Advertisement

ಕೋವಿಡ್ ಪ್ರಕರಣಗಳ ಹೆಚ್ಚಳ: ತಿಂಗಳಾಂತ್ಯದವರೆಗೆ ಕನಕಪುರದಲ್ಲಿ ಸ್ವಯಂ ಘೋಷಿತ ಲಾಕ್‍ಡೌನ್‍

05:25 PM Jun 21, 2020 | keerthan |

ರಾಮನಗರ: ಜಿಲ್ಲೆಯ ಕನಕಪುರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಕೋವಿಡ್‍ 19 ಪ್ರಕರಣಗಳ ಹಿನ್ನೆಲೆಯಲ್ಲಿ ಜೂನ್‍ 30ರವರೆಗೆ ಸ್ವಯಂ ಪ್ರೇರಿತ ಲಾಕ್‍ಡೌನ್‍ ವಿಧಿಸಿಕೊಳ್ಳಲು ಸ್ಥಳೀಯರು ನಿರ್ಧರಿಸಿದ್ದಾರೆ.

Advertisement

ಭಾನುವಾರ ಕನಕಪುರದಲ್ಲಿ ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಸಭೆಯಲ್ಲಿ ಶಾಸಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍, ಸಂಸದ ಡಿ.ಕೆ.ಸುರೇಶ್‍ ಅವರ ಸಮ್ಮುಖದಲ್ಲಿ ಕನಕಪುರ ನಗರದ ವ್ಯಾಪಾರಿ ಮಳಿಗೆಗಳ ಮಾಲೀಕರು ಮತ್ತು ವಿವಿಧ ಸಂಘ-ಸಂಸ್ಥೆಗಳು ತಮ್ಮ ಈ ನಿರ್ಧಾರವನ್ನು ಪ್ರಕಟಿಸಿದರು.

ಶಾಸಕ ಡಿ.ಕೆ.ಶಿವಕುಮಾರ್‍ ವ್ಯಾಪಾರಸ್ಥರ ಈ ನಿರ್ಧಾರವನ್ನು ಸ್ವಾಗತಿಸಿದರು. ಜನರ ಆರೋಗ್ಯ ಮುಖ್ಯ. ನಿಮ್ಮ ನಿಲುವಿಗೆ ನನ್ನ ಬೆಂಬಲವಿದೆ ಎಂದರು. ಆದರೆ ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳಿಗೆ ಕೊರತೆ ಯಾಗದಂತೆ ಎಚ್ಚರ ವಹಿಸಲು ದಿನಸಿ ಅಂಗಡಿಗಳನ್ನು ಬೆಳಿಗ್ಗೆ 7 ರಿಂದ 11 ಗಂಟೆಯವರೆಗೆ ತೆರೆಯುವಂತೆ ಸಲಹೆ ನೀಡಿದರು.

ಸರ್ಕಾರಿ ಕಚೇರಿ, ಸರ್ಕಾರಿ ಬಸ್ ಸೇವೆ, ಔಷದ ವ್ಯಾಪಾರಕ್ಕೆ ಮುಂದುವರೆಯಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಕ್ವಾರಂಟೈನ್‍ ಕೇಂದ್ರಗಳಲ್ಲಿ ಕಳೆಪೆ ಆಹಾರ – ದೂರು

Advertisement

ಜಿಲ್ಲೆಯಲ್ಲಿರುವ ಸಾಂಸ್ಥಿಕ ಕ್ವಾರಂಟೈನ್‍ ಕೇಂದ್ರಗಳಲ್ಲಿ ಶುಚಿ, ರುಚಿ ಇಲ್ಲದ ಆಹಾರ ಪೂರೈಕೆಯಾಗುತ್ತಿರುವ ದೂರುಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‍, ಜಿಲ್ಲಾಡಳಿತ ದಿನನಿತ್ಯ ತಲಾ 60 ರೂ ವೆಚ್ಚದಲ್ಲಿ ಆಹಾರ ಪೂರೈಸುತ್ತಿದೆ. ತಾವು ಡಿ.ಕೆ.ಶಿ ಚಾರಿಟಬಲ್‍ ಟ್ರಸ್ಟ್ ಮೂಲಕ ತಲಾ 100 ರೂ ಕೊಡುವುದಾಗಿ ಉತ್ತಮ ಆಹಾರ ಪೂರೈಸಿ ಎಂದು ಸಭೆಯಲ್ಲಿ ಹಾಜರಿದ್ದ  ಅಧಿಕಾರಿಗಳಿಗೆ ಸೂಚಿಸಿದ್ದರು.

ಸಭೆಯಲ್ಲಿ ಎಂಎಲ್‍ಸಿ ಎಸ್‍.ರವಿ, ಜಿಲ್ಲಾಧಿಕಾರಿ ಎಂ.ಎಸ್‍.ಅರ್ಚನಾ, ಎಸ್ಪಿ ಅನೂಪ್‍ ಎ ಶೆಟ್ಟಿ ನಗರಾಭಿವೃದ್ದಿ ಕೋಶದ ನಿರ್ದೇಶಕ ಹಾಗೂ ನಗರಸಭೆಯ ಪ್ರಭಾರ ಆಯುಕ್ತ ಮಾಯಣ್ಣ ಗೌಡ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next