Advertisement

‘ಮಾಧ್ಯಮದಲ್ಲಿ ಸ್ವನಿಯಂತ್ರಣ ಅಗತ್ಯ’

09:45 AM Nov 22, 2017 | |

ನಂತೂರು: ಮಾಧ್ಯಮಗಳು ಪ್ರಜ್ಞಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಇವುಗಳಿಗೆ ಲಗಾಮು ಹಾಕುವ ಅನಿವಾರ್ಯತೆ ಇಲ್ಲ. ಆದರೆ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಸ್ವಯಂ ನಿಯಂತ್ರಣದ ಕುರಿತು ಆಲೋಚಿಸುವುದು ಅತಿ ಆವಶ್ಯಕ ಎಂದು ನಗರದ ನಂತೂರು ಸಂದೇಶ ಪ್ರತಿಷ್ಠಾನದಲ್ಲಿ ಜರಗಿದ ‘ಮಾಧ್ಯಮಗಳಿಗೆ ಬೇಕೇ ಲಗಾಮು’ ಎಂಬ ವಿಷಯದ ಕುರಿತ ಸಂವಾದಗೋಷ್ಠಿಯಲ್ಲಿ ವಿಷಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು. ಮಾಮ್‌ ಮಂಗಳೂರು ಹಾಗೂ ಸಂದೇಶ ಪ್ರತಿಷ್ಠಾನ ಜಂಟಿಯಾಗಿ ಮಂಗಳವಾರ ಈ ಸಂವಾದಗೋಷ್ಠಿಯನ್ನು ಆಯೋಜಿಸಿತ್ತು.

Advertisement

ಉದ್ಘಾಟಿಸಿದ ಮಂಗಳೂರು ವಿವಿ ಎಂಸಿಜೆ ವಿಭಾಗದ ಪ್ರಾಧ್ಯಾಪಕ ಡಾ| ಜಿ.ಪಿ. ಶಿವರಾಮ್‌ ಮಾತನಾಡಿ, ಮಾಧ್ಯಮಗಳು ಜನರನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊಂದಿದ್ದು, ತಮ್ಮ ಹೊಣೆಗಾರಿಕೆಯನ್ನು ಅರಿತು ಕೆಲಸ ಮಾಡಬೇಕಿದೆ. ಪ್ರಸ್ತುತ ದಿನಗಳಲ್ಲಿ ತನಿಖಾ ವರದಿಗಳು ಮಾಯವಾಗಿದ್ದು, ಪತ್ರಕರ್ತರು ಸ್ವಂತಿಕೆಯತ್ತ ಆಲೋಚಿಸಬೇಕಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ| ವಿಕ್ಟರ್‌ ವಿಜಯ್‌ ಲೋಬೋ ಮಾತನಾಡಿ, ಸಂವಿಧಾನದ ನಾಲ್ಕನೇ ಅಂಗವಾಗಿರುವ ಮಾಧ್ಯಮವು ಉಳಿದ ಮೂರು ಅಂಗಗಳ ಕೆಲಸ ನಿರ್ವಹಿಸಲು ಹೋದರೆ ಜನರನ್ನು ತಪ್ಪು ದಾರಿಗೆಳೆದಂತಾಗುತ್ತದೆ. ಮಾಧ್ಯಮಗಳು ಜನರಿಗೆ ಯಾವ ಸಂದೇಶವನ್ನು ನೀಡುತ್ತಿವೆ ಎಂಬುದನ್ನು ವಿಮರ್ಶಿಸುವುದು ಆವಶ್ಯಕ ಎಂದರು.

ಬಳಿಕ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಯಿತು. ಮಾಮ್‌ ಉಪಾಧ್ಯಕ್ಷ ಡಾ| ರೊನಾಲ್ಡ್‌ ಅನಿಲ್‌ ಫೆರ್ನಾಂಡಿಸ್‌
ಸಂವಾದವನ್ನು ನಿರ್ವಹಿಸಿದರು. ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರನ್ನು ಗೌರವಿಸಲಾಯಿತು. ಕಾರ್ಯದರ್ಶಿ ವೇಣುವಿನೋದ್‌ ಕೆ.ಎಸ್‌.ಸ್ವಾಗತಿಸಿದರು. ಸದಸ್ಯೆ ಸ್ಮಿತಾ ಶೆಣೈ ನಿರ್ವಹಿಸಿದರು.

ಹಿಂದಿನ ಕಾಲಕ್ಕೆ ಹೋಲಿಸಿದರೆ ಮಾಧ್ಯಮಗಳಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು, ತಂತ್ರಜ್ಞಾನಗಳು ವ್ಯವಸ್ಥೆ ಯನ್ನು ಅಲ್ಲೋಲಕಲ್ಲೋಲ ಮಾಡುತ್ತಿವೆಯೇ ಎಂಬ ಆತಂಕಗಳಿವೆ. ನಾವು ಕೊಡುವ ಸುದ್ದಿ ಸಮಾಜಕ್ಕೆ ಧಕ್ಕೆ ತರುತ್ತಿದೆಯೇ ಎಂದು ಸ್ವವಿಮರ್ಶೆ ಮಾಡಿಕೊಳ್ಳಬೇಕು.
ಚಿದಂಬರ ಬೈಕಂಪಾಡಿ , ಹಿರಿಯ ಪತ್ರಕರ್ತ

Advertisement

ಮಾಧ್ಯಮಗಳು ಸರಕಾರ ಹಾಗೂ ಜನರ ನಡುವಿನ ಸೇತುವೆಯಾಗಿರುವುದರಿಂದ ಇದರ ಜವಾಬ್ದಾರಿ ಸಾಕಷ್ಟಿವೆ. ಮಾಧ್ಯಮಕ್ಕೆ ಇತರರು ನಿಯಂತ್ರಣ ಹೇರುವುದಕ್ಕಿಂತಲೂ ಸ್ವನಿಯಂತ್ರಣಕ್ಕೆ ಆದ್ಯತೆ ನೀಡಬೇಕಿದೆ.
ಫಾ| ರಿಚರ್ಡ್‌ ಡಿ’ ಸೋಜಾ, ಮಾಧ್ಯಮ ಚಿಂತಕ

ಮಾಧ್ಯಮಗಳು ಕಾನೂನಿನ ಚೌಕಟ್ಟನ್ನು ತಿಳಿದುಕೊಂಡು ಮುಂದುವರಿಯುವುದು ಅತಿ ಅಗತ್ಯವಾಗಿದ್ದು, ಯಾವುದೇ ಸುದ್ದಿ ಬರೆಯುವಾಗಲೂ ಕಾನೂನನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕಿದೆ.
ಸಂತೋಷ್‌ ಪೀಟರ್‌ ಡಿ’ ಸೋಜಾ, ನ್ಯಾಯವಾದಿ

ಆಡಳಿತ ವ್ಯವಸ್ಥೆಯೇ ಹದಗೆಡುತ್ತಿರುವಾಗ ನಾವು ಮಾಧ್ಯಮದ ಮೇಲೆ ಆರೋಪ ಹೊರಿಸುವುದು ಅಪ್ರಸ್ತುತವಾಗುತ್ತದೆ. ವ್ಯವಸ್ಥೆ ಹಿಂದಿನ ಮಾಫಿಯಾ ನಿಯಂತ್ರಿಸು ವಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದಾಗಿದೆ.
 –ದಿನೇಶ್‌ ಹೊಳ್ಳ, ಸಾಮಾಜಿಕ ಹೋರಾಟಗಾರ 

Advertisement

Udayavani is now on Telegram. Click here to join our channel and stay updated with the latest news.

Next