Advertisement
ಮೈಸೂರಿನ ಟಿ.ಕೆ. ಲೇಔಟ್‌ನ ನಿವಾಸಿ, ಕೂಲಿ ಕಾರ್ಮಿಕ ನಾಗರಾಜ್ (42) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಪ್ರೀತಿಸಿ ಮದುವೆಯಾದ ಪತ್ನಿಯಿಂದ ಅವಮಾನ, ಕಿರುಕುಳ, ಹಿಂಸೆಗೀಡಾದ ನಾಗರಾಜ್, ತಾನು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದರ ಬಗ್ಗೆ ಸೆಲ್ಫಿ ವಿಡಿಯೋ ಮಾಡಿ, ತನ್ನ ಸ್ನೇಹಿತರಿಗೆ ಕಳುಹಿಸಿದ ಬಳಿಕ ಮನೆಯಲ್ಲಿ ನೇಣು
ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೆಚ್ಚಾಗಿ ನಿತ್ಯ ಜಗಳ ನಡೆಯುತ್ತಿತ್ತು. ಅಲ್ಲದೇ ಪತ್ನಿ ಕೂಡ ನೀನು ಚೆನ್ನಾಗಿಲ್ಲ. ನಿನ್ನ ಆಸ್ತಿ ಮಾರಾಟ ಮಾಡಿ ನನ್ನ ಪಾಲು ಕೊಡು ಎಂದು ನಿತ್ಯ ಜಗಳವಾಡುತ್ತಿದ್ದರು. ಇದಕ್ಕೆ ನಾಗರಾಜ್ ಅವರ ಅತ್ತೆ, ಇಬ್ಬರು ಬಾವಮೈದುನರು ಮತ್ತು ನೆರೆ ಮನೆ ನಿವಾಸಿ ನಾಗಮಣಿ ಕೂಡ ಕುಮ್ಮಕ್ಕು ನೀಡುತ್ತಿದ್ದರು. ಇದನ್ನೂ ಓದಿ:ಕನಿಷ್ಠ ಒಂದು ವರ್ಷ ವಿದ್ಯುತ್ ದರ ಏರಿಕೆಯ ಬರೆ ಹಾಕಬಾರದು: ಕುಮಾರಸ್ವಾಮಿ ಒತ್ತಾಯ
Related Articles
ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ನಾಗರಾಜ್ ಅವರ ಪತ್ನಿ ಮಂಜುಳಾ ಅವರನ್ನು ಬಂಧಿಸಿರುವ ಪೊಲೀಸರು, ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement