Advertisement

ಗೋ ಕೋವಿಡ್ ಕಾರ್ಯಕ್ಕೆ ಸ್ವಸಹಾಯ ಸಂಘಗಳ ಸದಸ್ಯರ ಸಾಥ್‌

02:53 AM Apr 21, 2020 | Hari Prasad |

ಮಣಿಪಾಲ: ಕೋವಿಡ್‌-19 ವೈರಸ್‌ ಅನ್ನು ಸೋಲಿಸಲು ದೇಶಾದ್ಯಂತ ಲಾಕ್‌ಡೌನ್‌ ಹೇರಲಾಗಿದೆ. ಈ ಮಧ್ಯೆ 1.3 ಬಿಲಿಯನ್‌ ಭಾರತೀಯರು ಮನೆಯಲ್ಲಿ ಬಂದಿಯಾಗಿದ್ದಾರೆ.

Advertisement

ಇವುಗಳ ನಡುವೆ ಮಹಿಳೆಯರ ಸ್ವ-ಸಹಾಯ ಗುಂಪುಗಳ ಸಾಮೂಹಿಕ ಶಕ್ತಿಯ ಪರಿಚಯ ದೇಶಕ್ಕೆ ಆಗುತ್ತಿದೆ. ನಗರಗಳಿಂದ ದೂರ ಇರುವ ಭಾರತದ 90 ಪ್ರತಿಶತ ಜಿಲ್ಲೆಗಳಲ್ಲಿ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರು ಫೇಸ್‌ ಮಾಸ್ಕ್ ಗಳನ್ನು ತಯಾರಿಸುತ್ತಿದ್ದಾರೆ.

ಬಡತನ ದೂರ
ಸುಮಾರು 15 ವರ್ಷಗಳ ಹಿಂದೆ ಆರಂಭವಾದ ಈ ಮಹಿಳಾ ಚಳವಳಿ ಇಂದು ಈ ಕಷ್ಟ ಕಾಲದಲ್ಲಿ ಎಷ್ಟು ಮಹತ್ವ ಎಂಬುದನ್ನು ತೋರಿಸಿಕೊಡುತ್ತಿದೆ. ಸದ್ಯ ದೇಶಾದ್ಯಂತ ಇದು ಅಮೂಲ್ಯವಾದ ಸಂಪನ್ಮೂಲ ಎಂದು ಸಾಬೀತಾಗಿದೆ.

ಗ್ರಾಮೀಣ ಪ್ರದೇಶದ ಬಡ ಮಹಿಳೆಯರನ್ನು ಸ್ವ-ಸಹಾಯ ಗುಂಪುಗಳ ಸದಸ್ಯರನ್ನಾಗಿಸಲಾಗಿದ್ದು, ಈ ಮೂಲಕ ಬಡತನವನ್ನು ಕಡಿಮೆ ಮಾಡುವ ಭಾರತದ ಪ್ರಮುಖ ಕಾರ್ಯಕ್ರಮವಾಗಿ ಬದಲಾಗಿದೆ.

ಎರಡು ದಶಕಗಳಲ್ಲಿ ಭಾರತದ ಸ್ವಸಹಾಯ ಸಂಘವು ಸಣ್ಣ ಉಳಿತಾಯದ ಮೂಲ ಮತ್ತು ಸಾಲ ಸೌಲಭ್ಯಗಳು ವಿಕಸನಗೊಂಡಿದೆ. ಇದು ವಿಶ್ವದ ಅತಿದೊಡ್ಡ ಬಡವರ ಸಾಂಸ್ಥಿಕ ವೇದಿಕೆಯಾಗಿ ಇಂದು ಬದಲಾಗಿದೆ. ಇಂದು 67 ಮಿಲಿಯನ್‌ ಭಾರತೀಯ ಮಹಿಳೆಯರು ಸುಮಾರು 6 ಮಿಲಿಯನ್‌ ಸ್ವಸಹಾಯ ಸಂಘಗಳ ಸದಸ್ಯರಾಗಿದ್ದಾರೆ.

Advertisement

ಸಮವಸ್ತ್ರ ಬದಲು ಮಾಸ್ಕ್ ತಯಾರಿ
ಒಡಿಶಾದಲ್ಲಿ ಶಾಲಾ ಸಮವಸ್ತ್ರವನ್ನು ಹೊಲಿಯುವುದರಲ್ಲಿ ನಿರತರಾಗಿದ್ದ ಬಡ ಗ್ರಾಮೀಣ ಮಹಿಳೆಯರು ಈಗ ಮುಖವಾಡಗಳನ್ನು ಹೊಲಿಯುತ್ತಿದ್ದಾರೆ. ಎರಡು ವಾರಗಳಲ್ಲಿ ಈ ಮಹಿಳೆಯರು 1 ಮಿಲಿಯನ್‌ಗಿಂತಲೂ ಹೆಚ್ಚು ಮುಖವಾಡಗಳನ್ನು ತಯಾರಿಸಿದ್ದಾರೆ.

19 ಮಿಲಿಯನ್‌ ಮಾಸ್ಕ್
27 ಭಾರತೀಯ ರಾಜ್ಯಗಳಲ್ಲಿ ಸುಮಾರು 20,000 ಸ್ವಸಹಾಯ ಸಂಘಗಳು 19 ಮಿಲಿಯನ್‌ಗೂ ಹೆಚ್ಚು ಮುಖಗವಸುಗಳನ್ನು ಉತ್ಪಾದಿಸಿವೆ. ಜತೆಗೆ 1 ಲಕ್ಷ ಲೀಟರ್‌ ಸ್ಯಾನಿಟೈಸರ್‌ ಮತ್ತು ಸುಮಾರು 50,000 ಲೀಟರ್‌ ಹ್ಯಾಂಡ್‌ ವಾಶ್‌ ಉತ್ಪಾದಿಸಿವೆ.

ಅಡುಗೆಮನೆಗಳು
ಕೆಲವು ಪ್ರದೇಶಗಳಲ್ಲಿ ವಲಸೆ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಇದನ್ನು ಗಮನಿಸಿ, ಸ್ವಸಹಾಯ ಸಂಘಗಳು ದೇಶಾದ್ಯಂತ 10,000ಕ್ಕೂ ಹೆಚ್ಚು ಸಮುದಾಯ ಅಡುಗೆಮನೆಗಳನ್ನು ಸ್ಥಾಪಿಸಿವೆ.

ಆಹಾರ ಪ್ಯಾಕೆಟ್‌
ಕೇರಳದಲ್ಲಿನ ‘ಕುಟುಂಬ ಶ್ರೀ’ ಯೋಜನೆಯಡಿ 4.4 ಮಿಲಿಯನ್‌ ಸದಸ್ಯರನ್ನು ಹೊಂದಿರುವ ಮಹಿಳಾ ಸಂಘ ಹಲವು ವರ್ಷಗಳಿಂದ ಸಾಮುದಾಯಿಕ ಅಡುಗೆ ಕಾರ್ಯಗಳನ್ನು ನಡೆಸುತ್ತಾ ಬಂದಿದೆ. ಈಗ ರಾಜ್ಯಾದ್ಯಂತ 1,300 ಅಡುಗೆ ಮನೆಗಳನ್ನು ನಡೆಸುತ್ತಿವೆ.

ಜತೆಗೆ ಕ್ಯಾರೆಂಟೈನ್‌ ಮತ್ತು ಹಾಸಿಗೆ ಹಿಡಿದವರಿಗೆ ಆಹಾರವನ್ನು ತಲುಪಿಸುತ್ತಿವೆ. ಬಡತನ ಹೆಚ್ಚಿರುವ ಝಾರ್ಖಂಡ್‌ನ‌ಲ್ಲಿ ಸ್ವಸಹಾಯ ಸಂಘಗಳು ಆಹಾರ ಪ್ಯಾಕೆಟ್‌ಗಳನ್ನು ಒದಗಿಸಲು ಜಿಲ್ಲಾಡಳಿತಗಳಿಗೆ ನೆರವಾಗುತ್ತಿದೆ.

ಏನು ಮಾಡುತ್ತಿವೆ
ಈಗ ಈ ಮಹಿಳೆಯರಲ್ಲಿ ಅನೇಕರು ಸ್ವಸಹಾಯದ ಮೂಲಕ ಬಡತನದ ರೇಖೆಯಿಂದ ಪಾರಾಗಿದ್ದಾರೆ. ಇಂದು ಕೋವಿಡ್‌ -19 ವೈರಸ್‌ ವಿರುದ್ಧದ ನಮ್ಮ ಹೋರಾಟದಲ್ಲಿ ಈ ಮಹಿಳಾ ಗುಂಪುಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ.

ಮಾಸ್ಕ್ ಗಳು, ಸ್ಯಾನಿಟೈಸರ್‌ಗಳು ಮತ್ತು ರಕ್ಷಣಾ ಸಾಧನಗಳಲ್ಲಿನ ಕೊರತೆಯನ್ನು ಪೂರೈಸುತ್ತಿವೆ. ಇವುಗಳ ಕೊರತೆಯನ್ನು ನೀಗಿಸಲು ದೇಶಾದ್ಯಂತ ಗುಂಪುಗಳು ತೀವ್ರವಾಗಿ ಕಾರ್ಯನಿರ್ವಹಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next