Advertisement

Bantwal ಮರಳು ಅಕ್ರಮ ಸಾಗಾಟ ಲಾರಿಗಳ ವಶ

12:05 AM Feb 14, 2024 | Team Udayavani |

ಬಂಟ್ವಾಳ: ಬಿ.ಸಿ.ರೋಡು ಸಮೀಪದ ತಲಪಾಡಿಯಲ್ಲಿ ಫೆ. 12ರಂದು ರಾತ್ರಿ ಬಂಟ್ವಾಳ ನಗರ ಪೊಲೀಸರು ವಾಹನ ತಪಾಸಣೆ ಮಾಡುವ ಸಂದರ್ಭ ಅಕ್ರಮ ಮರಳು ಸಾಗಾಟ ಪತ್ತೆಯಾಗಿದ್ದು, ಮೂರು ಲಾರಿಗಳನ್ನು ವಶಪಡಿಸಿಕೊಂಡಿರುವ ಪೊಲೀಸರು 8 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Advertisement

ನಗರ ಠಾಣಾ ಪಿಎಸ್‌ಐ ರಾಮಕೃಷ್ಣ ನೇತೃತ್ವದ ತಂಡ ತಲಪಾಡಿಯಲ್ಲಿ ಮೂರು ಟಿಪ್ಪರ್‌ ಲಾರಿಗಳನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಮರಳು ತುಂಬಿಸಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಕುರಿತು ಚಾಲಕರಲ್ಲಿ ವಿಚಾ ರಿಸಿದಾಗ ಅವರು ಯಾವುದೇ ದಾಖಲೆ/ಪರವಾನಿಗೆ ಪಡೆಯದೇ, ವಳಚ್ಚಿಲ್‌ ನಿಂದ ಮರಳು ತುಂಬಿಸಿ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ತುಂಬಿಸಿದ್ದ ಮರಳು ಸೇರಿದಂತೆ ಲಾರಿಗಳನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿಗಳಾದ ಸಜೀಪಮುನ್ನೂರಿನ ಸಫìರಾಜ್‌ ಅಹಮ್ಮದ್‌, ಕುಳಾಲು ಮನೆಯ ಅಬ್ದುಲ್‌ ಅಜೀಜ್‌, ಕುರಿಯಾಳದ ಕಿರಣ್‌, ಅಮಾrಡಿಯ ಅವಿಲ್‌ ಕ್ರಾಸ್ತಾ, ಮಂಚಿಯ ಮೊಹಮ್ಮದ್‌ ಇಸ್ಮಾಯಿಲ್‌ ಯಾನೆ ರಶೀದ್‌, ಬಿ.ಸಿ.ರೋಡಿನ ಮೊಹಮ್ಮದ್‌ ಆರೀಫ್‌, ವಳಚ್ಚಿಲ್‌ನ ಸತ್ತಾರ್‌ ಹಾಗೂ ಅಜರುದ್ದೀನ್‌ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next