Advertisement

ಅಂಕಿತ್‌ ನಿರ್ವಹಣೆಗೆ ಸೆಹವಾಗ್‌ ಮೆಚ್ಚುಗೆ

06:00 AM Apr 28, 2018 | Team Udayavani |

ಹೈದರಾಬಾದ್‌: ಗರುವಾರ ನಡೆದ ರೋಚಕ ಸೆಣಸಾಟದಲ್ಲಿ ಪಂಜಾಬ್‌ ತಂಡವು ಹೈದರಾಬಾದ್‌ಗೆ ಶರಣಾಗಿರಬಹುದು. ಆದರೆ ಪಂಜಾಬ್‌ನ ಹೀರೊ ಅಂಕಿತ್‌ ರಜಪೂತ್‌ ಅವರ ಅಮೋಘ ನಿರ್ವಹಣೆಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್‌ ಮತ್ತು ಮೊಹಮ್ಮದ್‌ ಕೈಫ್ ಮೆಚ್ಚುಗೆ ಸೂಚಿಸಿದ್ದಾರೆ.

Advertisement

ಅಂಕಿತ್‌ ಶ್ರೇಷ್ಠ ನಿರ್ವಹಣೆ
ಈ ಪಂದ್ಯದ ಫ‌ಲಿತಾಂಶವನ್ನು ನಾವು ಇಷ್ಟಪಡುವುದಲ್ಲ. ಆದರೆ ಪಂದ್ಯದ ಆರಂಭದಲ್ಲಿ ಅಂಕಿತ್‌ ಅವರ ನಿರ್ವಹಣೆಯನ್ನು ಗಮನಿಸಬೇಕು. ಅವರು 14 ರನ್ನಿಗೆ 5 ವಿಕೆಟ್‌ ಕಿತ್ತು ಹೈದರಾಬಾದ್‌ನ ಕುಸಿತಕ್ಕೆ ಕಾರಣರಾಗಿದ್ದರು. ಗೆಲುವಿಗಾಗಿ ಹೈದರಾಬಾದ್‌ಗೆ ಅಭಿನಂದನೆಗಳು. ಯುವ ಅಂಕಿತ್‌ ಅವರ ಶ್ರೇಷ್ಠ ನಿರ್ವಹಣೆಗೆ ಕೂಡ ಎಂದು ಸೆಹವಾಗ್‌ ಟ್ವೀಟ್‌ ಮಾಡಿದ್ದಾರೆ. ಅಂಕಿತ್‌ ಈ ಐಪಿಎಲ್‌ನಲ್ಲಿ ಪಂಜಾಬ್‌ ಪರ 5 ವಿಕೆಟ್‌ಗಳ ಗೊಂಚಲನ್ನು ಪಡೆದ ಮೊದಲ ಬೌಲರ್‌ ಆಗಿದ್ದಾರೆ. 

ಸನ್‌ರೈಸರ್ ಯಾವುದೇ ಮೊತ್ತವನ್ನು ಸಮ ರ್ಥಿಸಿಕೊಳ್ಳಲು ಸಮರ್ಥರಾಗಿದ್ದಾರೆ. ರಶೀದ್‌ ಅವರ ಬೌಲಿಂಗ್‌ ಅತ್ಯದ್ಭುತ. ಆದರೆ ಕೌಲ್‌, ಸಂದೀಪ್‌ ಮತ್ತು ಥಂಪಿ ಕೂಡ ಉತ್ತಮ ರೀತಿಯಲ್ಲಿ ಒತ್ತಡವನ್ನು ನಿಭಾಯಿಸಿ ಪಂಜಾಬ್‌ ಓಟಕ್ಕೆ ಬ್ರೇಕ್‌ ನೀಡಿದ್ದಾರೆ. ಪಂಜಾಬ್‌ ವಿರುದ್ಧ ಈ ಅಲ್ಪ ಮೊತ್ತವನ್ನು ಸಮರ್ಥಿಸಿಕೊಂಡಿರುವುದು ಶ್ರೇಷ್ಠ ಪ್ರಯತ್ನ ಎಂದು ಮೊಹಮ್ಮದ್‌ ಕೈಫ್ ಟ್ವೀಟ್‌ ಮಾಡಿದ್ದಾರೆ.

ಆರನೇ ಸ್ಥಾನ
ಅಂಕಿತ್‌ ಅವರ ಈ ಸಾಧನೆಯಿಂದ ಅವರು ಐಪಿಎಲ್‌ ಇತಿಹಾಸದಲ್ಲಿ ಶ್ರೇಷ್ಠ ಬೌಲಿಂಗ್‌ ನಿರ್ವಹಣೆ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ. ಸೊಹೈಲ್‌ ತನ್ವೀರ್‌ ಅಗ್ರಸ್ಥಾನದಲ್ಲಿದ್ದಾರೆ. ಅವರು 2008ರಲ್ಲಿ ರಾಜಸ್ಥಾನ ಪರ 14 ರನ್ನಿಗೆ 6 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದರು.

ರಶೀದ್‌ ಶ್ರೇಷ್ಠ
ರಶೀದ್‌ ಖಾನ್‌ ಅವರ ಶ್ರೇಷ್ಠ ಬೌಲಿಂಗ್‌ನಿಂದಾಗಿ ಹೈದರಾಬಾದ್‌ ತಂಡವು ಪಂಜಾಬ್‌ ವಿರುದ್ಧ ನಂಬಲಾಗದ ಗೆಲುವು ಒಲಿಸಿಕೊಂಡಿದೆ. ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 19 ರನ್ನಿಗೆ ಮೂರು ವಿಕೆಟ್‌ ಕಿತ್ತು ಪಂಜಾಬ್‌ನ ಪತನಕ್ಕೆ ಕಾರಣರಾಗಿದ್ದರು. ಅವರ ನಿರ್ವಹಣೆ ಬಗ್ಗೆ ಟ್ವಿಟರ್‌ನಲ್ಲಿ ಬಹಳಷ್ಟು ಮೆಚ್ಚುಗೆಯ ಮಾತುಗಳು ಬಂದಿವೆ. ರಶೀದ್‌ ಖಾನ್‌ ಸಿಂಪ್ಲಿ ಬ್ರಿಲಿಯೆಂಟ್‌ ಎಂದು ಅಭಿಮಾನಿಯೊಬ್ಬರು ಟ್ವೀಟ್‌ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next