Advertisement

ಆರನೇ ಮದುವೆಗೆ ಮುಂದಾಗಿದ್ದ ಸ್ವಯಂ ಘೋಷಿತ ಬಾಬಾ ಅನೂಜ್ ಚೇತನ್ ಕತೇರಿಯ ಅಂದರ್..!

03:41 PM Jun 19, 2021 | Team Udayavani |

ಕಾನ್ಪುರ : ತನ್ನ ಹಿಂದಿನ ಪತ್ನಿಯರಿಗೆ ಕಾನೂನಿನನ್ವಯ ವಿವಾಹ ವಿಚ್ಛೇದ ನೀಡದೇ ಆರನೇ ಮದುವೆಗೆ ಮುಂದಾಗಿದ್ದ ಸ್ವಯಂ ಘೋಷಿತ ಬಾಬಾನೋರ್ವ ನನ್ನು  ಕಿಡ್ವಾಯ್ ಪೋಲೀಸರು ಬಂಧಿಸಿರುವ ಘಟನೆ ನಡೆದಿದೆ.

Advertisement

ಆರನೇ ವಿವಾಹಕ್ಕೆ ಮುಂದಾಗಿದ್ದ ಅನೂಜ್ ಚೇತನ್ ಕತೇರಿಯ  ಎಂಬ ಸ್ವಯಂ ಘೋಷಿತ ಬಾಬಾನನ್ನು ಇಂದು(ಶನಿವಾರ, ಜೂನ್ 19) ಕಾನ್ಪುರದ ಶಹಜಾನ್ಪುರದಲ್ಲಿ ಎಂಬಲ್ಲಿ ಬಂಧಿಸಿದ್ದಾರೆ.

ಹನಿಟ್ರ್ಯಾಪ್ ಪ್ರಕರಣದಲ್ಲಿಯೂ ತೊಡಗಿಕೊಂಡು ಹಲವಾರು ಯುವತಿಯರನ್ನು ವಂಚಿಸಿದ ಪ್ರಕರಣವೂ ಈತನ ಮೇಲಿದೆ, ಈಗಾಗಲೇ ಹಲವಾರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಜೂನ್ 23, 24ರಂದು ತಜಿಕಿಸ್ತಾನದಲ್ಲಿ ಭಾರತ, ಪಾಕಿಸ್ತಾನ್, ಎನ್ ಎಸ್ ಎ ಸಭೆ

ಮಾಜಿ ಪತ್ನಿಯರನ್ನು ಕಾನೂನಿಗೆ ಅನುಗುಣವಾಗಿ ವಿಚ್ಚೇದನ ಮಾಡದೆ, ಆರನೇ ವಿವಾಹದ ಸಿದ್ಧತೆಯಲ್ಲಿದ್ದ ಸ್ವಘೋಷಿತ ದೇವಮಾನವನನ್ನು ಬಂಧಿಸಲಾಗಿದೆ. ಅಲ್ಲದೇ, ಹಲವಾರು ಯುವತಿಯರನ್ನು ಹನಿಟ್ರ್ಯಾಪ್ ಬಲೆಯಲ್ಲಿ ಬೀಳುವಂತೆ ಮಾಡಿ ವಂಚನೆ ಮಾಡಿದ ಪ್ರಕರಣವೂ ದಾಖಲಿಸಲಾಗಿದೆ.

Advertisement

ಈ ಸ್ವಯಂ ಘೋಷಿತ ಬಾಬಾ ಈಗಾಗಲೇ ಮದುವೆಯಾಗಿದ್ದ ಐವರಲ್ಲಿ ಒಬ್ಬರಾದ ಪತ್ನಿ ನೀಡಿದ ದೂರಿನನ್ವಯ ಸ್ವತಃ ತಾನು ಬಾಬಾ ಎಂದು ಘೋಷಿಸಿಕೊಂಡಿದ್ದ ಈತ 2005 ರಲ್ಲಿ ಮೊದಲ ವಿವಾಹವಾಗಿದ್ದ. ಮೇಯಿನ್ ಪುರಿಯ ನಿವಾಸಿಯಾಗಿರುವ ಯುವತಿಯ ಮತ್ತು ಅನೂಜನ ವಿಚ್ಛೇದನ ಪ್ರಕರಣ ಕೋರ್ಟ್ ನಲ್ಲಿರುವಾಗಲೇ, 2010ರಲ್ಲಿ ಮತ್ತೊಂದು ವಿವಾಹವಾಗಿದ್ದ. ಈ ವಿವಾಹವೂ ವಿಚ್ಚೇದನಕ್ಕೆ ಬಂದು ತಲುಪಿತ್ತು.

ನಾಲ್ಕು ವರ್ಷದ ನಂತರ ಈತ ಅರೌಲಿಯ ಜಿಲ್ಲೆಯ ಯುವತಿಯೊಂದಿಗೆ ಇನ್ನೊಂದು ಮದುವೆಯಾದ. ಅದರ ಬೆನ್ನಲ್ಲೇ ಮೂರನೇ ಪತ್ನಿಯ ಸಂಬಂಧಿಯೊಬ್ಬಳನ್ನು ವಿವಾಹವಾದ. ಅದು ನಾಲ್ಕನೇ ವಿವಾಹವಾಗಿತ್ತು. ನಂತರ ನಾಲ್ಕನೇ ಪತ್ನಿ ಈತನ ಹಿನ್ನೆಲೆ ತಿಳಿದು ಆತ್ಮಹತ್ಯೆ ಮಾಡಿಕೊಂಡಳು.

2019ರಲ್ಲಿ ಮತ್ತೆ ಐದನೇ ವಿವಾಹವಾಗಿದ್ದ. ನಂತರ ಪತ್ನಿಯ ಮೇಲೆ ನಿರಂತರ ಸುಳ್ಳಾರೋಪಗಳನ್ನು ಮಾಡಲಾರಂಭಿಸಿದ ಈತ. ಈ ಹಿನ್ನಲೆಯಲ್ಲಿ ಐದನೇ ಪತ್ನಿ ಪೋಲೀಸರಿಗೆ ದೂರು ನೀಡಿದ್ದರು ಎನ್ನಲಾಗಿದೆ.

ಇನ್ನು, ಅತ್ಯಾಚಾರ ಪ್ರಕರಣದಲ್ಲೂ ಅನೂಜ್ ಭಾಗಿಯಾಗಿದ್ದ ಎಂದು ಪೊಲೀಸ್ ಮಾಹಿತಿ ನೀಡಿದ್ದು, 2016 ರಲ್ಲಿ ತನ್ನ ಸಹೋದರನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದಾಗಿ ಪ್ರಕರಣ ದಾಖಲಾಗಿದೆ. ದೂರು ನೀಡಿದ ಕಾರಣ ಪೋಲೀಸ್ ತನಿಖೆಯಲ್ಲಿ ಅನೂಜ್ ನ ಆರನೇ ವಿವಾಹದ ಬಗ್ಗೆ ಮಾಹಿತಿ ಲಭಿಸಿತ್ತು. ಮ್ಯಾಟ್ರಿಮನಿಯಲ್ ವೆಬ್‌ ಸೈಟ್‌ನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಲಾಗಿತ್ತು. ಆ ಮೂಲಕ 30 ಕ್ಕೂ ಹೆಚ್ಚು ಯುವತಿಯರನ್ನು ಹನಿಟ್ರ್ಯಾಪ್ ಮೂಲಕ ವಂಚಿಸಿರುವುದಾಗಿಯೂ ಪ್ರಕರಣ ದಾಖಲಾಗಿದೆ.

ಇನ್ನು, ಆರೋಪಿ ಸ್ವಯಂ ಘೋಷಿತ ಬಾಬಾ ಅನೂಜ್ ಚೇತನ್ ಕತೇರಿಯ ಎಂಬಾತನ ಮೇಲೆ ಪೊಲೀಸರು  ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420 ಮತ್ತು 34 ರ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಬಹಿರಂಗ ಹೇಳಿಕೆ ನೀಡುವವರ ವಿರುದ್ಧ ಶಿಸ್ತು ಕ್ರಮಕ್ಕೆ ಅರುಣ್ ಸಿಂಗ್ ಸೂಚನೆ: ಅಶೋಕ್

Advertisement

Udayavani is now on Telegram. Click here to join our channel and stay updated with the latest news.

Next