Advertisement
ಬುಧವಾರ ಉದಯವಾಣಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮನುಷ್ಯ ಸತ್ತ ಅನಂತರ ಬರಿಗೈನಲ್ಲಿ ತೆರಳಿದ ಎನ್ನುತ್ತಾರೆ. ಆದರೆ ಆತನೊಂದಿಗೆ ಪಾಪ ಮತ್ತು ಪುಣ್ಯಗಳು ಜತೆಗಿರುವುದು ಸತ್ಯ. ಜಗತ್ತಿನಲ್ಲಿ ಹಣ, ವ್ಯಕ್ತಿತ್ವ ಸಂಪಾದನೆಯನ್ನೇ ದೊಡ್ಡ ವಿಚಾರ ಎಂಬಂತೆ ತಿಳಿದಿದ್ದೇವೆ. ಇದಕ್ಕಿಂತ ಮಹತ್ವದ್ದು ಆತ್ಮೋನ್ನತಿಯಾಗಿದೆ.
ವಿಶ್ಲೇಷಿಸಿದರು. ಪ್ರಸ್ತುತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ 140 ದೇಶಗಳಲ್ಲಿ ಶಾಖೆಗಳನ್ನು ಹೊಂದಿ ಆಧ್ಯಾತ್ಮ ಶಿಕ್ಷಣ ನೀಡುತ್ತಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಇಂದಿನ ಒತ್ತಡ ಜೀವನದಲ್ಲಿ ಅಗತ್ಯವಾಗಿ ಬೇಕಿದೆ. ಆತ್ಮ ಜ್ಞಾನದ ಜತೆಗೆ ಶಾರೀರಿಕ ಆರೋಗ್ಯ ಜಾಗೃತಿಯ ಬಗ್ಗೆಯೂ ಸಂಸ್ಥೆ ಕೆಲಸ ಮಾಡುತ್ತಿದ್ದು, ಶಿಕ್ಷಣ ಮತ್ತು ಉಚಿತ ಆರೋಗ್ಯ ಸೇವೆಗೆ ಸಂಸ್ಥೆ ಶ್ರಮಿಸುತ್ತಿದೆ ಎಂದು ಹೇಳಿದರು. ಸಂಸ್ಥೆಯಲ್ಲಿ ಜವಾಬ್ದಾರಿ
ಕೋಟ್ಯಂತರ ಮಂದಿ ಅನುಯಾಯಿಗಳನ್ನು ಹೊಂದಿರುವ ಪ್ರಜಾಪಿತ ಬ್ರಹ್ಮಾಕುಮಾರೀಸ್ ಸಂಸ್ಥೆಯಲ್ಲಿ ಆರಂಭದಿಂದಲೂ ಇಲ್ಲಿಯವರೆಗೂ ಮಾಧ್ಯಮ ಪ್ರಚಾರ ವಿಭಾಗದಲ್ಲಿ ಮಹತ್ತರ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.
Related Articles
ಕಾರ್ಯದರ್ಶಿ, ಹೆಡ್ ಪೀಸ್ ಆಫ್ ಮೈಂಡ್ ಟಿವಿ ಸಂಸ್ಥಾಪಕ, ರೆಡಿಯೋ ಮಧುಬನ್ ಕಮ್ಯೂನಿಟಿ ಸೊಸೈಟಿಯ ಕಾರ್ಯದರ್ಶಿಯೂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Advertisement
ಮೂಲತಃ ಬಾರಕೂರಿನವರುಬ್ರಹ್ಮಾವರ ತಾಲೂಕಿನ ಬಾರಕೂರು ಸಮೀಪದ ನಡೂರಿನವರಾದ ಕರುಣಾಕರ್ ಶೆಟ್ಟಿ ನಡೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಬಾರಕೂರಿನಲ್ಲಿ ಪ್ರೌಢ ಶಿಕ್ಷಣ ಪೂರೈಸಿದರು. ಬೆಂಗಳೂರಿನಲ್ಲಿರುವ ಎಚ್‌ಎಂಟಿ ಸಂಸ್ಥೆಯಲ್ಲಿ ತಂತ್ರಜ್ಞರಾಗಿ ಕರ್ತವ್ಯಕ್ಕೆ ಸೇರಿದ್ದರು. ಇವರ ತಂದೆ ಮಂಜಯ್ಯ ಶೆಟ್ಟಿ ಶಿಕ್ಷಕರಾಗಿದ್ದರು. 1960ರಿಂದ ಆಧ್ಯಾತ್ಮ ಶಿಕ್ಷಣದ ಸೆಳೆತ ಇವರನ್ನು ಪೂರ್ಣಕಾಲಿಕವಾಗಿ ಪ್ರಜಾಪಿತ ಬ್ರಹ್ಮಾಕುಮಾರೀಸ್ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳಲು ಕಾರಣವಾಯಿತು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ.