Advertisement

ದೀಪಾವಳಿಗೆ ಅಯೋಧ್ಯೆಯಲ್ಲಿ ಬೆಳಗಲಿದೆ 5,100 ದೀಪ

10:38 AM Oct 14, 2019 | Team Udayavani |

ಅಯೋಧ್ಯೆ: ದೀಪಾವಳಿಯಂದು ಅಯೋಧ್ಯೆಯ ವಿವಾದಿತ ಜಾಗದಲ್ಲಿ ಸಾಧು- ಸಂತರು 5,100 ದೀಪಗಳನ್ನು ಬೆಳಗಿಸಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್‌ ಶನಿವಾರ ಘೋಷಿಸಿದೆ. ಆದರೆ ಅಯೋಧ್ಯೆಯ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವ ಕಾರಣ, ಈ ಪ್ರದೇಶದಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗೆ ಅವಕಾಶ ನೀಡಲಾಗದು ಎಂದು ಇಲ್ಲಿನ ಜಿಲ್ಲಾಡಳಿತ ಹೇಳಿದೆ.

Advertisement

ವಿವಾದಿತ ಪ್ರದೇಶದ ಉಸ್ತುವಾರಿ ಹೊತ್ತಿ ರುವ ಫೈಜಾಬಾದ್‌ನ ವಿಭಾಗೀಯ ಆಯುಕ್ತ ಮನೋಜ್‌ ಮಿಶ್ರಾರನ್ನು ಸಾಧುಗಳ ನಿಯೋಗ ವೊಂದು ಭೇಟಿಯಾಗಲಿದೆ. ಅನಂತರ ಸಾಧುಗಳು ವಿವಾದಿತ ಪ್ರದೇಶಕ್ಕೆ ತೆರಳಿ, ಶ್ರೀರಾಮನ ಮುಂದೆ ದೀಪಗಳನ್ನು ಹಚ್ಚಲಿದ್ದಾರೆ ಎಂದು ವಿಹಿಂಪ ವಕ್ತಾರ ಶರದ್‌ ಶರ್ಮಾ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next