Advertisement

ಸ್ವ-ಉದ್ಯೋಗ ತರಬೇತಿ ಕಾರ್ಯಾಗಾರ

11:25 AM Oct 13, 2019 | Suhan S |

ಲೋಕಾಪುರ: ಸೆಲ್ಕೋ ಸೋಲಾರ್‌ ಅಳವಡಿಕೆಯಿಂದ ವಿದ್ಯುತ್‌ ಬಳಕೆ ಕಡಿಮೆ ಮಾಡುವ ಮೂಲಕ ಆರ್ಥಿಕ ಹಣ ಉಳಿತಾಯ ಮಾಡಲು ಸಾಧ್ಯ ಎಂದು ವಲಯ ಒಕ್ಕೂಟ ಅಧ್ಯಕ್ಷೆ ಇಮಾಂಬು ಮಹಾಲಿಂಗಪುರ ಹೇಳಿದಆರು.

Advertisement

ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ವಲಯ ವತಿಯಿಂದ ಸೋಲಾರ್‌ ಆಧಾರಿತ ಸ್ವ-ಉದ್ಯೋಗ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸಂಘದ ಸದಸ್ಯರು ಸಾರ್ವಜನಿಕರಿಗೆ ಸೆಲ್ಕೋ ಸೋಲಾರ್‌ ಅಳವಡಿಕೆ ಕುರಿತು ಮಾಹಿತಿ ನೀಡಬೇಕೆಂದು ಸಲಹೆ ನೀಡಿದರು.

ಸೆಲ್ಕೋ ಸೋಲಾರ್‌ ಮಾಹಿತಿದಾರ ರಾಮಕುಮಾರ ಮಾತನಾಡಿ, ಆಧುನಿಕ ಯುಗದಲ್ಲಿ ಬದಲಿ ಇಂಧನವಾಗಿ ಸೆಲ್ಕೋ ಸೋಲಾರ್‌ ಕೈಗೆಟುಕುವ ದರದಲ್ಲಿ ವಿವಿಧ ಸೋಲಾರ್‌ ಗೃಹಪಯೋಗಿ ವಸ್ತುಗಳನ್ನು ಅನುಷ್ಠಾನ ಮಾಡುತ್ತಿದೆ. ವಿದ್ಯುತ್‌ ಇಲ್ಲದೆ ಇರುವಂತಹ ಕುಗ್ರಾಮಗಳಿಗೂ ಸೆಲ್ಕೋ ಸೋಲಾರದಿಂದ ಗ್ರಾಮ ಬೆಳಗುವಂತಾಗಿದೆ ಎಂದು ತಿಳಿಸಿದರು.

ಕೃಷಿ ಮೇಲ್ವಿಚಾರಕ ಎಂ.ಬಿ. ತೋಟಯ್ಯ ಮಾತನಾಡಿ, ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ದೊರೆಯುವ ಸೌಲಭ್ಯದ ಬಗ್ಗೆ ಮಾಹಿತಿ ತಿಳಿಸಿದರು. ಒಕ್ಕೂಟದ ಉಪಾಧ್ಯಕ್ಷೆ ಮಹಾನಂದ ಅಂಗಡಿ, ಸುಮಂಗಲಾ ಗಿರಿಸಾಗರ, ಸೇವಾ ಪ್ರತಿನಿಧಿ ಅನ್ನಪೂರ್ಣ ಕಗ್ಗೊಡ, ಒಕ್ಕೂಟದ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next