Advertisement
ನಗರದಲ್ಲಿ ಸಾಲು ಸಾಲಾಗಿ ಕುಸಿತ ಕಾಣುತ್ತಿರುವ ಕಟ್ಟಡಗಳಲ್ಲಿ ಬಹುತೇಕ ಶಿಥಿಲಗೊಂಡ ಕಟ್ಟಗಳೇ ಆಗಿವೆ. ಈ ಹಿನ್ನೆಲೆ ಬಿಬಿಎಂಪಿಯೂ ಶಿಥಿಲ ಕಟ್ಟಡಗಳ ಸಮೀಕ್ಷೆ ನಡೆಸುತ್ತಿದೆ. ಆದರೆ, ಈ ಸಮೀಕ್ಷೆಯು ಕೇವಲ ಕಾಗದ ಪತ್ರ ದಾಖಲಾತಿ, ಬಾಹ್ಯನೋಟಕ್ಕೆ ಸೀಮಿತವಾಗಿದೆ. ಹೀಗಾಗಿಯೇ, ಎರಡು ವರ್ಷಗಳ ಹಿಂದೆ ನಡೆಸಿದ್ದ ಸಮೀಕ್ಷೆಯ ವರದಿಯಲ್ಲಿಲ್ಲದ ಕಟ್ಟಡಗಳು ಕುಸಿಯುತ್ತಿವೆ.
Related Articles
Advertisement
ಕಟ್ಟಡ ನಿರ್ಮಾಣವಾಗಿದ್ದರೆ ಅದರ ಗೋಡೆಯ ಹೊಡೆದು ಅಲ್ಲಿನ ಮಣ್ಣು, ಸಿಮೆಂಟ್ ಪರೀಕ್ಷೆಗೊಳಪಡಿಸಲಾಗುತ್ತದೆ. ಭಾರೀ ಪ್ರಮಾಣದಲ್ಲಿ ಶಿಥಿಲಗೊಂಡ ಕಟ್ಟಡಗಳಿಗೆ ಲೋಡ್ ಬೇರಿಂಗ್ ಟೆಸ್ಟ್ ಮಾಡಲಿದ್ದು, ಅಧಿಕ ಭಾರವನ್ನು ಕಟ್ಟಡದ ಮೇಲ್ಭಾಗದಲ್ಲಿ ಹಾಕಿ ಸಾಮರ್ಥ್ಯ ಅಳೆಯವಾಗುತ್ತದೆ. ಇವುಗಳ ಹೊರತಾಗಿಗೂ ಸಾಮಾನ್ಯ ಮಾನದಂಡಗಳಿಂದ, ಯಾವುದೇ ಖರ್ಚು ಇಲ್ಲದೆ ಶಿಥಿಲ ಪತ್ತೆ ಮಾಡಿಕೊಳ್ಳಬಹುದಾಗಿದೆ.
ಯಾವ ಕಟ್ಟಡಗಳನ್ನು ಪರೀಕ್ಷೆ ಮಾಡಿಸಬೇಕು?: ಪ್ರಮುಖವಾಗಿ ಕಟ್ಟಡವು 30 ವರ್ಷ ಮೇಲ್ಪಟ್ಟಿದ್ದರೆ ಸುರಕ್ಷತೆ ದೃಷ್ಟಿಯಿಂದ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಮಣ್ಣಿನ ಕಟ್ಟಡವಾಗಿದ್ದರೆ, ಅನುಮತಿ ಪಡೆದ್ದಕ್ಕಿಂತ ಹೆಚ್ಚುವರಿ ಅಂತಸು§ ನಿರ್ಮಾಣವಾದ ಕಟ್ಟಡ, ರಾಜಕಾಲುವೆ, ಕರೆಯ ಆಸುಪಾಸಿನಲ್ಲಿರುವ ಕಟ್ಟಡ, 8-10 ವರ್ಷದಿಂದ ಸೂಕ್ತ ನಿರ್ವಹಣೆ ಇಲ್ಲದ ಕಟ್ಟಡ, ಇತ್ತೀಚೆಗೆ ಧರೆಗುರುಳಿದ ಕಟ್ಟಡದ ಆಸುಪಾಸಿನ ಕಟ್ಟಡ, ನೆರೆಯ ಕಾಮಗಾರಿಗಳಿಂದ ಹಾನಿಗೊಳಗಾಗಿರುವ ಕಟ್ಟಡಗಳು, ನೀರು ತೊಟ್ಟಿಕ್ಕುವ, ಗೋಡೆ ಬಿರುಕು ಬಿಟ್ಟಿರುವ ಕಟ್ಟಡಗಳು.
ಕಣ್ಣಳತೆಯೆ ಪರೀಕ್ಷೆಗೆ ಸೀಮಿತವಾಯಿಯೇ ಬಿಬಿಎಂಪಿ?: ಸದ್ಯ ಬಿಬಿಎಂಪಿ ಅಧಿಕಾರಿಗಳು ಶಿಥಿಲ ಕಟ್ಟಡ ಸಮೀಕ್ಷೆ ನಡೆಸುತ್ತಿದ್ದು, ಈಗಾಗಲೇ ಪ್ರಾಥಮಿಕ ಸಮೀಕ್ಷೆ ಮುಗಿದು 500ಕ್ಕೂ ಅಧಿಕ ಕಟ್ಟಡಗಳಿಗೆ ನೋಟಿಸ್ ನೀಡಲಾಗುತ್ತಿದೆ. ಆದರೆ, ಕೇವಲ ಕಟ್ಟಡ ನಿರ್ಮಾಣವಾಗಿರುವ ವರ್ಷ, ಅನುಮತಿಗಿಂತ ಅಧಿಕ ಅಂತಸ್ತು ನಿರ್ಮಿಸಿರುವ ಕಟ್ಟಡಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೆ, ಕಟ್ಟಡ ಸಾಮರ್ಥ್ಯ ಪರೀಕ್ಷೆಗೆ ಲೋಡ್ ಬೇರಿಂಗ್ ಟೆಸ್ಟ್ ಸೇರಿದಂತೆ ಇತರೆ ಪರೀಕ್ಷಾ ವಿಧಾನವನ್ನು ಅನುಸರಿಸುತ್ತಿಲ್ಲ. ಹೀಗಾಗಿಯೇ, ಕಳೆದ ಎರಡು ವರ್ಷದ ಹಿಂದಿನ ಸಮೀಕ್ಷೆಯಲ್ಲಿರದ ಕಟ್ಟಡಗಳು ಕುಸಿಯುತ್ತಿವೆ ಎಂದು ಆರೋಪ ಕೇಳಿಬಂದಿವೆ.
ಶಿಥಿಲಗೊಂಡ ಲಕ್ಷಣಗಳು-ಸ್ವಯಂ ಪರೀಕ್ಷೆ:-
ಪ್ರಾಥಮಿಕವಾಗಿ ಮಳೆಬಂದಾಗ ಅಥವಾ ಮಹಡಿ ಮೇಲೆ ನೀರು ನಿಂತಾಗ ಕಟ್ಟಡದ ಗೋಡೆ ಅಥವಾ ಸೀಲಿಂಗ್‌ನಿಂದ ನೀರು ತೊಟ್ಟಿಕ್ಕುತ್ತಿರುವುದು, ಗೋಡೆಗಳು ಬಿರುಕು ಬಿಟ್ಟಿರುವುದು, ಗೋಡೆ ವಾಲಿರುವುದು, ಫೌಂಡೇಷನ್ ಸುತ್ತ ಮಣ್ಣು ಎದ್ದಿರುವದು ಅಥವಾ ನೆಲ ಬಿರುಕಾಗಿರುವುದು, ಭಾರೀ ತೂಕದ ಸಾಮಗ್ರಿಯನ್ನು ಕಟ್ಟಡದ ಮೇಲೆ ಅಥವಾ ಒಳಗೆ ಇಟ್ಟಾಗ ಕಂಪನದ ಅನುಭವಾಗುವುದು ಶಿಥಿಲಗೊಳ್ಳುತ್ತಿರುವ ಸೂಚನೆಯಾಗಿವೆ. ಇಂತಹ ಸಮಸ್ಯೆಗಳು ಕಂಡುಬಂದರೆ ಕೂಡಲೇ ಸ್ಥಳೀಯ ಎಂಜಿನಿಯರ್ ಕರೆಸಿ ಹೆಚ್ಚುವರಿಗೆ ಪರೀಕ್ಷೆ ಅಥವಾ ದುರಸ್ತಿಗೆ ಮುಂದಾಗಬೇಕು ಎನ್ನುತ್ತಾರೆ ಬಿಬಿಎಂಪಿ ನಿವೃತ್ತ ಎಂಜಿನಿಯರ್ ಮತ್ತು ನಗರ ಯೋಜನೆ ತಜ್ಞರು.
ಅನುಮತಿ ಪಡೆದದ್ದಕ್ಕಿಂತ ಅಧಿಕ ಅಂತಸ್ತು ನಿರ್ಮಿಸಿರುತ್ತಾರೆ. ಆದರೆ, ಅಡಿಪಾಯ ಮಾತ್ರ ಒಂದು ಅಥವಾ ಎರಡು ಮಹಡಿ ಸಾಮರ್ಥಯ ಹೊಂದಿರುತ್ತದೆ. ಇಂತಹ ಕಟ್ಟಡಗಳು ಹಾನಿಗೊಳಗಾಗುತ್ತಿವೆ. ಇಂತಹ ಕಟ್ಟಡಗಳ ಮಾಲೀಕರು ಕಟ್ಟಡ ಸಾಮರ್ಥಯ ಪರೀಕ್ಷೆ ಮಾಡಿಸಿ ಅಗತ್ಯ ಕ್ರಮಕೈಗೊಳ್ಳಬೇಕು. – ಅಂಜನ್ ಸಾಯಿಪ್ರಸಾದ್, ಸ್ಟ್ರಕ್ಚರ್ ಎಂಜಿನಿಯ್, ಖಾಸಗಿ ಕಂಪನಿ
ಮುಂಜಾಗ್ರತಾ ಕ್ರಮವಾಗಿ ಮೂರ್ನಾಲ್ಕು ದಶಕದ ಹಳೆಯ ಕಟ್ಟಡಗಳು, ಶಿಥಿಲ ಲಕ್ಷಣಗಳನ್ನು ಹೊಂದಿರುವ ಕಟ್ಟಡಗಳು, ನಿರ್ವಹಣೆ ಇಲ್ಲದ ಕಟ್ಟಡಗಳು ಸ್ವಯಂ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಅನುಮಾನ/ ಅಗತ್ಯವಿದ್ದರೆ ಹೆಚ್ಚುವರಿ ಪರೀಕ್ಷೆ, ದುರಸ್ತಿಗೆ ಮುಂದಾಗಬಹುದು.
– ಹನುಮಂತೇ ಗೌಡ, ಪಾಲಿಕೆ ನಿವೃತ್ತ ಎಂಜಿನಿಯರ್/ ನಗರ ಯೋಜನೆ ತಜ್ಞರು
– ●ಜಯಪ್ರಕಾಶ್ ಬಿರಾದಾರ್