ಆನೇಕಲ್: ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋರಮಂಗಲ ನಿವಾಸಿ ವಿಶ್ವಾಸ್ (26), ಮಾಲೂರು ತಾಲೂಕು ನಿವಾಸಿ ಅಂಬರೀಶ್ (36) ಬಂಧಿತರು. ಬಂಧಿತ ಆರೋಪಿಗಳಿಂದ 66 ಲಕ್ಷ ರೂ. ಮೌಲ್ಯದ 165 ಕೆ.ಜಿ.ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ.
ಗಾಂಜಾ ಚೀಲಗಳ ವರ್ಗಾವಣೆ: ಹುಸ್ಕೂರು ರಸ್ತೆಯಲ್ಲಿರುವ ಅಯ್ಯಪ್ಪ ದೇವಸ್ಥಾನದ ಮುಂಭಾಗದ ಖಾಲಿ ಜಾಗದಲ್ಲಿ 2 ಕಾರುಗಳನ್ನು ನಿಲ್ಲಿಸಿಕೊಂಡು ಒಂದು ಕಾರಿನಿಂದ ಇನ್ನೊಂದು ಕಾರಿಗೆ ಗಾಂಜಾ ಚೀಲಗಳನ್ನು ವರ್ಗಾವಣೆ ಮಾಡುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಪಡೆದ ಪರಪ್ಪನ ಅಗ್ರಹಾರ ಪೊಲೀಸರು ಆರೋಪಿ ಗಳು ಹಾಗೂ ಗಾಂಜಾವನ್ನು ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾ ಚರಣೆ ನೇತೃತ್ವವನ್ನು ಎಲೆಕ್ಟ್ರಾ ನಿಕ್ ಸಿಟಿ ಉಪ ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಎನ್.ಪವನ್, ಪರಪ್ಪನ ಅಗ್ರಹಾರ ಠಾಣೆ ಇನ್ಸ್ ಪೆಕ್ಟರ್ ಎಚ್.ಎಲ್. ನಂದೀಶ್, ಉಸ್ತುವಾರಿ ಪೊಲೀಸ್ ಇನ್ಸ್ ಪೆಕ್ಟರ್, ಗಣಪತಿ, ಪಿಎಸ್‌ಐ ಪಿ.ಮಂಜುನಾಥ್, ಎಸ್.ಬಾಬು, ಹೆಚ್.ಎಂ.ಆನಂದ್, ಹಾವ ನೂರು ನಾಗರಾಜ್, ಗಂಗಾಧರಯ್ಯ, ಸಿಬ್ಬಂದಿ ಗಳಾದ ವೆಂಕಟಸ್ವಾಮಿ ಯೋಗೀಶ್, ಶಿವರಾಜ್, ಮಂಜುನಾಥ್, ತಿರುಮಲೇಗೌಡ, ಕರಿ ಬಸಪ್ಪ, ಪ್ರಕಾಶ್, ಲೋಕೇಶ್ ಇದ್ದರು.
ಎಲ್ಲೆಲ್ಲಿ ಗಾಂಜಾ ಮಾರಾಟ? : ಎಲೆಕ್ಟ್ರಾನಿಕ್ ಸಿಟಿ, ಪರಪ್ಪನ ಅಗ್ರಹಾರ, ಮಡಿವಾಳ, ಕೋರಮಂಗಲ, ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಣ್ಣ, ಸಣ್ಣ, ಪ್ಯಾಕೇಟ್ ಗಳನ್ನು ಮಾಡಿ ಒಂದು ಪ್ಯಾಕೇಟ್‌ಗೆ 500 ರೂ.ನಂತೆ ಆರೋಪಿಗಳು ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.