Advertisement

ಸ್ವಯಂ ಉದ್ಯೋಗದ ಒಲವು ಉತ್ತಮ ಬೆಳವಣಿಗೆ

03:56 PM Oct 14, 2019 | Suhan S |

ಮದ್ದೂರು: ಧಾರ್ಮಿಕ ಚಿಂತನೆಗಳ ಜತೆಗೆ ಸ್ವಯಂ ಉದ್ಯೋಗಗಳ ಕಡೆಗೆ ಹೆಚ್ಚಿನ ಒಲವು ತೋರಿ ಮಹಿಳೆಯರ ಅಭ್ಯುದಯಕ್ಕೆ ಶ್ರಮಿಸುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವೈಖರಿ ಶ್ಲಾಘನೀಯ ಎಂದು ಮನ್‌ಮುಲ್‌ ನಿರ್ದೇಶಕ ಎಸ್‌.ಪಿ. ಸ್ವಾಮಿ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಸೋಮನಹಳ್ಳಿ ಗ್ರಾಮದ ಸರಸಮ್ಮ ಎಂ.ಚನ್ನಪ್ಪ ಸಭಾಭವನದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ತಾಲೂಕಿನಾದ್ಯಂತ 3 ಸಾವಿರಕ್ಕೂ ಹೆಚ್ಚು ಸಂಘ, ಸಂಸ್ಥೆಗಳನ್ನು ಸ್ಥಾಪಿಸಿ ಸುಮಾರು 25 ಸಾವಿರ ಮಹಿಳೆಯರನ್ನು ಸದಸ್ಯರನ್ನಾಗಿ ನೇಮಕ ಮಾಡಿಕೊಂಡು 50 ಕೋಟಿಗೂ ಹೆಚ್ಚು ವಹಿವಾಟು ನಡೆಸುವ ಮೂಲಕ ಮಹಿಳೆಯರ ಆರ್ಥಿಕಾಭಿವೃದ್ಧಿಗೆ ಶ್ರಮಿಸುವ ಜತೆಗೆ ಗ್ರಾಮಾಭಿವೃದ್ಧಿಗೆ ಕೈಜೋಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಧಾರ್ಮಿಕ ಚಿಂತನೆಗಳ ಜತೆಗೆ ಹಲವು ಸೇವಾ ಕಾರ್ಯ ಕೈಗೊಂಡು ಹಿಂದುಳಿದ ಮಹಿಳೆಯರನ್ನು ಗುರುತಿಸಿ ಆರ್ಥಿಕವಾಗಿ ಸಬಲೀಕರಣ ಗೊಳ್ಳಲು, ಪ್ರತಿಯೊಬ್ಬ ಮಹಿಳಾ ಸದಸ್ಯರು ಪಣತೊಡಬೇಕು. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆಗೈಯುವ ಮೂಲಕ ಪುರುಷರಷ್ಟೇ ಸರಿಸಮಾನರಾಗಿ ನಿಲ್ಲಬಹುದೆಂದು ತೋರಿಸಿ ಕೊಟ್ಟಿದ್ದಾರೆಂದು ಬಣ್ಣಿಸಿದರು.

ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕಪಿ.ಗಂಗಾಧರ್‌ರೈ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅನ್ನದಾಸೋಹ, ಶಿಕ್ಷಣ, ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಜನರ ಅಭ್ಯುದಯಕ್ಕೆ ನಿರಂತರವಾಗಿ ಶ್ರಮಿಸುತ್ತಿರುವುದಾಗಿ ತಿಳಿಸಿದರು.

Advertisement

ಜಿಲ್ಲೆಯಲ್ಲಿ 22 ಸಾವಿರ ಸಂಘ, ಸಂಸ್ಥೆಗಳನ್ನು ಸ್ಥಾಪಿಸಿ 2 ಲಕ್ಷ ಸದಸ್ಯರ ನೇಮಕ ಮಾಡಿಕೊಳ್ಳುವ ಜತೆಗೆ ಕಳೆದ 6 ವರ್ಷದಲ್ಲಿ 900 ಕೋಟಿಗೂ ವ್ಯವಹಾರ ನಡೆಸಿ, ಸಾಲ ಮರುಪಾವತಿಯಲ್ಲಿ ರಾಜ್ಯದಲ್ಲೇ ಜಿಲ್ಲೆಯು ಪ್ರಥಮ ಸ್ಥಾನ ಪಡೆದು ತಾಲೂಕು 5ನೇ ಸ್ಥಾನದಲ್ಲಿರುವುದು ಸಂತಸದ ವಿಚಾರ ಎಂದರು.

ಮುನ್ನ ದಂಪತಿಗಳು ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧಾರ್ಮಿಕ ವಿಧಿವಿಧಾನ ಪೂರೈಸಿದರಲ್ಲದೇ ನೆರೆದಿದ್ದ ನೂರಾರು ಮಹಿಳೆಯರಿಗೆ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಜರುಗಿತು.

ಜಿಪಂ ಸದಸ್ಯ ಬೋರಯ್ಯ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್‌, ಧಾರ್ಮಿಕ ಉಪನ್ಯಾಸಕಿ ಉಮಾಮಂಜಯ್ಯ, ಗ್ರಾಪಂ ಸದಸ್ಯ ಸತೀಶ್‌, ಮುಖಂಡರಾದ ಶ್ರೀನಿವಾಸ್‌, ಮುರಳಿ, ನಿಂಗೇಗೌಡ, ಎನ್‌.ಸಿ. ಪ್ರಸನ್ನಕುಮಾರ್‌, ಯೋಜನಾಧಿಕಾರಿ ನಂದಿನಿಶೇಠ್ ಜಿಲ್ಲಾ ನಿರ್ದೇಶಕ ವಿನಯ್‌ಕುಮಾರ್‌ ಸುವರ್ಣ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next