Advertisement

ಒಗ್ಗಟ್ಟಿನ ಬಲದಿಂದ ಸ್ವಾಭಿಮಾನಿ ಬದುಕು: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

03:03 PM Jun 16, 2022 | Team Udayavani |

ಶಿರಸಿ: ಎಲ್ಲರೂ ಸಂಘಟನೆಗೊಂಡಾಗ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಬಹುದು. ಸಮಾಜದಲ್ಲಿ ಸ್ವಾಭಿಮಾನ ಜೀವನ ನಡೆಸಲು ನೆರವಾಗುತ್ತದೆ. ಒಗ್ಗಟ್ಟೇ ಬಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Advertisement

ಗುರುವಾರ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಮನುವಿಕಾಸ ಮತ್ತು ಈಡಲ್ ಗೀವ್ ಫೌಂಡೇಶನ್ ಹಮ್ಮಿಕೊಂಡ ಮಹಿಳಾ‌ ಸಮಾವೇಶದಲ್ಲಿ ಪಾಲ್ಗೊಂಡು‌ ಮಾತನಾಡಿ, ಹಠದಿಂದ ಸಂಕಲ್ಪ ಶಕ್ತಿ ಮಾಡಬೇಕು. ಇದರಿಂದ‌ ಕೀರ್ತಿ ತರುವ ಕಾರ್ಯ ಮಾಡಲು ಸಾಧ್ಯ ಎಂದರು.

ಸ್ವಾರ್ಥದ ಸಂಘಟನೆಗಳು ಇವೆ. ಆದರೆ, ಮನುವಿಕಾಸ ರಾಷ್ಟ್ರಕ್ಕೆ ಮುಖ ಮಾಡಿ ಬೆಳೆಸುತ್ತಿದೆ ಎಂದ ಅವರು, ಮನು ವಿಕಾಸ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ‌ ಕೆಲಸ ಮಾಡುತ್ತಿದೆ. ಸ್ವಯಂ ಸೇವಾ‌ ಸಂಸ್ಥೆ ಹೇಗಿರಬೇಕು ಎಂಬುದಕ್ಕೆ ಮನು ವಿಕಾಸ ಮಾದರಿ ಎಂದು ಬಣ್ಣಿಸಿದರು.

ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣಾ ಕಾರ್ಯ ಮಾಡುತ್ತಿದೆ ಎಂದ ಅವರು,ಸ್ವಸಹಾಯ ಸಂಘ ಹಾಗೂ ಅದರ ಮೂಲಕ ಮಹಿಳೆಯರನ್ನು ಸ್ವಾವಲಂಭಿ ಮಾಡುವ ಕಾರ್ಯ ಮಾಡುತ್ತಿದೆ. ಮನು ವಿಕಾಸದಿಂದ ಸಾಧಕ‌ ಮಹಿಳೆಯರಿಗೂ, ಅವರಿಂದ ಸಂಸ್ಥೆಗೂ ಹೆಸರು ಎಂದರು.

ಮನುವಿಕಾಸದ ಗಣಪತಿ ಭಟ್ಟ ಮಾತನಾಡಿ, ಮಹಿಳಾ ನೇತಾರರು ಬೇಕು. ತನಗೋಸ್ಕರ ಮಾತ್ರವಲ್ಲ, ಸಮಾಜಕ್ಕೆ ಕೆಲಸ‌ ಮಾಡುವವರನ್ನು ಸಮಾಜ ಬೆಂಬಲಿಸುತ್ತದೆ. ಮಹಿಳೆ‌ ಸ್ವತಂತ್ರವಾಗಿ ನಿಂತರೆ ಏನಾದರೂ ಮಾಡಬಹುದು ಎಂದ ಅವರು, ಒಂದು ಸಾವಿರ‌ ಸಿದ್ದಿ ಕುಟುಂಬ ಮುಖ್ಯ ವಾಹಿನಿಗೆ ತರಲಾಗುತ್ತದೆ ಎಂದರು.

Advertisement

ವೇದಿಕೆಯಲ್ಲಿ ‌ಕೆಡಿಸಿಸಿ‌ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಆರ್.ಜಿ.ಭಾಗವತ, ಶಿಶು ಅಭಿವೃದ್ದಿ ಇಲಾಖೆ ದತ್ತಾತ್ರಯ ಭಟ್ಟ, ಪತ್ರಕರ್ತ ಜಿ.ಸುಬ್ರಾಯ‌ ಭಟ್ಟ‌ ಬಕ್ಕಳ, ಸಾಧನಾ ಸಂಸ್ಥೆಯ ಡಾ. ಇಸೆಬೆಲ್ಲ ದಾಸ್, ಎಂ.ಜಿ.ಹೆಗಡೆ ಇತರರು ಇದ್ದರು.

ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ನಿರ್ದೇಶಕ ಬಿ.ಕೆ.ಕೆಂಪರಾಜು ವಹಿಸಿದ್ದರು. ಕದಂಬ ಕಲಾ ವೇದಿಕೆಯಿಂದ‌ ಪ್ರಾರ್ಥಿಸಲಾಯಿತು. ಅಶ್ವತ್ಥ ನಾಯ್ಕ ಸ್ವಾಗತಿಸಿದರು. ಶ್ರೀಕಾಂತ ಹೆಗಡೆ ವಂದಿಸಿದರು. ಶೇಖರ ನಾಯ್ಕ ನಿರ್ವಹಿಸಿದರು. ಇದೇ ವೇಳೆ ಮಹಾದೇವಿ ಅರೇರ, ಶೋಭಾ ಅರೇರ, ಕಾಳಿಕಾ ಭವಾನಿ ಸಂಸ್ಥೆ, ಕಮಲಾ‌ ನಾಯ್ಕ, ಹುಲಿಮನೆ ಸಂಘ, ಲಕ್ಷ್ಮೀ ಎಸಳೆ, ಶ್ಯಾಮಲಾ‌ ನಾಯ್ಕ, ಮಾರಿಕಾಂಬಾ ಸಂಘ,ಶೋಭಾ ನಾಯ್ಕ, ಚೈತನ್ಯ ಸಂಘವನ್ನು ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next