ತೆಕ್ಕಟ್ಟೆ (ಕೊರವಡಿ) : ದೇಶದಲ್ಲಿ ಪ್ರಮುಖವಾಗಿ ಎರಡು ಸಮಸ್ಯೆಗಳು ಎದುರಾಗುತ್ತಿದ್ದು ವರ್ಷಕ್ಕೆ ಹತ್ತುವರೆ ಲಕ್ಷ ಮಂದಿ ಎಂಜಿನಿಯರ್ ಶಿಕ್ಷಣ ಮುಗಿಸಿ ಹೊರಬರುತ್ತಿದ್ದಾರೆ ಆದರೆ ಎರಡೂವರೆ ಲಕ್ಷ ಮಂದಿಗೆ ಮಾತ್ರ ಉದ್ಯೋಗ ದೊರಕುತ್ತಿದೆ. ಪ್ರಸ್ತುತ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಉದ್ಯೋಗದ ಕೊರತೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಹೊರಗಿನ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಮ್ಮ ಸ್ವ-ಸಾಮರ್ಥ್ಯವನ್ನು ವೃದ್ಧಿ ಮಾಡಿಕೊಳ್ಳುವ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ಅವರು ಜು. 30 ರವಿವಾರದಂದು ಕೊರವಡಿ ಹೊಳೆಕಟ್ಟು ಶ್ರೀ ಚೆನ್ನಬಸವೇಶ್ವರ ಭಜನಾ ಮಂದಿರದಲ್ಲಿ ನಡೆದ ಗ್ರಾಮ ವಿಸ್ತಾರಕ ಸಮಾಲೋಚನಾ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುವ ಒಟ್ಟು ಗ್ರಾಮಸ್ಥರು,ಗ್ರಾಮದ ಮೂಲಭೂತ ಸಮಸ್ಯೆಗಳು, ಸೈನಿಕರು, ಮೊಬೈಲ್ ಹಾಗೂ ದ್ವಿಚಕ್ರ ವಾಹನಗಳ ಬಳಕೆದಾರರು, ವಿದ್ಯಾವಂತರು, ಡಾಕ್ಟರ್, ಎಂಜಿನಿಯರ್, ಕೃಷಿಕರು, ಕೂಲಿ ಕಾರ್ಮಿಕರು ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಸೂಕ್ಷ್ಮವಾಗಿ ಅಧ್ಯಯನ ನಡೆಸುವ ಮೂಲಕ ಕೇಂದ್ರ ಸರಕಾರದ ಮುದ್ರಾ ಯೋಜನೆ ಸಹಿತ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ನಮ್ಮ ವ್ಯವಸಾಯದಲ್ಲಿ ಗಟ್ಟಿಯಾಗಿ ನಿಲ್ಲಲು ಪ್ರಯತ್ನಿಸಬೇಕು ಈ ನಿಟ್ಟಿನಲ್ಲಿ ದುಡಿಯುವ ಹಂಬಲವಿರುವವರಿಗೆ ಈ ಜಗತ್ತಿನಲ್ಲಿ ಒಳ್ಳೆಯ ಅವಕಾಶವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಕೊರವಡಿ ಹೊಳೆಕಟ್ಟು ಪರಿಶಿಷ್ಟ ಜಾತಿಯ ಕಾಲನಿಗೆ ಭೇಟಿ ನೀಡಿ ಕೇಂದ್ರ ಮಹತ್ವದ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಚರ್ಚಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿಶೋರ್ ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ , ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀವಾಣಿ ಅಡಿಗ, ಉಪಾಧ್ಯಕ್ಷ ಕೆ.ಮಹಾಬಲೇಶ್ವರ ಆಚಾರ್, ಗ್ರಾ.ಪಂ ಸದಸ್ಯರಾದ ಕಮಲಾಕ್ಷ ಪೈ, ರಾಘವೇಂದ್ರ ಪೂಜಾರಿ , ಗಣೇಶ್ ಭಟ್ ಗೋಪಾಡಿ, ಗಣೇಶ್ ಐತಾಳ್ , ಆನಂದ ಹೊಳೆಕಟ್ಟು, ನಾರಾಯಣ ಹೊಳೆಕಟ್ಟು, ಶೇಖರ ಮೇಸ್ತ್ರಿ, ಸದಾನಂದ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ನಮ್ ಊರಗೆ ಕುಡು ನೀರಿನ ಸಮಸ್ಯೆ ಇತ್ತ್ . ಇತ್ಲಗೆ ಹೊಯಿ ಸಮಸ್ಯೆಯಿಂದಾಯ್ ಎಲಿÅಗೂ ಕೆಲ…Õಕಾರ್ಯ ಇಲ್ದಿದಂಗ್ ಆಯ್ !ನಮ್ ಗ್ರಾಮಗೆ ಬಾರ್ ಇಲೆ ಇಪ್ಕೊಯ್ ತುಂಬಾ ಖುಷಿ ಆತ್.ಆದ್ರೆ ನಮ್ ಊರಗೆ ಎಂಥಾ ಇರ್ಲಿ ಇಲೆ ಹೊಯ್ಲಿ ಎಲ್ಲರ್ ಕೈಯಂಗೂ ಮೊಬೈಲ್ ಇತ್ತ್ !
– ಲಕ್ಷ್ಮಣ ಕಾಂಚನ್,
ಗ್ರಾ.ಪಂ.ಕುಂಭಾಶಿ ಸದಸ್ಯ