Advertisement

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಿಸ್ತಿಗೆ ಆಯ್ಕೆ

12:45 AM Sep 05, 2019 | mahesh |

ಕಾವೂರು: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಕಾವೂರು ಪ.ಪೂ. ಕಾಲೇಜು (ಪ್ರೌಢಶಾಲೆಯ ವಿಭಾಗದ)ಮಲ್ಲೇಶ್‌ ನಾಯಕ್‌ ಎ.ಸಿ. ಆಯ್ಕೆಯಾಗಿದ್ದಾರೆ. 1998ರಲ್ಲಿ ಶಿಕ್ಷಕ ವೃತ್ತಿಗೆ ಪಾದಾರ್ಪಣೆ ಮಾಡಿದ ಅವರು ಕಾವೂರು ಪ್ರೌಢಶಾಲೆಯಲ್ಲಿ ಹಿಂದಿ ಭಾಷಾ ಸಹಶಿಕ್ಷಕನಾಗಿ ಬಳಿಕ ಇದೀಗ ಐದು ವರ್ಷಗಳಿಂದ ಮುಖ್ಯ ಶಿಕ್ಷಕನಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಹಳೆಯ ಕಟ್ಟಡವನ್ನು ನವೀಕರಣಗೊಳಿಸಿ, ಸಿಸಿ ಕೆಮರಾ ಅಳವಡಿಸಿ ಭದ್ರತೆಯ ಜತೆ ಜತೆಗೆ ಮಕ್ಕಳಿಗೆ ಉತ್ತಮ ಶೌಚಾಲಯ, ಕುಡಿಯುವ ನೀರು, ಮಕ್ಕಳಿಗೆ ಟ್ರ್ಯಾಕ್‌ ಸೂಟ್ ಸಹಿತ ವಿವಿಧ ಮೂಲಸೌಲಭ್ಯವನ್ನು ಸುಮಾರು 50ರಿಂದ 50 ಲಕ್ಷ ರೂ.ಗಳನ್ನು ದಾನಿಗಳ ನೆರವಿನಿಂದ,ಆಡಳಿತ ಮಂಡಳಿಯ ಸಹಕಾರದಲ್ಲಿ ಒದಗಿಸಿ ಕಲಿಕಾ ವಾತಾವರಣ ನಿರ್ಮಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

Advertisement

ಶಾಲಾ ವಠಾರದಲ್ಲಿ ಮಕ್ಕಳಿಗೊಂದು ಸಸಿ ಯೋಜನೆಯಂತೆ ಅದನ್ನು ಪಾಲನೆ ಮಡಿ ಬೆಳೆಸುವ ಮಕ್ಕಳಿಗೆ ಅಂಕ ಸಹಿತ ಪ್ರೋತ್ಸಾಹ ನೀಡುತ್ತಿದ್ದಾರೆ. ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಾಗುತ್ತಿದೆ. ಇದರ ಜತೆಗೆ 10 ವರ್ಷಗಳಿಂದ ಹಿಂದಿ ಭಾಷಾ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರಿ ಹಂಸಿನಿ ಎಂ. ನಾಯಕ್‌ ಎಸೆಸೆಲ್ಸಿ, ಪುತ್ರ ವಿಶ್ವೇಶ ಎಂ. ನಾಯಕ್‌ 5ನೇ ತರಗತಿ ಕಲಿಯುತ್ತಿದ್ದು, ಪತ್ನಿ ರೂಪಾ ಟಿ.ಎಸ್‌. ಮನೆವಾರ್ತೆ ನೋಡಿಕೊಳ್ಳುತ್ತಿದ್ದಾರೆ.

ಸೇವೆಗೆ ಸಂದ ಗೌರವ

ಶಿಕ್ಷಕ ವೃತ್ತಿಯನ್ನು ನಾನು ನನ್ನ ಶಿಕ್ಷಕರನ್ನು ಮಾದರಿ ಯಾಗಿರಿಸಿ ಕೊಂಡು ಆಯ್ಕೆ ಮಾಡಿಕೊಂಡಿದ್ದೇನೆ. ಇದರಲ್ಲಿ ನನಗೆ ಸಂತೃಪ್ತಿಯಿದೆ. ಈ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವುದರಿಂದ ಈ ಬಾರಿ ಸಂಖ್ಯೆ 70 ಹೆಚ್ಚಾಗಿದ್ದು, 140 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಉತ್ತಮ ಶಿಕ್ಷಕ ಪ್ರಶಸ್ತಿ ದೊರಕಿರುವುದಕ್ಕೆ ಸೇವೆಗೆ ಸಂದ ಗೌರವ.
– ಮಲ್ಲೇಶ್‌ ನಾಯಕ್‌ ಎ.ಸಿ.
Advertisement

Udayavani is now on Telegram. Click here to join our channel and stay updated with the latest news.

Next