Advertisement
ವಿದ್ಯಾನಗರ ಕ್ರೀಡಾ ಹಾಸ್ಟೆಲ್ ಆವರಣದಲ್ಲಿ ಬುಧವಾರ ಇಂಡೋ ಇಂಟರ್‌ನ್ಯಾಶನಲ್ ಪ್ರೀಮಿಯರ್ ಲೀಗ್ ಕಬಡ್ಡಿ ಲೀಗ್ ಆಯ್ಕೆ ಪ್ರಕ್ರಿಯೆ ನಡೆಯಿತು. ಒಟ್ಟಾರೆ 300ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದರು. ಇವರಲ್ಲಿ 200 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ 150 ಆಟಗಾರರು ಲೀಗ್‌ನಲ್ಲಿ ವಿವಿಧ ತಂಡಗಳ ಪರ ಆಡಲಿದ್ದಾರೆ. ಇನ್ನುಳಿದ 50 ಮಂದಿ ಹೆಚ್ಚುವರಿ ಆಟಗಾರರಾಗಿರುತ್ತಾರೆ.ಆಟಗಾರರನ್ನು ಎ, ಬಿ, ಸಿ ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ವಿಭಾಗದಲ್ಲಿ ಆಯ್ಕೆಯಾದ ಆಟಗಾರರಿಗೆ ಕ್ರಮವಾಗಿ 10, 8 ಹಾಗೂ 6 ಲಕ್ಷ ರೂ. ಮೊತ್ತವನ್ನು ನೀಡಲಾಗುತ್ತದೆ. ಹೆಚ್ಚುವರಿ ಆಟಗಾರರಿಗೆ ಕ್ರಮವಾಗಿ 4, 3 ಹಾಗೂ 2 ಲಕ್ಷ ರೂ. ನೀಡಲಾಗುತ್ತದೆ ಎಂದು ಪ್ರಸಾದ್ ಬಾಬು ತಿಳಿಸಿದರು.
ಸದ್ಯ ಇಂಡೋ ಇಂಟರ್‌ನ್ಯಾಶನಲ್ ಪ್ರೀಮಿಯರ್ ಲೀಗ್ ಕಬಡ್ಡಿ ಕೂಟಕ್ಕೆ ಆಯ್ಕೆಯಾಗಿರುವ ಆಟಗಾರರ ಹೆಸರನ್ನು ಬಹಿರಂಗಪಡಿಸದಿರಲು ನಿರ್ಧರಿಸಲಾಗಿದೆ. ನ್ಯೂ ಕಬಡ್ಡಿ ಫೆಡರೇಷನ್ ವತಿಯಿಂದ ಆಯೋಜಿಸಲಾಗುವ ಮುಂದಿನ ವಿಶ್ವಕಪ್ ಕಬಡ್ಡಿ ಬಳಿಕ ಭಾರತ ತಂಡವನ್ನು ಪ್ರಕಟಿಸಲಾಗುತ್ತದೆ. ಆಯ್ಕೆಯಾದ ಹೆಚ್ಚಿನವರು ರೈಲ್ವೇಸ್, ಪೊಲೀಸ್ ಹಾಗೂ ಸರ್ವಿಸಸ್ ಆಟಗಾರರಾಗಿದ್ದಾರೆ ಎನ್ನುವ ಸುಳಿವನ್ನು ಮಾತ್ರ ಪ್ರಸಾದ್ ಬಾಬು ನೀಡಿದರು. ಆಯ್ಕೆ ಪ್ರಕ್ರಿಯೆ 12 ಮಂದಿ ಮಾಜಿ ಕ್ರೀಡಾಪಟುಗಳ ಸಮ್ಮುಖದಲ್ಲಿ ಪಾರದರ್ಶಕವಾಗಿ ನಡೆದಿದೆ. ಆಟಗಾರರ ಜತೆ 100 ಮಂದಿ ರೆಫ್ರಿಗಳನ್ನೂ ಆಯ್ಕೆ ಮಾಡಲಾಗಿದೆ. ಇದರಲ್ಲಿ 27 ಮಂದಿ ರೆಫ್ರಿಗಳು ರಾಜ್ಯದವರಾಗಿದ್ದಾರೆ ಎಂದು ಪ್ರಸಾದ್ ಬಾಬು ತಿಳಿಸಿದರು.
Related Articles
ಇಂಡೋ ಇಂಟರ್‌ನ್ಯಾಶನಲ್ ಪ್ರೀಮಿಯರ್ ಕಬಡ್ಡಿ ಲೀಗ್ ಆಯ್ಕೆ ಪ್ರಕ್ರಿಯೆಯಲ್ಲಿ ವಿವಿಧ ರಾಜ್ಯಗಳಿಂದ 18 ಪ್ರೊ ಕಬಡ್ಡಿ ಆಟಗಾರರು ಭಾಗವಹಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಈ ಆಟಗಾರರು ಯಾರು ಎನ್ನುವುದು ಬಹಿರಂಗಗೊಂಡಿಲ್ಲ.
Advertisement