Advertisement

ಮೊಬೈಲ್ ದಾಸರಿಗಾಗಿ ಸೆಲ್ಫಿ ಮಮ್ಮಿ, ಗೂಗಲ್‌ ಡ್ಯಾಡಿ

10:07 AM Feb 22, 2020 | mahesh |

ಈಗಂತೂ ಮೊಬೈಲ್‌ನದ್ದೇ ಸುದ್ದಿ. ಯಾರ ಕೈ ನೋಡಿದರೂ ಮೊಬೈಲ್‌ ಇದ್ದೇ ಇರುತ್ತೆ. ಅದರಲ್ಲೂ ವಾಟ್ಸಾಪ್‌, ಫೇಸ್‌ಬುಕ್‌, ಇನ್ಸ್‌ಟಾಗ್ರಾಂ, ಟ್ವಿಟ್ಟರ್‌…ಹೀಗೆ ಒಂದಾ ಎರಡಾ ಅನೇಕ ಆ್ಯಪ್‌ಗ್ಳಿಗೆ ಈಗಿನ ಜನ ಅಂಟಿಕೊಂಡಿದ್ದಾರೆ. ಅದರ ಸುತ್ತವೇ ಒಂದು ಕಥೆ ಹೆಣೆದು, ಸದ್ದಿಲ್ಲದೆಯೇ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ ನಿರ್ದೇಶಕ ಮಧುಚಂದ್ರ.

Advertisement

ಹೌದು, ಆ ಚಿತ್ರಕ್ಕೆ “ಸೆಲ್ಫಿ ಮಮ್ಮಿ, ಗೂಗಲ್‌ ಡ್ಯಾಡಿ’ ಎಂದು ನಾಮಕರಣ ಮಾಡಿದ್ದಾರೆ. ಈ ಚಿತ್ರದ ವಿಶೇಷ­ವೆಂದರೆ, ನಲವತ್ತು ಮಂದಿ ಸಮಾನ ಮನಸ್ಕರು ಸೇರಿ ನಿರ್ಮಾಣ ಮಾಡಿದ್ದಾರೆ. ಮೊದಲೇ ಹೇಳಿದಂತೆ, ಇದು ಮೊಬೈಲ್‌ಗೆ ದಾಸರಾಗಿರುವವರ ಕುರಿತ ಕಥೆ ಹೊಂದಿದೆ. ಈ ರೀತಿಯ ಕಥೆ ರೆಡಿ ಮಾಡಿಕೊಂಡು ಒಂದಷ್ಟು ಅಭಿಪ್ರಾಯ ಸಂಗ್ರಹಿಸಲು ಕೆಲವರನ್ನು ಭೇಟಿ ಮಾಡಿದ ನಿರ್ದೇಶಕರಿಗೆ, ತಮ್ಮ ಮನೆಯಲ್ಲೇ ಈ ರೀತಿಯ ಮೊಬೈಲ್‌ ಗೀಳು ಇದೆ. ನಾವೂ ನಿರ್ಮಾಣಕ್ಕೆ ಕೈ ಜೋಡಿಸುತ್ತೇವೆ ಅಂತ ಎಲ್ಲರೂ ಸಾಥ್‌ ಕೊಟ್ಟಿದ್ದರಿಂದಲೇ 40 ಜನ ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಅಷ್ಟೂ ಜನರನ್ನು ಒಂದೆಡೆ ಸೇರಿಸಿ, ಅವರಿಗೆ ಸಿನಿಮಾ ಕಥೆ ವಿವರಿಸಿ, ಯಾವುದೇ ಸಮಸ್ಯೆ ಇಲ್ಲದಂತೆ ಚಿತ್ರ ಮಾಡಿ ಮುಗಿಸಿದ್ದಾರೆ ಮಧುಚಂದ್ರ.

ಇನ್ನು, ಸೃಜನ್‌ ಲೋಕೇಶ್‌ ಹಾಗು ಮೇಘನಾರಾಜ್‌ ಇಲ್ಲಿ ಇಬ್ಬರು ಮಕ್ಕಳ ಪೋಷಕರಾಗಿ ನಟಿಸಿದ್ದಾರೆ. ಇಂದು ಮನೆಯಲ್ಲಿ ಸಣ್ಣ ಮಕ್ಕಳಿಂದ ಹಿಡಿದು, ದೊಡ್ಡವರವರೆಗೂ ಮೊಬೈಲ್‌ಗೆ ಅಂಟಿಕೊಂಡಿರುತ್ತಾರೆ. ಅದರಿಂದ ಏನೆಲ್ಲಾ ಪರಿಣಾಮ ಬೀರುತ್ತೆ ಎಂಬುದು ಕಥೆ. ಸಿನಿಮಾದಲ್ಲಿ ಪತಿ ಸದಾ ಗೂಗಲ್‌ನಲ್ಲಿ ಹೊಸ ಹೊಸ ವಿಷಯ ಹುಡುಕಾಟ ನಡೆಸುತ್ತಿದ್ದರೆ, ಪತ್ನಿ ಯಾರೇ ಮನೆಗೆ ಬಂದರೂ, ಮೊದಲು ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಫೇಸ್‌ಬುಕ್‌ನಲ್ಲಿ ಅಪಲೋಡ್‌ ಮಾಡುವ ಖಯಾಲಿ ಹೊಂದಿರುತ್ತಾಳೆ. ಅವರ ಮಕ್ಕಳೂ ಸಹ ಮೊಬೈಲ್‌ನೊಂದಿಗೆ ತಮ್ಮದೆ ಲೋಕದಲ್ಲಿ ಮುಳುಗಿರುತ್ತಾರೆ. ಇದೆಲ್ಲವೂ ಹೇಗೆಲ್ಲಾ ಅನಾಹುತಕ್ಕೆ ಕಾರಣವಾಗುತ್ತೆ ಎಂಬುದನ್ನು ಹಾಸ್ಯ ಮೂಲಕವೇ ಹೇಳಲಾಗಿದೆಯಂತೆ.

ಚಿತ್ರದಲ್ಲಿ ಅಚ್ಯುತ್‌ ಕುಮಾರ್‌, ಪವನ್‌ಕುಮಾರ್‌, ಮಾ.ಅಲಾಪ್‌, ಬೇಬಿಶ್ರೀ ಇತರರು ನಟಿಸಿದ್ದಾರೆ. ಶಮಂತ್‌ನಾಗ್‌ ಸಂಗೀತವಿದೆ. ರವೀಂದ್ರನಾಥ್‌ ಛಾಯಾಗ್ರಹಣ ಮಾಡಿದರೆ, ಸುರೇಶ್‌ಆರು¾ಗಂ ಸಂಕಲನವಿದೆ. ಮದನ್‌ಹರಣಿ ನೃತ್ಯವಿದೆ. ಆಕಾಶ ಬುತ್ತಿ ಫಿಲಂಸ್‌ ಮೂಲಕ ಸಿದ್ದಗೊಂಡಿರುವ ಸಿನಿಮಾಗೆ “ಯು’ ಪ್ರಮಾಣ ಪತ್ರ ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next