Advertisement

ಕ್ರೀಡಾ ಶಾಲೆಗೆ ಕಾಟಾಚಾರದ ಆಯ್ಕೆ ಪ್ರಕ್ರಿಯೆ:ಆರೋಪ

12:40 PM Jan 08, 2020 | Suhan S |

ದೇವನಹಳ್ಳಿ: ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2020-21 ನೇ ಸಾಲಿಗೆ ನಡೆದ ಕ್ರೀಡಾ ಶಾಲೆ ಮತ್ತು ವಸತಿ ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಭಾಗವಹಿಸಿದ್ದರು. ನಗರದ ಕ್ರೀಡಾ ಪಟುಗಳ ಆಯ್ಕೆಯ ಟ್ರಯಲ್ಸ್‌ ನಡೆಯಿತು.

Advertisement

18 ಕ್ರೀಡಾಪಟುಗಳ ಆಯ್ಕೆ: ಈ ವೇಳೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಜನಾರ್ದನ್‌ ಮಾತನಾಡಿ, 2020-21 ನೇ ಸಾಲಿನಲ್ಲಿ ತಾಲೂಕಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿ ಕೊಂಡಿದ್ದ ವಾರ್ಷಿಕ ವಿವಿಧ ಕ್ರೀಡೆ ಯಲ್ಲಿ ಒಟ್ಟು 118 ಮಂದಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಗೊಂಡಿದ್ದಾರೆ. ರಾಜ್ಯ ಮಟ್ಟಕ್ಕೆ ನಾಲ್ಕೂ ತಾಲೂಕುಗಳಿಂದ 14 ರಿಂದ 17 ವಯೋಮಾನದ 18 ಬಾಲಕರು ಮತ್ತು 11 ಬಾಲಕಿಯರು ಆಯ್ಕೆಯಾಗಿದ್ದಾರೆ. ವಾರ್ಷಿಕ ಪರೀಕ್ಷೆ ಹತ್ತಿರ ಬರುತ್ತಿರುವುದರಿಂದ ಆಯ್ಕೆಯಲ್ಲಿ ವಿಧ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಕೋಕೋ ತರಬೇತುದಾರ ಎನ್‌.ಶ್ರೀಧರ್‌ ಮಾತನಾಡಿ, ಕಿರಿಯರ ವಿಭಾಗದಲ್ಲಿ ಮಾತ್ರ ಆಯ್ಕೆ ನಡೆಸಲಾಗುತ್ತಿದೆ. ಹಿರಿಯರ ವಿಭಾಗಕ್ಕೆ ಅರ್ಜಿಗಳನ್ನು ನೀಡಲಾಗುತ್ತಿದ್ದು ಜ.11 ಮತ್ತು 12 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಪರೀಕ್ಷೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ವಿಶ್ವಾಸ್‌ ಮಾತನಾಡಿ, ಜಿಲ್ಲೆಯಿಂದ ಆಯ್ಕೆಗೊಳ್ಳುವ ಕ್ರೀಡಾ ಪಟುಗಳು ಮೈಸೂರು, ಮಡಿಕೇರಿ, ಧಾರವಾಡ, ಕ್ರೀಡಾ ಶಾಲೆಗಳು ಮತ್ತು ನಿಲಯಗಳಿಗೆ ದಾಖ

ಲಾಗುದರಿಂದ, ಪೋಷಕರು ಮಕ್ಕಳನ್ನು ಆಯ್ಕೆ ಟ್ರಯಲ್ಸ್ ಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.ಜಿಲ್ಲಾ ಮಟ್ಟದಲ್ಲಿ ಪ್ರಸ್ತುತ ವಿಶ್ವನಾಥ ಗ್ರಾಮದಲ್ಲಿ ಖಾಲಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಇಲಾಖೆ ವತಿಯಿಂದ ಗುರುತಿಸಲಾಗಿದ್ದು, ಮುಂದಿನ ವರ್ಷ ಕ್ರೀಡಾ ಶಾಲೆ ಮತ್ತು ನಿಲಯ ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು. ಈ ವೇಳೆ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ಪುಟ್ಟಸ್ವಾಮಿ, ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next