಿದರು. ಇತ್ತೀಚೆಗೆ ಅಮೆರಿಕಕ್ಕೆ ಹೋಗಿದ್ದ ಸಮಯದಲ್ಲಿ ಹರಿಯಾಣದ ಜನರನ್ನು ಭೇಟಿ ಮಾಡಿದ್ದೆ. ತಮ್ಮ ರಾಜ್ಯದಲ್ಲಿ ಉದ್ಯೋಗ ಸಿಗದ ಕಾರಣ ಇಲ್ಲಿಗೆ ಬಂದಿದ್ದಾರೆ. ಅಮೆರಿಕಕ್ಕೆ ಬರುವುದಕ್ಕಾಗಿ ಭೂಮಿಯನ್ನು ಅವರು ಮಾರಾಟ ಮಾಡಿದ್ದಾರೆ. ಇದಕ್ಕೆಲ್ಲ ಕಾರಣವಾಗಿದ್ದು ಬಿಜೆಪಿ ಎಂದು ಅವರು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಮಹಿಳೆಯರಿಗೆ ಮಾಸಿಕ 2,000 ರೂ., 500 ರೂ.ಗೆ ಸಿಲಿಂಡರ್, 2 ಲಕ್ಷ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಭರವಸೆ ನೀಡಿದರು.