Advertisement
ಮನೆಯಂಗಳದಲ್ಲಿ ಆಡುತ್ತಿರುವ ಮಗು ಕಾಲು ಜಾರಿ ಬೀಳುತ್ತದೆ. ಬಿದ್ದ ಕೂಡಲೇ ಅದು ತನ್ನ ಸುತ್ತಮುತ್ತಲೆಲ್ಲ ಒಮ್ಮೆ ಕಣ್ಣು ಹಾಯಿಸುತ್ತದೆ. ಅಲ್ಲಿ ಯಾರಾದರೂ ಇದ್ದರೆ ಅದು ಕೂಡಲೇ ಅಳಲು ಪ್ರಾರಂಭಿಸುತ್ತದೆ. ಅದೇ ಮಗು ಆ ಕ್ಷಣದಲ್ಲಿ ತನ್ನ ಸುತ್ತಮುತ್ತ ಯಾರೂ ಇಲ್ಲದಿದ್ದಾಗ ಒಮ್ಮೆ ಭಯಗೊಂಡರೂ ನಿಧಾನಕ್ಕೆ ಮೇಲೆದ್ದು ಮುನ್ನಡೆಯುತ್ತದೆ.
ಕಠಿನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಪ್ರಯತ್ನವೇ ಮಾಡದೇ ಫಲಿತಾಂಶದೆಡೆ ಕಣ್ಣು ಹಾಯಿಸು ವುದು ಸರಿಯಲ್ಲ. ಯಶಸ್ಸು ನಮ್ಮದಾಗ ಬೇಕಾದರೆ ಸ್ವಪ್ರಯತ್ನವೂ ಅಷ್ಟೇ ಮುಖ್ಯ ವಾಗಿರುತ್ತದೆ. ಆತ್ಮವಿಶ್ವಾಸ ಹಾಗೂ ಸ್ವ-ಪ್ರಯತ್ನ ಯಶಸ್ಸಿನ ಗುಟ್ಟು ಎಂಬು ದನ್ನು ನಾವೆಲ್ಲರೂ ಮೊದಲು ಅರಿತು ಕೊಳ್ಳಬೇಕು. ಆದ್ದರಿಂದ ತಾಳ್ಮೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು. ಒಂದರ್ಥದಲ್ಲಿ ತಾಳ್ಮೆಯು ನಮ್ಮ ಯಶಸ್ಸಿನ ಪರಿಪಾಠವನ್ನು ಸಹ ಗ್ರಹಿಸುತ್ತದೆ ಎನ್ನಬಹುದು. ಇದನ್ನೂ ಓದಿ:ಬಡವರು, ದಲಿತರು, ರೈತರ ಬಗ್ಗೆ ಇಂದಿರಾಗಾಂಧಿ ಕಳಕಳಿ ಅಪಾರ
Related Articles
Advertisement
ಯಶಸ್ಸು ಎಂಬ ಯಾತ್ರೆ ಬಂಡಿಯಲ್ಲಿ ಸಾಗುವ ಮುನ್ನ ಜೀವನದಲ್ಲಿ ಒಮ್ಮೆ ಯಾದರೂ ಅವಮಾನಕ್ಕೆ ಒಳಗಾಗಲೇ ಬೇಕು. ಏಕೆಂದರೆ ಅವಮಾನವನ್ನು ಮಾಡಿಸಿ ಕೊಳ್ಳದೆ ಸಮ್ಮಾನ ಮಾಡಿಸಿ ಕೊಂಡ ವರು ಈ ಜಗತ್ತಿನಲ್ಲಿ ಯಾರು ಇಲ್ಲ. ಅವಮಾನವಾದಾಗಲೇ ನಿಮ್ಮ ಆತ್ಮಸಾಕ್ಷಿಗೆ ನೋವಾಗುತ್ತದೆ. ಆತ್ಮ ಸಾಕ್ಷಿಗೆ ನೋವಾದಾಗಲೇ ನಿಮ್ಮಲ್ಲಿ ಜವಾ ಬ್ದಾರಿ ಮತ್ತಷ್ಟು ಹೆಚ್ಚುತ್ತದೆ. ಅವಮಾನ ವಾದಾಗಲೇ ಸಮ್ಮಾನ ಸಿಗುತ್ತದೆ. ಅವಮಾನವಾದಾಗಲೇ ಏನಾದರೂ ಒಂದನ್ನು ಸಾಧಿಸಬೇಕು ಎಂಬ ಕಿಚ್ಚು ಎದೆ ಯಲ್ಲಿ ಹೊತ್ತಿ ಕೊಳ್ಳುತ್ತದೆ. ಹಾಗಾಗಿ ಅವಮಾನ, ಅನುಮಾನ, ಸಮ್ಮಾನ ಈ 3 ಸೂತ್ರಗಳನ್ನು ಅನುಸರಿಸಿದಾಗಲೇ ಅಂತಿಮವಾಗಿ ಯಶಸ್ಸು ಕಾಣಲು ಸಾಧ್ಯ.
ಸತತವಾಗಿ ಪ್ರಯತ್ನಿಸಿದರೆ ಎಲ್ಲರಿಗೂ ಯಶಸ್ಸು ಲಭಿಸುತ್ತದೆ. ಹಲವಾರು ಸಾಧಕರು ಮತ್ತು ಮಹಾನ್ ವ್ಯಕ್ತಿಗಳು ಸಾಧನೆಯ ಶಿಖರವನ್ನು ತಲುಪಿದ್ದು ತಮ್ಮ ಸ್ವಪ್ರಯತ್ನ ದಿಂದಲೇ. ದೃಢವಾದ ಮನಸ್ಸು ಸ್ಪಷ್ಟ ಗುರಿ ತಿವಿಕ್ರಮನಂತಹ ಛಲವಿದ್ದರೆ ಯಶಸ್ಸು ಬಿಸಿಲ್ಗುದುರೆಯಲ್ಲ. ಜೀವನ ಸಾಗರದಲ್ಲಿ ಸ್ವ ಪ್ರಯತ್ನದ ಯಾನ ಸಾಗುತಿರಲಿ ಯಶಸ್ಸಿನ ದಿಗಂತದೆಡೆಗೆ.
-ಸೌಮ್ಯಾ, ಕಾರ್ಕಳ