Advertisement

ಸೀತಾರಾಮ್ ಯೆಚೂರಿ ಪುತ್ರ ಆಶೀಷ್ ಯೆಚೂರಿ ಕೋವಿಡ್ ಗೆ ಬಲಿ!

08:51 AM Apr 22, 2021 | Team Udayavani |

ಹೊಸದಿಲ್ಲಿ: ಸಿಪಿಎಂನ ಹಿರಿಯ ನಾಯಕ ಸೀತಾರಾಮ್ ಯೆಚೂರಿ ಪುತ್ರ ಆಶೀಷ್ ಯೆಚೂರಿ ಇಂದು ಬೆಳಗ್ಗೆ ನಿಧನರಾದರು. 35 ವರ್ಷದ ಆಶೀಷ್ ಯೆಚೂರಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

Advertisement

ಈ ವಿಚಾರವನ್ನು ಸ್ವತಃ ಸೀತಾರಾಮ್ ಯೆಚೂರಿಯವರೇ ಖಚಿತ ಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನನ್ನ ಹಿರಿಯ ಪುತ್ರ ಆಶೀಷ್ ಯೆಚೂರಿ ಕೋವಿಡ್ 19 ಸೋಂಕಿನಿಂದ ಮೃತಪಟ್ಟ ಎಂದು ಹೇಳಲು ಅತೀವ ದುಖಃವಾಗುತ್ತಿದೆ. ನಮಗೆ ಭರವಸೆ ನೀಡಿದ ಎಲ್ಲರಿಗೂ ಮತ್ತು ಆತನಿಗೆ ಚಿಕಿತ್ಸೆ ನೀಡಿದ ವೈದ್ಯರು, ನರ್ಸ್ ಗಳು ಮತ್ತು ಇತರ ಕೋವಿಡ್ ವಾರಿಯರ್ಸ್ ಗೆ ಧನ್ಯವಾದಗಳು ಎಂದಿದ್ದಾರೆ.

ಕೋವಿಡ್ ಪಾಸಿಟಿವ್ ಆಗಿದ್ದ ಕಾರಣ ಆಶೀಚ್ ಯೆಚೂರಿ ಅವರು ಗುರುಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕಾಂಗ್ರೆಸ್ ನಾಯಕ ಶಶಿ ತರೂರ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next