Advertisement

ವೀರಶೈವ ಶಿವಾಚಾರ್ಯರ ಜಿಲ್ಲಾ ಘಟಕಕ್ಕೆ ಆಯ್ಕೆ

07:29 PM Nov 11, 2020 | Suhan S |

ಕಲಬುರಗಿ: ಅಖೀಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಜಿಲ್ಲಾ ಘಟಕದ ಪುನಶ್ಚೇತನಕ್ಕಾಗಿ ನೂತನ ಪದಾಧಿ ಕಾರಿಗಳ ಆಯ್ಕೆ ಮಾಡಲಾಗಿದೆ.

Advertisement

ಬಾಳೆಹೊನ್ನೂರಿನ ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಸಮಾಲೋಚನೆ ಮಾಡಿ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯ ನಡೆಯಿತು.

ಸಂಸ್ಥೆಯ ನೂತನ ಅಧ್ಯಕ್ಷರಾಗಿ ಶಕಾಪುರ ತಪೋವನ ಮಠದ ಡಾ| ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ನೇಮಕವಾದರು. ಪ್ರಧಾನ ಕಾರ್ಯದರ್ಶಿಗಳಾಗಿ ಪಾಳಾ ಹಿರೇಮಠದ ಡಾ| ಗುರುಮೂರ್ತಿಶಿವಾಚಾರ್ಯರು ಆಯ್ಕೆಗೊಂಡಿದ್ದು, ಸಂಸ್ಥೆಗೆ ಗೌರವ ಅಧ್ಯಕ್ಷರಾಗಿ ಕಡಗಂಚಿಶಾಂತಲಿಂಗೇಶ್ವರ ಮಠದ ವೀರಭದ್ರಶಿವಾಚಾರ್ಯರು ಹಾಗೂ ಶ್ರೀನಿವಾಸ ಸರಡಗಿ ಚಿಕ್ಕವೀರೇಶ್ವರ ಮಠದಡಾ| ರೇವಣಸಿದ್ಧ ಶಿವಾಚಾರ್ಯರು ಆಯ್ಕೆಗೊಂಡಿದ್ದಾರೆ.

ಉಪಾಧ್ಯಕ್ಷರಾಗಿ ಮಾಗಣಗೇರಿ ಹಿರೇಮಠದ ಡಾ| ವಿಶ್ವಾರಾಧ್ಯಶಿವಾಚಾರ್ಯರು, ಸೇಡಂ ಶಿವಶಂಕರಮಠದ ಶಿವಶಂಕರ ಶಿವಾಚಾರ್ಯರು, ಬಡದಾಳ ತೇರಿನಮಠದ ಡಾ|ಅಭಿನವ ಚನ್ನಮಲ್ಲ ಶಿವಾಚಾರ್ಯರು, ಹೊನ್ನಕಿರಣಗಿ ಹಿರೇಮಠದ ಚಂದ್ರಗುಂಡ ಶಿವಾಚಾರ್ಯರು ಆಯ್ಕೆಯಾಗಿದ್ದಾರೆ. ಸಂಸ್ಥೆಯ ಕೋಶಾಧಿಕಾರಿಗಳಾಗಿ ಕಡಕೋಳ ಮಡಿವಾಳೇಶ್ವರ ಮಠದ ಡಾ| ರುದ್ರಮುನಿ ಶಿವಾಚಾರ್ಯರು ಕಾರ್ಯ ನಿರ್ವಹಿಸಲಿದ್ದು, ಪಡಸಾವಳಿ, ಗುಂಡಗುರ್ತಿ, ದೇವಾಪುರ, ಅಷ್ಟಗಿ, ಮಂಗಲಗಿ,ಮಹಾಗಾಂವ, ಮಾದನಹಿಪ್ಪರಗಿ, ತೊಟ್ನಳ್ಳಿ, ಹರಸೂರು ಕಲ್ಮಠ,ಹಲಕರ್ಟಿ, ಚಿತ್ತಾಪುರ, ದಂಡಗುಂಡ, ವಿ.ಕೆ. ಸಲಗರ, ಚಿಣಮಗೇರಿ ನೂತನ ಶ್ರೀಗಳು, ಶ್ರೀನಿವಾಸ ಸರಡಗಿ, ಅಫಜಲಪುರ ಶ್ರೀಗಳನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ರಂಭಾಪುರಿ ಜಗದ್ಗುರುಗಳು ಉದ್ಘೋಷಣೆ ಮಾಡಿದರು.

ನಂತರ ಆಶೀರ್ವಚನ ನೀಡಿದ ಅವರು, ಸಕಲ ಜೀವಾತ್ಮರಿಗೆ ಸದಾಒಳಿತನ್ನೇ ಬಯಸುತ್ತಾ ಬಂದಿರುವವೀರಶೈವ ಧರ್ಮದ ಸಂಸ್ಕೃತಿ, ಉದಾತ್ತ ಮಾನವೀಯ ಮೌಲ್ಯಗಳ ಸಂರಕ್ಷಣೆ,ಗುರು ಪೀಠ ಪರಂಪರೆ ಇತಿಹಾಸ, ಧಾರ್ಮಿಕ ಸಂಸ್ಕಾರ ಹಾಗೂ ನಾಡಿನ ಉತ್ಕೃಷ್ಟ ಸಂಸ್ಕೃತಿ ಎತ್ತಿ ಹಿಡಿಯುವನಿಟ್ಟಿನಲ್ಲಿ ಆಯ್ಕೆಗೊಂಡ ನೂತನ ಪದಾಧಿಕಾರಿಗಳು ಕಾರ್ಯ ನಿರ್ವಹಿಸಲಿ ಎಂದು ಆಶಿಸಿದರು.

Advertisement

ವೈಚಾರಿಕತೆ ಮತ್ತು ಸುಧಾರಣೆ ಹಿನ್ನೆಲೆಯಲ್ಲಿ ಕೆಲವು ಸಮಾಜ ಘಾತಕಶಕ್ತಿಗಳನ್ನು ತಡೆಗಟ್ಟಿ ಸತ್ಯ ಸೈದ್ಧಾಂತಿಕ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯ ಕೈಗೊಳ್ಳಲೆಂದು ಬಯಸಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ನೂತನ ಅಧ್ಯಕ್ಷ ಡಾ| ಸಿದ್ಧರಾಮ ಶಿವಾಚಾರ್ಯರು,ಪ್ರಧಾನ ಕಾರ್ಯದರ್ಶಿ ಡಾ| ಗುರುಮೂರ್ತಿ ಶಿವಾಚಾರ್ಯರು ಸಂಸ್ಥೆಯ ಧ್ಯೇಯೋದ್ದೇಶಗಳಂತೆ ವೀರಶೈವ ಧರ್ಮದ ಸಂಸ್ಕೃತಿ, ಗುರು ಪರಂಪರೆಯ ಮೌಲ್ಯಗಳು° ಪ್ರಸಾರ ಪ್ರಚಾರಪಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಕಾರ್ಯ ಮಾಡುತ್ತೇವೆ ಎಂದರು.

ಮುಂದಿನ ದಿನಗಳಲ್ಲಿ ತಾಲೂಕಾಘಟಕಗಳನ್ನು ಹುಟ್ಟು ಹಾಕಿ ಅಲ್ಲಿಯೂ ಪದಾಧಿಕಾರಿಗಳನ್ನು ನಿಯುಕ್ತಿಗೊಳಿಸಿ ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸುತ್ತೇವೆ ಎಂದು ಸಂಕಲ್ಪ ಕೈಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next