ರಾಮನಗರ: ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವತಿಯಿಂದ ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ಮಂದಿ ಸ್ವ ಉದ್ಯೋಗ ಸಾಲ ಪಡೆದುಕೊಂಡಿದ್ದು, ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ದೀಪಶ್ರಿಕೆ. ತಿಳಿಸಿದರು.
ಜಿಲ್ಲೆಯ ರಾಮನಗರ ಮತ್ತು ಚನ್ನಪಟ್ಟಣ ತಾಲೂಕುಗಳ ಫಲಾನುಭವಿಗಳನ್ನು ಸ್ವತಃ ಭೇಟಿ ಮಾಡಿಪಡೆದ ಸಾಲವನ್ನು ಸುದುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ಪರಿಶೀಲಿಸಿ ಖಾತರಿಪಡಿಸಿಕೊಂಡ ನಂತರ ಅವರು ಪತ್ರಿಕೆಯೊಂದಿಗೆ ಮಾತನಾಡಿದರು.
ಇಂದು ಅಂಗಡಿ ಮಾಲೀಕ: ಚನ್ನಪಟ್ಟಣದಲ್ಲಿ ಸುಮಾರು 16 ವರ್ಷದಿಂದ ರಸ್ತೆ ಬದಿಯಲ್ಲಿ ಮತ್ತು ಕೆಲವೊಮ್ಮೆ ಸೈಕಲ್ ಮೇಲೆ ಸಿದ್ಧ ಉಡುಪುಗಳನ್ನು ಹೇರಿಕೊಂಡು ಹಳ್ಳಿ-ಹಳ್ಳಿ ಸುತ್ತಿ ವ್ಯಾಪಾರ ಮಾಡುತ್ತಿದ್ದ ಶಶಿಕುಮಾರ್ ಇಂದು ಚನ್ನಪಟ್ಟಣ ನಗರದಲ್ಲಿ ಬಟ್ಟೆ ಅಂಗಡಿ ಆರಂಭಿಸಿ ಕುಟುಂಬ ಪೋಷಿಸುತ್ತಿದ್ದಾರೆ ಎಂದು ಉದಾಹರಣೆ ನೀಡಿದರು.
ಪ್ರಮೋದ್ ಎಂಬ ಮತ್ತೂಬ್ಬ ಫಲಾನುಭವಿ ಕೂಡ ನಿಗಮ ಕೊಟ್ಟ ಸಾಲವನ್ನು ಬಂಡವಾಳಕ್ಕೆ ಹೂಡಿಕೆ ಮಾಡಿ ವ್ಯಾಪಾರ ವೃದ್ಧಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಮರುಪಾವತಿಗಾಗಿ ಆ್ಯಪ್, ನಿಗಮವೇ ಮೊದಲು: ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಸಾಲ ಪಡೆದಫಲಾನುಭವಿಗಳು ಗ್ರಾಮೀಣ ಭಾಗ ಮತ್ತು ತೀರಾಕು ಗ್ರಾಮಗಳಲ್ಲೂ ವಾಸಿಸುತ್ತಿದ್ದಾರೆ. ಪ್ರತಿ ತಿಂಗಳುಕಂತು ಪಾವತಿ ಮಾಡಲು ನಗರ ವ್ಯಾಪ್ತಿಯ ಬ್ಯಾಂಕ್‌ಗಳಿಗೆ ಬರುವುದು ಕಷ್ಟ ಎಂಬ ಅರಿವು ನಿಗಮದಅಧ್ಯಕ್ಷ ಡಿ.ಎಸ್.ಅರುಣ್ ಅವರಿಗೆ ಬಂದಾಕ್ಷಣ ಫಲಾನುಭವಿಗಳು ತಮ್ಮ ಮನೆಯಿಂದಲೇ ಸುಲಭವಾಗಿ ಸಾಲ ಮರುಪಾವತಿ ಮಾಡುವ ಮೊಬೈಲ್ ಆ್ಯಪ್‌ವೊಂದನ್ನು ನಿಗಮ ಸೃಜಿಸಿದೆ.
ಇ-ಕಛೇರಿ ಆರಂಭ: ಇತ್ತಿಚೆಗೆ ಮುಖ್ಯಮಂತ್ರಿಗಳೇ ಆ್ಯಪ್ ಬಿಡುಗಡೆ ಮಾಡಿದ್ದಾರೆ. ಸಾಲದ ಕಂತುಗಳ ಮರುಪಾವತಿಗಾಗಿ ಮೊಬೈಲ್ ಆ್ಯಪ್ ಸಿದ್ಧಪಡಿಸಿದ ಕೀರ್ತಿ ರಾಜ್ಯದಲ್ಲಿರುವ ಸಮುದಾಯ ಅಭಿವೃದ್ಧಿ ನಿಗಮಗಳ ಪೈಕಿ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮಕ್ಕೆ ಸಲ್ಲುತ್ತದೆ. ನಿಗಮ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡಿದ್ದು, ಇ-ಕಛೇರಿ ಆರಂಭಿಸಲಾಗಿದೆ. ಸಮುದಾಯದ ಫಲಾನುಭವಿಗಳಿಗೆ ಅಗತ್ಯ ಮಾಹಿತಿ, ಸಹಾಯ ನೀಡಲು ಅನುಕೂಲವಾಗುವಂತೆ ನಿಗಮದಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದೆ ಎಂದರು.